ETV Bharat / state

ಯೋಗೀಶ್ ಗೌಡ ಕೊಲೆ ಪ್ರಕರಣ: ಸಿಬಿಐನಿಂದ ಕೆಎಎಸ್ ಅಧಿಕಾರಿ ಬಂಧನ, ಫುಲ್​ ಡ್ರಿಲ್ - ಕೆಎಎಸ್ ಅಧಿಕಾರಿಗೆ ಸಿಬಿಐ ಡ್ರಿಲ್,

ಧಾರವಾಡ ಜಿ.ಪಂ ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೆಎಎಸ್​ ಅಧಿಕಾರಿ ಸೋಮು ನ್ಯಾಮಗೌಡ ಅವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದು, ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.

CBI detained Somu Nyamagowda
ಸೋಮು ನ್ಯಾಮಗೌಡರನ್ನು ಧಾರವಾಡಕ್ಕೆ ಕರೆತಂದ ಸಿಬಿಐ ಅಧಿಕಾರಿಗಳು
author img

By

Published : Jul 8, 2021, 12:47 PM IST

Updated : Jul 8, 2021, 2:08 PM IST

ಧಾರವಾಡ: ಜಿಲ್ಲಾ ಪಂಚಾಯತಿ ‌ಸದಸ್ಯ ಯೋಗೀಶ್​ ಗೌಡ ಕೊಲೆ ಪ್ರಕರಣದಲ್ಲಿ ಸಿಬಿಐ ಅಧಿಕಾರಿಗಳು ಕೆಎಎಸ್ ಅಧಿಕಾರಿ ಸೋಮು ನ್ಯಾಮಗೌಡ ಅವರನ್ನು ಬಂಧಿಸಿದ್ದು, ಜಿಲ್ಲಾಸ್ಪತ್ರೆಗೆ ಕರೆತಂದು ಆರೋಗ್ಯ ತಪಾಸಣೆ ನಡೆಸಿದ ಬಳಿಕ ಧಾರವಾಡ ಉಪನಗರ ಪೊಲೀಸ್ ಠಾಣೆಗೆ ಕರೆ ತಂದು ವಿಚಾರಣೆ ಮುಂದುವರೆಸಿದ್ದಾರೆ.

ಬೆಳಗ್ಗೆ ಗದಗನಲ್ಲಿ ಸೋಮು‌ ನ್ಯಾಮಗೌಡ ಅವರನ್ನು ವಶಕ್ಕೆ ಪಡೆದುಕೊಂಡಿದ್ದ ಸಿಬಿಐ ಅಧಿಕಾರಿಗಳು ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ಕೆಲವೊತ್ತು ಡ್ರಿಲ್​ ನಡೆಸಿದರು. ಬಳಿಕ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ ಪರೀಕ್ಷೆ ನಡೆಸಿದ ಬಳಿಕ ಮೆಡಿಕಲ್ ತಪಾಸಣೆ ನಡೆಸಿದ್ದರು. ನಂತರ ಧಾರವಾಡ ಉಪನಗರ ಪೊಲೀಸ್ ಠಾಣೆಗೆ ಕರೆ ತಂದು ಪುನಃ ವಿಚಾರಣೆ ಮುಂದುವರೆಸಲಾಗಿದೆ. ಈ ವೇಳೆ ಸೋಮು ನ್ಯಾಮಗೌಡ ಕಣ್ಣೀರು ಹಾಕಿ ಕಣ್ಣೀರು ಒರೆಸಿಕೊಳ್ಳುತ್ತ ಸಾಗಿದರು.

ಸೋಮು ನ್ಯಾಮಗೌಡರನ್ನು ಧಾರವಾಡಕ್ಕೆ ಕರೆತಂದ ಸಿಬಿಐ ಅಧಿಕಾರಿಗಳು

ಇದಕ್ಕೂ ಮುನ್ನ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನ್ಯಾಮಗೌಡ ಅವರನ್ನು ಸಿಬಿಐ ಅಧಿಕಾರಿಗಳು ಧಾರವಾಡದ ಉಪನಗರ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದರು. ಬೆಳ್ಳಂಬೆಳಗ್ಗೆ ಗದಗದಲ್ಲಿ ವಶಕ್ಕೆ ಪಡೆದಿದ್ದ ಸಿಬಿಐ ಅಧಿಕಾರಿಗಳು, ಉಪನಗರ ಠಾಣೆಗೆ ಕರೆತಂದು ಡ್ರಿಲ್ ನಡೆಸಿದ್ದರು.

ಸೋಮು ನ್ಯಾಮಗೌಡ ಅವರು ವಿನಯ್ ಕುಲಕರ್ಣಿ ಸಚಿವರಾಗಿದ್ದಾಗ ಅವರಿಗೆ ಆಪ್ತ ಕಾರ್ಯದರ್ಶಿಯಾಗಿದ್ದರು. ಪ್ರಸ್ತುತ ಗದಗ ಎಪಿಎಂಸಿ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ಓದಿ : ಧಾರವಾಡ ಯೋಗೀಶ್ ಗೌಡ ಕೊಲೆ ಪ್ರಕರಣ: ಕೆಎಎಸ್ ಅಧಿಕಾರಿ ಸೋಮು ನ್ಯಾಮಗೌಡ ಸಿಬಿಐ ವಶಕ್ಕೆ

ಕೊಲೆಗೆ ಸಂಚು ರೂಪಿಸಿದಾಗ ನಡೆದಿರಬಹುದಾದ ಹಣದ ವ್ಯವಹಾರವನ್ನು ಸೋಮು ನಿರ್ವಹಿಸಿದ ಬಗ್ಗೆ ಸಿಬಿಐ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ. ಹಲವು ದಾಖಲೆಗಳನ್ನು ಮುಂದಿಟ್ಟುಕೊಂಡು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ ಎನ್ನಲಾಗ್ತಿದೆ.

Last Updated : Jul 8, 2021, 2:08 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.