ETV Bharat / state

ರೈತರಿಗೆ ಕಿರಿ ಕಿರಿ ಆಗದಂತೆ ಕೆಲಸ ನಿರ್ವಹಿಸಿ: ಪಶು ವೈದ್ಯರಿಗೆ ಸಚಿವ ಪ್ರಭು ಚವ್ಹಾಣ್ ಸೂಚನೆ ​

ಪಶುವೈದ್ಯರು ಹಳ್ಳಿಗಳಿಗೆ ತೆರಳಿ ಪಶು ಸಾಕಾಣಿಕೆದಾರರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಈ ನಿಟ್ಟಿನಲ್ಲಿ ಪ್ರತಿನಿತ್ಯ ಖುದ್ದಾಗಿ ವಾಟ್ಸಪ್ ಮೂಲಕ ತಮಗೆ ಮಾಹಿತಿ ಸಲ್ಲಿಸಬೇಕು. ನಿಮ್ಮ ಸಮಸ್ಯೆಗಳಿದ್ದರೆ ನನ್ನೆದುರು ಹೇಳಿ, ಆದರೆ ರೈತರ ಕರೆಗಳಿಗೆ ತಕ್ಷಣಕ್ಕೆ ಸ್ಪಂದಿಸುವ ಮನೋಭಾವವನ್ನು ವೈದ್ಯರು ಬೆಳೆಸಿಕೊಳ್ಳಬೇಕು ಎಂದು ಸಚಿವ ಪ್ರಭು ಚವ್ಹಾಣ್​ ಹೇಳಿದರು.

Minister Prabhu Chavhana
ಸಚಿವ ಪ್ರಭು ಚವ್ಹಾಣ
author img

By

Published : Nov 20, 2020, 7:18 AM IST

ಧಾರವಾಡ: ಪಶುಸಂಗೋಪನೆ ಮತ್ತು ಪಶುವೈದ್ಯ ಇಲಾಖೆಯು ಕೃಷಿ ಪೂರಕ ಚಟುವಟಿಕೆಗಳು, ಹೈನುಗಾರಿಕೆ ಮೂಲಕ ಉತ್ಪಾದನೆ ಚಟುವಟಿಕೆಗಳನ್ನು ಹೆಚ್ಚಿಸಲು ವಿಫುಲ ಅವಕಾಶ ಹೊಂದಿರುವ ಇಲಾಖೆಯಾಗಿದೆ. ಖಾಲಿ ಹುದ್ದೆಗಳ ಸಂಖ್ಯೆ ಅಧಿಕವಿದೆಯಾದರೂ ಇಲಾಖೆಯ ಯೋಜನೆ, ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವಲ್ಲಿ ಹಿನ್ನಡೆಯಾಗಬಾರದು ಎಂದು ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್​ ಹೇಳಿದರು.

ರಾಯಾಪುರದ ಕೆಎಂಎಫ್ ತರಬೇತಿ ಕೇಂದ್ರದಲ್ಲಿ ನಡೆದ ಜಿಲ್ಲೆಯ ಇಲಾಖಾ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿ, ಪಶುವೈದ್ಯರು ಹಳ್ಳಿಗಳಿಗೆ ತೆರಳಿ ಪಶು ಸಾಕಾಣಿಕೆದಾರರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಈ ನಿಟ್ಟಿನಲ್ಲಿ ಪ್ರತಿನಿತ್ಯ ಖುದ್ದಾಗಿ ವಾಟ್ಸಪ್ ಮೂಲಕ ತಮಗೆ ಮಾಹಿತಿ ಸಲ್ಲಿಸಬೇಕು. ನಿಮ್ಮ ಸಮಸ್ಯೆಗಳಿದ್ದರೆ ಹೇಳಿ ಆದರೆ ರೈತರ ಕರೆಗಳಿಗೆ ತಕ್ಷಣಕ್ಕೆ ಸ್ಪಂದಿಸುವ ಮನೋಭಾವವನ್ನು ವೈದ್ಯರು ಬೆಳೆಸಿಕೊಳ್ಳಬೇಕು ಎಂದರು.

ಉಪನಿರ್ದೇಶಕರು, ಸಹಾಯಕ ನಿರ್ದೇಶಕರು ಸೇರಿ ಎಲ್ಲಾ ಪಶುವೈದ್ಯಾಧಿಕಾರಿಗಳು ನಿರಂತರವಾಗಿ ಗ್ರಾಮೀಣ ಭಾಗಗಳಿಗೆ ತೆರಳಬೇಕು. ರೈತರು, ಪಶು ಸಾಕಾಣಿಕೆದಾರರಿಗೆ ಸಕಾಲಕ್ಕೆ ಔಷಧ ಒದಗಿಸಬೇಕು. ಚೀಟಿ ಬರೆದು ಖಾಸಗಿಯಾಗಿ ಖರೀದಿಸಲು ಹೇಳಬಾರದು. ವ್ಯಾಕ್ಸಿನ್ ಬಗ್ಗೆ ಅಧಿಕಾರಿಗಳು ಹೆಚ್ಚು ನಿರ್ಲಕ್ಷವಹಿಸುತ್ತಿರುವ ರಾಜ್ಯದ ವಿವಿಧ ಭಾಗಗಳಿಂದ ದೂರುಗಳು ಬಂದಿವೆ. ವ್ಯಾಕ್ಸಿನ್ ಹಾಗೂ ಚಿಕಿತ್ಸೆಯ ಬಗ್ಗೆ ನಿಷ್ಕಾಳಜಿ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.

ರೈತರ ಜೀವನಾಧಾರ ಅವರ ಜಾನುವಾರುಗಳು ಅವುಗಳ ಆರೋಗ್ಯ ಕಾಪಾಡುವುದು ನಮ್ಮ ಇಲಾಖೆಯ ಆದ್ಯ ಕರ್ತವ್ಯ ಆಗಬೇಕು. ಸರ್ಕಾರ ಜಾನುವಾರುಗಳ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದೆ. ಜಿಲ್ಲೆಯಲ್ಲಿ ಇಂತಹ ಅವ್ಯವಸ್ಥೆ ಆಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.

ಕೋವಿಡ್ ಸಮಯದಲ್ಲಿ ನೀವೆಲ್ಲ ಉತ್ತಮ ಕೆಲಸ ಮಾಡಿದ್ದೀರಿ ಎಂದು ಅಧಿಕಾರಿಗಳ ಕರ್ತವ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಪಶುಸಂಜೀವಿನಿ ಕಾರ್ಯನಿರ್ವಹಣೆಯ ಬಗ್ಗೆ ಮಾಹಿತಿ ಪಡೆದ ಸಚಿವರು, ಜಿಲ್ಲೆಯ ಎಲ್ಲಾ ರೈತರಿಗೆ ಈ ಯೋಜನೆಯ ಅನುಕೂಲ ಆಗಬೇಕು, ಲಂಪಿಸ್ಕಿನ್, ಕಾಲುಬಾಯಿ ರೋಗ, ಮೇವಿನ ಕಿಟ್, ಟೆಂಟ್ ವಿತರಣೆ, ಕುಕ್ಕುಟ, ರೈತ ಸಂಪರ್ಕ, ಪಶುಸಂಗೋಪನೆ ತರಬೇತಿ, ಜಿಲ್ಲೆಯ ಪಶುಸಂಪತ್ತು ಹೀಗೆ ಇಲಾಖೆಯ ಪ್ರಗತಿಯನ್ನು ಎಲ್ಲ ಆಯಾಮಗಳಲ್ಲಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.

ಪಶುಪಾಲನೆ ಮತ್ತು ಪಶುವೈದ್ಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ.ಪರಮೇಶ್ವರ ನಾಯಕ್, ಪ್ರಗತಿ ಸಾಧಿಸಿದ ಕುರಿತು ಸಚಿವರಿಗೆ ಮಾಹಿತಿ ನೀಡಿದರು. ಬಳಿಕ ವಕ್ಫ್ ಮತ್ತು ಹಜ್ ಇಲಾಖೆಗಳ ಪ್ರಗತಿ ಕುರಿತು ಮಾಹಿತಿ ಪಡೆದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.