ETV Bharat / state

ಮೊಟ್ಟೆ ಪ್ರಕರಣವನ್ನು ಎಷ್ಟರ ಮಟ್ಟಿಗೆ ತೆಗೆದುಕೊಂಡು ಹೋಗಬೇಕೆನ್ನುವುದು ಅವರಿಗೆ ಬಿಟ್ಟಿದ್ದು: ಸಿಎಂ - bommai reacts about egg hurling

ಒಂದು ಘಟನೆಯನ್ನು ಎಷ್ಟರ ಮಟ್ಟಿಗೆ ತೆಗೆದುಕೊಂಡು ಹೋಗಬೇಕು ಅನ್ನೋದು ಆಯಾ ರಾಜಕೀಯ ಪಕ್ಷಗಳಿಗೆ ಬಿಟ್ಟದ್ದು ಎಂದು ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದರು.

ಆ ಘಟನೆಯನ್ನು ಎಷ್ಟರ ಮಟ್ಟಿಗೆ ತೆಗೆದುಕೊಂಡು ಹೋಗಬೇಕೆನ್ನೋದು ಅವರಿಗೆ ಬಿಟ್ಟಿದ್ದು :ಬಸವರಾಜ ಬೊಮ್ಮಾಯಿ

author img

By

Published : Aug 21, 2022, 12:05 PM IST

Updated : Aug 21, 2022, 12:23 PM IST

ಹುಬ್ಬಳ್ಳಿ: ಈಗಾಗಲೇ ಮೊಟ್ಟೆ ಕೇಸ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದೇನೆ. ಅದು ತನಿಖೆಯಾಗಬೇಕು. ಒಂದು ಘಟನೆಯನ್ನು ಎಷ್ಟರ ಮಟ್ಟಿಗೆ ತೆಗೆದುಕೊಂಡು ಹೋಗಬೇಕು ಅನ್ನೋದು ಆಯಾ ರಾಜಕೀಯ ಪಕ್ಷಕ್ಕೆ ಬಿಟ್ಟದ್ದು. ಆದ್ರೆ, ರಾಜ್ಯದಲ್ಲಿ ಶಾಂತಿ ಮುಖ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದ ವಿಮಾನ‌ ನಿಲ್ದಾಣದಲ್ಲಿ ಮಾತನಾಡಿದ ಅವರು, ಸಾರ್ವಕರ್ ಬಗ್ಗೆ ಇಂದಿರಾ ಗಾಂಧಿ ಶ್ರೇಷ್ಠಪುತ್ರ ಅಂತಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಟಿಪ್ಪು-ಸಾರ್ವಕರ್ ಬಗ್ಗೆ ಪರ ವಿರೋಧ ಇದೆ. ಮೊದಲಿನಿಂದಲೂ ವೈಚಾರಿಕತೆಯಲ್ಲಿ ಭಿನ್ನಾಭಿಪ್ರಾಯ ಇದೆ. ಹಲವಾರು ಪ್ರಸಂಗಗಳಲ್ಲಿ ಸಾವರ್ಕರ್ ಅವರ ಬಗ್ಗೆ ಮಣಿಶಂಕರ್ ಅವರೂ ಮಾತನಾಡಿದ್ದಾರೆ. ಐತಿಹಾಸಿಕ ವಿಚಾರಗಳಲ್ಲಿ ಕೆಲವೊಂದರ ಮೇಲೆ ನಂಬಿಕೆ ಇದೆ, ಕೆಲವು ವಿಚಾರಗಳಿಗೆ ವಿರೋಧವಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವ ವಿಷಯವನ್ನು ಯಾವ ವೇದಿಕೆಯಲ್ಲಿ ವ್ಯಕ್ತಪಡಿಸಬೇಕು ಅನ್ನೋದು ನಮ್ಮೆಲ್ಲರ ಜವಾಬ್ದಾರಿ. ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರುವ ಕೆಲಸ ಎಂದೂ ಮಾಡಬಾರದು ಎಂದರು.

ಮೊಟ್ಟೆ ಪ್ರಕರಣವನ್ನು ಎಷ್ಟರ ಮಟ್ಟಿಗೆ ತೆಗೆದುಕೊಂಡು ಹೋಗಬೇಕೆನ್ನುವುದು ಅವರಿಗೆ ಬಿಟ್ಟಿದ್ದು: ಸಿಎಂ

ಮಹದಾಯಿ ಯೋಜನೆ ನೆನೆಗುದಿಗೆ ಬಿದಿಲ್ಲ: ಮಹದಾಯಿ ವಿಚಾರ ಈಗಾಗಲೇ ಬಹಳಷ್ಟು ಪ್ರಗತಿಯಾಗಿದೆ. ಅರಣ್ಯ ಇಲಾಖೆಯ ಅನುಮತಿ ಅಂತಿಮ ಘಟ್ಟದಲ್ಲಿದೆ. ಕೇಂದ್ರ ಜಲ ಆಯೋಗದಿಂದ ಪೈನಲ್ ಕ್ಲಿಯರೆನ್ಸ್ ಬರಬೇಕಿದೆ. ಎರಡೂ ಬಂದ ತಕ್ಷಣವೇ ಕಾಮಗಾರಿ ಆರಂಭ ಮಾಡುತ್ತೇವೆ ಎಂದು ಸಿಎಂ ತಿಳಿಸಿದರು.

ಹಾವೇರಿಯಲ್ಲಿ ವಕೀಲರ ಸಂಘದ ಕಟ್ಟಡ ಉದ್ಘಾಟನೆ ಆಮಂತ್ರಣ ಪತ್ರಿಕೆಯಲ್ಲಿ ಶಾಸಕ ಓಲೇಕಾರ ಹೆಸರು ಕೈಬಿಟ್ಟ ವಿಚಾರಕ್ಕೆ ಪ್ರತಿಕ್ರಿಯಿಸಿ, ಶಾಸಕ ನೆಹರು ಓಲೇಕಾರ ಅವರನ್ನು ಕಡೆಗಣಿಸಿಲ್ಲ. ಹೈಕೋರ್ಟ್ ಪ್ರೋಟೋಕಾಲ್ ಪ್ರಕಾರ ಅದು ಆಗುತ್ತದೆ ಎಂದು ಹೇಳಿದರು.

ಇದನ್ನೂ ಓದಿ: ಮೊಟ್ಟೆಯ ಮೂಲಕ ಸಿದ್ದರಾಮಯ್ಯರನ್ನು ಟಚ್​ ಮಾಡಲಾಗಿದೆ: ಸಚಿವ ಅಶೋಕ್​ ವ್ಯಂಗ್ಯ

Last Updated : Aug 21, 2022, 12:23 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.