ಹುಬ್ಬಳ್ಳಿ: ಬಿಜೆಪಿಯವರು ಮತ್ತೆ ಅಧಿಕಾರಕ್ಕೆ ಬರುತ್ತೇವೆ ಅಂತ ಹಗಲು ಕನಸು ಕಾಣುತ್ತಿದ್ದಾರೆ. ಅವರ ಕನಸು ನನಸಾಗುವದಿಲ್ಲ ಎಂದು ಸಿಎಂ ಅವರ ರಾಜಕೀಯ ಕಾರ್ಯದರ್ಶಿ ಕೋನರೆಡ್ಡಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇಂದು ಕುಂದಗೋಳ, ಚಿಂಚೋಳಿ ವಿದಾನಸಭಾ ಕ್ಷೇತ್ರಗಳ ಉಪಚುನಾವಣೆ ನಿಮಿತ್ತ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರ ಸಭೆ ಕರೆಯಲಾಗಿತ್ತು. ಸಭೆ ಬಳಿಕ ಮಾತನಾಡಿದ ಅವರು, ಶಿವಳ್ಳಿ ಅವರ ಅಕಾಲಿಕ ನಿಧನದಿಂದ ತೆರವುಗೊಂಡಿರುವ ಸ್ಥಾನವನ್ನು ಹೇಗೆ ತುಂಬಾಬೇಕು ಎಂಬುದರ ಕುರಿತು ರೂಪುರೇಷೆಗಳನ್ನು ರೂಪಿಸುವ ಕುರಿತು ಚರ್ಚೆ ನಡೆಸಲಾಯಿತು ಎಂದರು.
ಇನ್ನು ಚುನಾವಣೆಗೆ ಸಂಬಂಧಿಸಿದಂತೆ ಜಿಜೆಪಿಯವರು ಹಗಲು ಕನಸು ಕಾಣುತ್ತಿದ್ದಾರೆ. ಈ ಎರಡು ಕ್ಷೇತ್ರಗಳಲ್ಲಿಯೂ ನಾವೇ ಗೆಲ್ಲುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ರು.
ಯಡಿಯೂರಪ್ಪ ಅವರು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಸಿ, ಏನು ಅವರು ನಾವು ಇನ್ನೆರಡು ಸೀಟು ಗೆದ್ದರೆ 109 ಆಗುತ್ತದೆ ಎಂದಿದ್ದಾರೆ. ಇಂತಹ ಎಪಿಸೋಡ್ಗಳು 9 ಆಗಿದ್ದಾವೆ. ಹೊಳ್ಳ ಬಳ್ಳ ಕನಸು ಕಾಣಲು ಹೋಗಬೇಡಿ. ಈಗಾಗಲೇ ಸಮುದ್ರದಿಂದ ತೆಗೆದು ಹಾಕಿದ ಮೀನಾಗಿದ್ದಾರೆ. ಪದೇ ಪದೆ ಅದೇ ವಿಷಯ ಮಾತನಾಡುವುದರಿಂದ ಏನು ಆಗುವುದಿಲ್ಲ ಎಂದು ವ್ಯಂಗ್ಯವಾಡಿದರು.