ETV Bharat / state

ದೇವಸ್ಥಾನ ಮೂಲೆಯಲ್ಲೇ ಬದುಕುವಂತಾಯಿತು ಬಾಣಂತಿಯ ಸ್ಥಿತಿ..

ಎಡೆಬಿಡದೆ ಸುರಿದ ಮಳೆಯಿಂದಾಗಿ ಮನೆ ಕುಸಿದು ಬಿದ್ದು, ಮುದ್ದಾದ ಹಸುಗೂಸು ಹಾಗೂ ಬಾಣಂತಿ ದೇವಾಲಯದಲ್ಲಿ ವಾಸಿಸುವಂತಾಗಿದೆ.

ದೇವಸ್ಥಾನದಲ್ಲಿ ವಾಸಿಸುತ್ತಿರುವ ಬಾಣಂತಿ
author img

By

Published : Aug 16, 2019, 6:52 PM IST

ಹುಬ್ಬಳ್ಳಿ: ಕಳೆದ ವಾರ ಸುರಿದ ಭೀಕರ ಮಳೆಯಿಂದಾಗಿ ಮನೆ ಕುಸಿದು ಬಿದ್ದ ಪರಿಣಾಮ ಬಾಣಂತಿ ಹಸುಗೂಸಿನ ಜೊತೆ ದೇವಸ್ಥಾನದಲ್ಲಿ ವಾಸಿಸುವ ಪರಿಸ್ಥಿತಿ ಎದುರಾಗಿದೆ.

ದೇವಸ್ಥಾನದಲ್ಲಿ ವಾಸಿಸುತ್ತಿರುವ ಬಾಣಂತಿ..

ತಾಲೂಕಿನ ಅಮರಗೋಳ ಗ್ರಾಮದಲ್ಲಿನ ನಿಂಗಪ್ಪ ಲದ್ದಿ ಕುಟುಂಬ ಭಾರಿ ಮಳೆಗೆ ನಲುಗಿದೆ. ಇರೋ ಮನೆಯೊಂದು ಮಳೆಗೆ ಕುಸಿದುಬಿದ್ದಿದೆ. ನೆಲೆ ಕಳೆದುಕೊಂಡ ಈ ಕುಟುಂಬ ಸದ್ಯ ಗ್ರಾಮದ ಕೊಟ್ಟೂರು ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಆಶ್ರಯ ಪಡೆದಿದೆ. ಇವರು ಮಾತ್ರವಲ್ಲದೇ 20 ದಿನದ ಬಾಣಂತಿಯನ್ನು ಕಟ್ಟಿಕೊಂಡು ಅಲ್ಲಿಗೆ ತೆರಳಿದ್ದಾರೆ. ಕಳೆದ 10 ದಿನಗಳಿಂದ ಪುನರ್ವಸತಿ ಕೇಂದ್ರದಿಂದ ಇವರಿಗೆ ಆಹಾರ ಪೂರೈಕೆ ಮಾಡಲಾಗುತ್ತಿದ್ದು, ನವಜಾತ ಶಿಶುವನ್ನು ಪಕ್ಕದ ಅಂಗನವಾಡಿ ಕೇಂದ್ರದಲ್ಲಿ ಸ್ನಾನ ಮತ್ತಿತರ ದಿನನಿತ್ಯದ ಕಾರ್ಯಗಳನ್ನು ಮಾಡಲಾಗುತ್ತಿದೆ.

ಹೆರಿಗೆಗಾಗಿ ತವರುಮನೆಗೆ ಬಂದ ಮಗಳನ್ನು ಈ ರೀತಿ ನೋಡಿಕುಳ್ಳುವ ಪರಿಸ್ಥಿತಿ ಬಂತಲ್ಲಾ ಎಂಬುದು ಕುಟುಂಬದವರ ಸಂಕಟ. ನವಜಾತ ಶಿಶುವಿನೊಂದಿಗೆ ಬಾಣಂತಿಯು ಸೂರಿಲ್ಲದೇ ದೇವಸ್ಥಾನದಲ್ಲಿ ವಾಸಿಸುತ್ತಿರುವುದು ಬೇಸರದ ಸಂಗತಿ. ಜಿಲ್ಲಾಡಳಿತ ಹೆಚ್ಚಿನ ಬಾಣಂತಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕಿದೆ.

Intro:ಹುಬ್ಬಳ್ಳಿ-04

ಎಡೆಬಿಡದೆ ಸುರಿದ ಮಳೆ ಮುದ್ದಾದ ಹಸುಗೂಸು ಹಾಗೂ ಬಾಣಂತಿಯನ್ನು ದೇವಾಲಯ ಸೇರುವಂತೆ ಮಾಡಿದೆ.‌
ಹೌದು. ದೇವಸ್ಥಾನದ ಮೂಲೆಯಲ್ಲಿ ಆಶ್ರಯ ಪಡೆಯುತ್ತಿರುವ ಬಾಣಂತಿ ಹೆಸರು ಶಿಲ್ಪಾ.‌
ತಾಲೂಕಿನ ಅಮರಗೋಳ ಗ್ರಾಮದವರು. ರಣ ಭೀಕರ ಮಳೆಯಿಂದ ಮನೆ ಕುಸಿದು ಬಿದ್ದಿದೆ. ಹೀಗಾಗಿ 20 ದಿನದ ಬಾಣಂತಿಯನ್ನು ಕಟ್ಟಿಕೊಂಡು ಕುಟುಂಬ ಗ್ರಾಮದ ಕೊಟ್ಟೂರು ಬಸವೇಶ್ವರ ದೇವಸ್ಥಾನದಲ್ಲಿ ಆಶ್ರಯ ಪಡೆದಿದೆ. ಕಳೆದ 10 ದಿನಗಳಿಂದ ಪುನರ್ವಸತಿ ಕೇಂದ್ರದಿಂದ ಆಹಾರ ಪೂರೈಕೆ ಮಾಡಲಾಗುತ್ತಿದೆ. ಆದ್ರೆ ಬಾಣಂತಿಯನ್ನು ಆರೈಕೆ ಮಾಡೋದು ಬಹಳ ಕಷ್ಟವಾಗಿದೆ. ನವಜಾತ ಶಿಶುವನ್ನು ಪಕ್ಕದ ಅಂಗನವಾಡಿ ಕೇಂದ್ರದಲ್ಲಿ ಸ್ನಾನ ಮಾಡಿಸಲಾಗುತ್ತಿದೆ.
ನಿಂಗಪ್ಪ ಲದ್ದಿ ಹಾಗೂ ಈರವ್ವ ದಂಪತಿಗಳಿಗೆ ಮೂವರು ಮಕ್ಕಳು, ಇಬ್ಬರು ಹೆಣ್ಣು ಮಕ್ಕಳು ಇನ್ನೋರ್ವ ಗಂಡು ಮಗು ಆತ ಚಿಕ್ಕವನು. ದೊಡ್ಡ ಮಗಳು ಶಿಲ್ಪಾ ಇವರನ್ನು ಧಾರವಾಡ ತಾಲೂಕಿನ ಮರೆವಾಡ ಗ್ರಾಮಕ್ಕೆ ಮದುವೆ ಮಾಡಿ ಕೊಡಲಾಗಿದೆ. ಮಗಳು ಹೆರಿಗೆಗಾಗಿ ತವರು ಮನೆಯಾದ ಅಮರಗೋಳಕ್ಕೆ ಬಂದಿದ್ದಾಳೆ. ಚೆನ್ನಾಗಿದ್ದ ಮನೆ ಸತತವಾಗಿ ಸುರಿದ ಮಳೆಯಿಂದ ಮನೆ ಕುಸಿದು ಬಿದ್ದಿದೆ. ದಿಕ್ಕು ಕಾಣದೇ ದೇವಸ್ಥಾನದಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಸಧ್ಯ ಪಾಲಿಕೆ ಮಾಜಿ ಸದಸ್ಯ ಮಲ್ಲಿಕಾರ್ಜುನ ಹೊರಕೇರಿ ಬಾಣಂತಿಯ ತಾತ್ಕಾಲಿಕವಾಗಿ ವ್ಯವಸ್ಥೆ ಮಾಡಿದ್ದಾರೆ.
ಪುನರ್ವಸತಿ ಕೇಂದ್ರದಲ್ಲಿನ ನಿರಾಶ್ರಿತರು ತಮ್ಮ ತಮ್ಮ ಮನೆಗಳಿಗೆ ವಾಪಸ್ಸ್ ಹೋಗುತ್ತಿದ್ದಾರೆ‌. ಸಂಪೂರ್ಣ ಮನೆ ಬಿದ್ದವರು ಮಾತ್ರ ಅತಂತ್ರವಾಗಿದ್ದಾರೆ. ಆದ್ರೆ ಬಾಣಂತಿಯನ್ನು ಹೇಗೆ ಆರೈಕೆ ಮಾಡಬೇಕು ಎನ್ನುವ ಚಿಂತೆಯಲ್ಲಿ ಲದ್ದಿ ಕುಟುಂಬ ಇದೆ. ಇನಾದರೂ ಜಿಲ್ಲಾಡಳಿತ ಹೆಚ್ಚಿನ ಸಹಾಯ ಮಾಡಿ ಬಾಣಂತಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕಾಗಿದೆ.Body:H B GaddadConclusion:Etv hubli
ETV Bharat Logo

Copyright © 2024 Ushodaya Enterprises Pvt. Ltd., All Rights Reserved.