ಧಾರವಾಡ: ಹುಬ್ಬಳ್ಳಿ ಧಾರವಾಡ ಪಶ್ಚಿಮ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅರವಿಂದ ಬೆಲ್ಲದ ಅವರ ಮಕ್ಕಳು ಇದೇ ಮೊದಲ ಬಾರಿ ವೋಟ್ ಮಾಡಿ ಜನತಂತ್ರದ ಹಬ್ಬಕ್ಕೆ ಸಾಕ್ಷಿಯಾದರು. ಧಾರವಾಡ ನಗರದ ಬುದ್ಧ ರಕ್ಕಿತ ಶಾಲೆಯಲ್ಲಿ ಅವರ ತಂದೆ, ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಹಾಗೂ ಅರವಿಂದ ಬೆಲ್ಲದ ಅವರ ಪತ್ನಿ ಹಾಗೂ ಮಕ್ಕಳ ಜೊತೆ ಆಗಮಿಸಿ ಮತದಾನ ಮಾಡಿದರು.
ಬಳಿಕ ಅರವಿಂದ ಬೆಲ್ಲದ ಮಾಧ್ಯಮದವರೊಂದಿಗೆ ಮಾತನಾಡಿ, ಎಲ್ಲರೂ ಮತದಾನ ಮಾಡಬೇಕು. ವಾತಾವರಣ ಚನ್ನಾಗಿದೆ, ಜನ ಉತ್ಸುಕತೆಯಿಂದ ಮತದಾನ ಮಾಡುತಿದ್ದಾರೆ. ಸತತವಾಗಿ ಮತದಾನಕ್ಕೆ ಮತದಾರರು ಬರುತಿದ್ದಾರೆ. 2013 ರಿಂದ ನಾನು ನೋಡುತಿದ್ದೆನೆ, ಜನರ ಉತ್ಸಾಹ ಹೆಚ್ಚಿದೆ. ಬೇರೆ ಬೇರೆ ಊರಿಗೆ ಜನರು ಉದ್ಯೋಗಕ್ಕೆ ಹೋಗಿದ್ದರಿಂದ ಹಾಗೂ ವೋಟರ್ ಐಡಿಯ ತಪ್ಪಿನಿಂದ ಮತದಾನ ಸ್ಪಲ್ಪ ಕಡಿಮೆಯಾಗುತ್ತಿದೆ. ಮತದಾನ ಇರುವ ಕಾರಣ ಮಳೆ ಬಂದು ಅಡ್ಡಿಯಾಗಲ್ಲ ಅಂದುಕೊಂಡಿರುವೆ ಎಂದರು.
'ಮೊದಲ ಬಾರಿ ವೋಟ್ ಮಾಡಿದ್ದು ಖುಷಿ ಆಗಿದೆ. ಅದು ನಾನು ನನ್ನ ತಂದೆಯ ಜೊತೆ ಬಂದು ವೋಟ್ ಮಾಡಿದ್ದು ಡಬಲ್ ಖುಷಿ ತರಿಸಿದೆ. ನಮ್ಮ ತಂದೆ ಮಾಡಿದ ಅಭಿವೃದ್ಧಿ ಕಾರ್ಯಗಳು ಅವರ ಕೈಹಿಡಿಯಲಿದೆ. ಎಷ್ಟೋ ಜನ ಪ್ರಚಾರಕ್ಕೆ ಬರಬೇಡಿ, ನಾವು ನಿಮ್ಮ ತಂದೆಗೆ ವೋಟ್ ಮಾಡುತ್ತೇವೆ ಎಂದು ಹೇಳುತ್ತಿದ್ದರು. ಅದನ್ನು ಕೇಳಿ ಸಂತೋಷವಾಯಿತು'.
ಆಗಸ್ತ್ಯ ಬೆಲ್ಲದ - ಬೆಲ್ಲದ ಮಗ
'ನಾನು ಕೂಡ ಇದೇ ಮೊದಲ ಬಾರಿಗೆ ವೋಟ್ ಮಾಡಿದೆ. ಸದ್ಯ ನಾನು ಅಮೆರಿಕದಲ್ಲಿ ಕೆಲಸ ಮಾಡುತ್ತಿರುವೆ. ಮತದಾನ ಇದ್ದ ಕಾರಣ ಅಲ್ಲಿಂದ ಕರ್ನಾಟಕಕ್ಕೆ ಬಂದು ವೋಟ್ ಮಾಡಿದೆ. ಉತ್ತಮ ಆಡಳಿತಕ್ಕಾಗಿ ಮತದಾನ ಅವಶ್ಯಕ. ಹಾಗಾಗಿ ಎಲ್ಲರೂ ತಪ್ಪದೇ ಮತದಾನ ಮಾಡಿ. ಅಭಿವೃದ್ಧಿ ಬಗ್ಗೆ ಕ್ಷೇತ್ರದ ಜನರಿಗೆ ಗೊತ್ತಿದೆ. ಹಾಗಾಗಿ ಈ ಬಗ್ಗೆ ಹೆಚ್ಚಿಗೆ ಹೇಳಬೇಕಿಲ್ಲ'.
ಪ್ರಾಚಿ ಬೆಲ್ಲದ - ಬೆಲ್ಲದ ಮಗಳು
ಮುನೇನಕೊಪ್ಪ ಮತದಾನ: ನವಲಗುಂದ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಂಕರ್ ಪಾಟೀಲ್ ಮುನೇನಕೊಪ್ಪ ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದರು. ನವಲಗುಂದ ತಾಲೂಕಿನ ಸ್ವಗ್ರಾಮ ಅಮರಗೋಳದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪತ್ನಿ ಪ್ರಭಾವತಿ ಅವರೊಂದಿಗೆ ಸರತಿ ಸಾಲಿನಲ್ಲಿ ನಿಂತು ಗ್ರಾಮಸ್ಥರ ಜೊತೆಗೆ ಮತದಾನ ಮಾಡಿದರು.
ಇದನ್ನೂ ಓದಿ: ಮೊದಲ ಬಾರಿ ಮತದಾನ ಮಾಡಿ ಜನತಂತ್ರದ ಹಬ್ಬಕ್ಕೆ ಸಾಕ್ಷಿಯಾದ ಉತ್ಸಾಹಿ ಯುವಕ - ಯುವತಿಯರು
ಶೃತಿ ಎಂಬ ಯುವತಿ ಕೂಡ ಇದೇ ಮೊದಲ ಬಾರಿಗೆ ಮತದಾನ ಮಾಡಿ ಜನತಂತ್ರದ ಈ ಹಬ್ಬಕ್ಕೆ ಸಾಕ್ಷಿಯಾದರು. ಮತದಾನದ ಬಳಿಕ ಅವರು ಖುಷಿ ಹಂಚಿಕೊಂಡರು. 'ಮೊದಲ ಬಾರಿಗೆ ಮತದಾನ ಮಾಡಿದ್ದು ಖುಷಿ ತರಿಸಿದೆ. ಮತದಾನ ನಮ್ಮ ಹಕ್ಕು. ಜವಬ್ದಾರಿ ಯುವತಿ - ಯುವಕರೆಲ್ಲರೂ ಮತದಾನ ಮಾಡುವ ಮೂಲಕ ಜನತಂತ್ರ ಕರ್ತವ್ಯ ನಿಭಾಯಿಸಿಬೇಕು. ಇಂದು ಮತದಾನ ಮಾಡಿ ನಾನು ನನ್ನ ಹಕ್ಕನ್ನು ಚಲಾಯಿಸಿದ್ದೇನೆ. ಹಾಗೇ ಎಲ್ಲರೂ ಮತದಾನ ಮಾಡಬೇಕು' ಎಂದು ಯುವತಿ ಶೃತಿ ಮನವಿ ಮಾಡಿಕೊಂಡರು.