ETV Bharat / state

ಗಣೇಶ ಮೂರ್ತಿ ಪ್ರತಿಷ್ಠಾಪನೆ ಶತ ಸಿದ್ದ: ಶಾಸಕ ಅರವಿಂದ ಬೆಲ್ಲದ್​ - ಹುಬ್ಬಳ್ಳಿ ಈದ್ಗಾ ಗಣೇಶೋತ್ಸವ

ಹಿಂದಿನ ವರ್ಷದಂತೆ ಈ ಬಾರಿಯೂ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ಮಾಡುವುದು ಖಚಿತ ಎಂದು ಶಾಸಕ ಅರವಿಂದ ಬೆಲ್ಲದ್​ ಹೇಳಿದ್ದಾರೆ.

ಶಾಸಕ ಅರವಿಂದ ಬೆಲ್ಲದ್​
ಶಾಸಕ ಅರವಿಂದ ಬೆಲ್ಲದ್​
author img

By ETV Bharat Karnataka Team

Published : Sep 13, 2023, 5:01 PM IST

ಹುಬ್ಬಳ್ಳಿ: ಈದ್ಗಾ ಮೈದಾನದಲ್ಲಿ ಹಿಂದಿನ ವರ್ಷ ಗಣಪತಿ ಇಟ್ಟು ಆಚರಣೆ ಮಾಡಿದ್ದೇವೆ. ಈ ವರ್ಷವು ಕೂಡ ಗಣಪತಿ ಪ್ರತಿಷ್ಠಾಪನೆ ಮಾಡಿ ಆಚರಣೆ ಮಾಡಬೇಕು ಎಂದುಕೊಂಡಿದ್ದಾರೆ. ಆದರೇ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಗಣಪತಿ ಪ್ರತಿಷ್ಠಾಪನೆಗೆ ಅವಕಾಶ ಕೊಡುತ್ತಿಲ್ಲ ಎಂದು ಶಾಸಕ ಅರವಿಂದ ಬೆಲ್ಲದ್​ ಆರೋಪಿಸಿದ್ದಾರೆ.

ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ‌ಮಾತನಾಡಿದ ಅವರು, ಗಣಪತಿ ಪ್ರತಿಷ್ಠಾಪನೆ ಕುರಿತು ಸರ್ಕಾರಕ್ಕೆ ಪತ್ರ ಬರೆದಿದ್ದೇವೆ. ಆದರೆ ಅದಕ್ಕೆ ಯಾವುದೇ ಉತ್ತರ ಬಂದಿಲ್ಲ. ರಾಣಿ ಚನ್ನಮ್ಮ (ಈದ್ಗಾ ಮೈದಾನ) ಮಹಾನಗರ ಪಾಲಿಕೆಯ ಜಾಗ. ಕಾಂಗ್ರೆಸ್ ಸರ್ಕಾರ ಇರೋದರಿಂದ ಅಧಿಕಾರಿಗಳ ಮೇಲೆ ಒತ್ತಡ ಹಾಕಲಾಗುತ್ತಿದೆ. ಆದರೆ ಯಾರೇ ವಿರೋಧ ಮಾಡಿದರೂ, ಪೂರ್ವದಲ್ಲಿ ಸೂರ್ಯ ಉದಯಿಸುವುದು ಎಷ್ಟು ಸತ್ಯವೋ ಗಣೇಶ ಮೂರ್ತಿ ಪ್ರತಿಷ್ಟಾಪನೆ ಮಾಡುವುದು ಕೂಡ ಅಷ್ಟೇ ಸತ್ಯ ಎಂದರು.

ಕೆಲ ಸಂಘಟನೆಗಳು ಗಣಪತಿ ಪ್ರತಿಷ್ಠಾಪನೆಗೆ ಅವಕಾಶ ಕೊಡಬಾರದು ಎಂದು ಮನವಿ ಕೊಟ್ಟ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈ ಸಂಘಟನೆಗಳಿಗೆ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದರೆ ಕೊಂಬು ಬರುತ್ತವೆ. ರಾಜ್ಯ ಸರ್ಕಾರ ಪರವಾನಗಿ ಕೊಡದಿದ್ದರೂ ಗಣಪತಿ ಪ್ರತಿಷ್ಠಾಪನೆ ಮಾಡೇ ಮಾಡುತ್ತಾರೆ. ಈದ್ಗಾ ಮೈದಾನ ಮಹಾನಗರ ಪಾಲಿಕೆ ಆಸ್ತಿ, ಪಾಲಿಕೆ ನಿರ್ಧಾರ ತೆಗೆದುಕೊಳ್ಳುತ್ತದೆ. ಈಗಾಗಲೇ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಠರಾವು ಪಾಸ್ ಮಾಡಲಾಗಿದೆ. ಗಣಪತಿ ಕುರಿಸುವುದಂತೂ ಖಚಿತ. ಆದಷ್ಠು ಬೇಗ ಪ್ರತಿಷ್ಟಾಷ್ಠಾಪನೆಗೆ ಪಾಲಿಕೆ ಪರವಾನಗಿ ಕೊಡದಿದ್ದರೆ ಹಿಂದೂ ಸಂಘಟನೆಗಳು ಮುಂದಿನ ಕ್ರಮ ತೆಗೆದುಕೊಳ್ಳುತ್ತವೆ ಎಂದರು.

ಈದ್ಗಾದಲ್ಲಿ ಗಣೇಶೋತ್ಸವಕ್ಕೆ ಅವಕಾಶ ನೀಡಬಾರದು: ಹುಬ್ಬಳ್ಳಿ 'ಈದ್ಗಾ ಮೈದಾನ'ದಲ್ಲಿ ಗಣೇಶೋತ್ಸವ ಆಚರಿಸಲು ಮುಂದಾಗಿದ್ದು, ಅಂತಹ ಧಾರ್ಮಿಕ ಆಚರಣೆಗೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು. ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಆಗ್ರಹಿಸಿ ಸೆಪ್ಟೆಂಬರ್ 15 ರಂದು ಧಾರವಾಡದ ಜಿಲ್ಲಾಧಿಕಾರಿ ಬಳಿ ಪ್ರತಿಭಟನೆ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ವಿವಿಧ ದಲಿತ ಸಂಘ - ಸಂಸ್ಥೆಗಳ ಮಹಾಮಂಡಳಿ ಮುಖಂಡರಾದ ಗುರುನಾಥ ಉಳ್ಳಿಕಾಶಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ಸರ್ಕಾರ ಕೋಮು ಗಲಭೆಗೆ ಪ್ರಚೋದನೆ ನೀಡುವಂತಹ ಸರ್ಕಾರವಿತ್ತು. ಹೀಗಾಗಿ ಅವಕಾಶ ನೀಡಿತ್ತು. ಈ ಬಾರಿ ಸರ್ಕಾರ ಇಂತಹ ಕೋಮುಗಲಭೆ ಉಂಟಾಗುವ ಆಚರಣೆಗೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು. ಈಗಿನ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯನ್ನು 300ವರ್ಷಗಳಿಂದ ಮಂಜುನಾಥಸ್ವಾಮಿ ದೇವಸ್ಥಾನದ ಜಾಗವಾಗಿದೆ. ಆ ಜಾಗವನ್ನು ಪೊಲೀಸರು ಅತಿಕ್ರಮಣ ಮಾಡಿ ಅಲ್ಲಿ ಪೊಲೀಸ್ ಠಾಣೆ ನಿರ್ಮಿಸಿದ್ದಾರೆ.

ಆಗ ಹಿಂದೂಗಳು ಬಂದು ಪ್ರತಿಭಟನೆ ಮಾಡಲಿಲ್ಲ. ಪಾಲಿಕೆ ಜಾಗದಲ್ಲಿ ಮಾತ್ರ (ಈದ್ಗಾ) ಮೈದಾನದಲ್ಲಿ ಗಣೇಶನ ಪ್ರತಿಷ್ಠಾಪನೆಗೆ ಮುಂದಾಗುತ್ತಿದ್ದಾರೆ. ಈ ಹಿಂದೆ ಡಾ. ಅಂಬೇಡ್ಕರ್ ಮೈದಾನದಲ್ಲಿ ಆರ್.ಎಸ್.ಎಸ್ ನವರು ಬೃಹತ್ ಪಥಸಂಚಲನ ಮಾಡಿದ್ದಾರೆ. ಯಾಕೆ ಆ ಜಾಗದಲ್ಲಿ ಗಣೇಶನ ಪ್ರತಿಷ್ಠಾಪನೆ ಮಾಡುವುದಿಲ್ಲ. ಅಲ್ಲಿ ಗಣೇಶನನ್ನು ಪ್ರತಿಷ್ಠಾಪನೆ ಮಾಡುವುದಾದರೇ ನಾನೇ ಪೆಂಡಾಲ್ ಹಾಕಿಸಿಕೊಡುವುದಾಗಿ ತಿಳಿಸಿದರು.

ಈದ್ಗಾ ಮೈದಾನದಲ್ಲಿ ಗಣೇಶನ ಪ್ರತಿಷ್ಠಾಪನೆಗೆ ಮುಂದಾಗುವುದು ಹಿಂದೂ ಧರ್ಮದ ಭಾಗವಲ್ಲವಾದ್ದರಿಂದ ಮತ್ತು ಕೋಮು ಸೌಹಾರ್ದತೆಗೆ ಚ್ಯುತಿವುಂಟಾಗುವ ನಿಟ್ಟಿನಲ್ಲಿ ಜನರಲ್ಲಿ ಆತಂಕದ ವಾತಾವರಣ ಛಾಯೆ ಮೂಡುವುದರಿಂದ ಗಣೇಶನ ಪ್ರತಿಷ್ಠಾಪನೆಗೆ ಅವಕಾಶ ಕಲ್ಪಿಸಬಾರದು ಎಂದು ಆಗ್ರಹಪಡಿಸಿ, ಜಿಲ್ಲಾಧಿಕಾರಿ, ಹು-ಧಾ ಪೊಲೀಸ್ ಆಯುಕ್ತರಿಗೆ ಮನವಿ ನೀಡಲಾಗುವುದು ಎಂದರು.

ಇದನ್ನೂ ಓದಿ: ಧರ್ಮ ಮತ್ತು ವಿಜ್ಞಾನ ಜೊತೆಯಾಗಿಯೇ ಸಾಗಬೇಕು: ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ಕರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.