ETV Bharat / state

ಕೊರೊನಾ ಸೋಂಕಿತರ ಟ್ರಾವೆಲ್​​ ಹಿಸ್ಟರಿ ಪತ್ತೆಗೆ ಬಂತು ಆ್ಯಪ್​: ಧಾರವಾಡ ವಿದ್ಯಾರ್ಥಿಯ ಆವಿಷ್ಕಾರಕ್ಕೆ ಪಿಎಂ ಕಚೇರಿಯಿಂದ ಸ್ಪಂದನೆ

ಧಾರವಾಡದ ವಿದ್ಯಾರ್ಥಿಯೊಬ್ಬ ಕೊರೊನಾ ಸೋಂಕಿತ ವ್ಯಕ್ತಿಯ ಟ್ರಾವೆಲ್​ ಹಿಸ್ಟರಿ ಟ್ರ್ಯಾಕ್ ಮಾಡಬಲ್ಲ ಆ್ಯಪ್​ ಅಭಿವೃದ್ಧಿಪಡಿಸಿದ್ದಾನೆ. ಇದು ಕೊರೊನಾ ವಿರುದ್ಧದ ಹೋರಾಟಕ್ಕೆ ನೆರವಾಗಲಿದೆ. ಧಾರವಾಡದ ಜೆಎಸ್ಎಸ್ ಸೆಂಟ್ರಲ್ ಸ್ಕೂಲ್​​ನ 10ನೇ ತರಗತಿ ವಿದ್ಯಾರ್ಥಿ ಮನೋಜ್​ ಶಿರಹಟ್ಟಿ ಆ್ಯಪ್ ಆವಿಷ್ಕಾರ ಮಾಡಿದ್ದು, ಪ್ರಧಾನಮಂತ್ರಿ ಕಚೇರಿಯ ಗಮನ ಸೆಳೆದಿದೆ.

App for Travel History Detection of Corona Infectet people: invented  by10th Class student
ಕೊರೊನಾ ಸೋಂಕಿತನ ಟ್ರಾವೆಲ್​​ ಹಿಸ್ಟರಿ ಪತ್ತೆಗೆ ಆ್ಯಪ್​: 10ನೇ ತರಗತಿ ಪೋರನ ಸಾಧನೆ
author img

By

Published : Apr 28, 2020, 5:48 PM IST

ಧಾರವಾಡ: ಕೊರೊನಾ ವೈರಸ್ ಭೀತಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಆದ್ರೆ ಈ ವೈರಸ್ ತಡೆಗಟ್ಟಲು ಸರ್ಕಾರ ಇನ್ನಿಲ್ಲದ ಶ್ರಮವಹಿಸುತ್ತಿದೆ. ಸೋಂಕಿತ ವ್ಯಕ್ತಿಯ ಟ್ರಾವೆಲ್ ಹಿಸ್ಟರಿ ಟ್ರ್ಯಾಕ್ ಮಾಡುವುದೇ ಜಿಲ್ಲಾಡಳಿತಕ್ಕೆ ಮೊದಲ ಸವಾಲು ಎನ್ನುವಂತಾಗಿತ್ತು. ಆದರೆ ಈ ಸಮಸ್ಯೆಗೆ ಈಗ ಸುಲಭ ಉಪಾಯವೊಂದು ಸಿಕ್ಕಿದೆ.

ಹೌದು, ನಗರದ 10 ನೇ ತರಗತಿ ವಿದ್ಯಾರ್ಥಿಯೊಬ್ಬ ಕೊರೊನಾ ಸೋಂಕಿತ ವ್ಯಕ್ತಿಯ ಟ್ರಾವೆಲ್​ ಹಿಸ್ಟರಿ ಟ್ರ್ಯಾಕ್ ಮಾಡಬಲ್ಲ ಆ್ಯಪ್​ ಅಭಿವೃದ್ಧಿಪಡಿಸಿದ್ದು, ಕೊರೊನಾ ವಿರುದ್ಧದ ಹೋರಾಟಕ್ಕೆ ಇದು ನೆರವಾಗಲಿದೆ.

ಕೊರೊನಾ ಸೋಂಕಿತನ ಟ್ರಾವೆಲ್​​ ಹಿಸ್ಟರಿ ಪತ್ತೆಗೆ ಆ್ಯಪ್​: 10ನೇ ತರಗತಿ ಪೋರನ ಸಾಧನೆ

ಜೆಎಸ್ಎಸ್ ಸೆಂಟ್ರಲ್ ಸ್ಕೂಲ್​​ನ 10ನೇ ತರಗತಿ ವಿದ್ಯಾರ್ಥಿ ಮನೋಜ್​ ಶಿರಹಟ್ಟಿ ಆ್ಯಪ್ ಆವಿಷ್ಕರಿಸಿದ್ದಾರೆ. ಧಾರವಾಡದ ವಿದ್ಯಾರ್ಥಿ ಆ್ಯಪ್ ಇದೀಗ ಪಿಎಂಒ ಗಮನ ಸೆಳೆದಿದೆ. ಕೊರೊನಾ ಪಾಸಿಟಿವ್ ವ್ಯಕ್ತಿಯ ಟ್ರಾವೆಲ್​ ಹಿಸ್ಟರಿ ಟ್ರ್ಯಾಕ್ ಮಾಡುವ ಆ್ಯಪ್ ಇದಾಗಿದ್ದು, ಕೋವಿಶಿಲ್ಡ್ ಎಂಬ ಹೆಸರಿನ ಆ್ಯಪ್ ರಚನೆ ಮಾಡಿದ್ದಾನೆ. ಲಾಕ್‌ಡೌನ್ ಸಮಯ ಉಪಯೋಗಿಸಿಕೊಂಡ ವಿದ್ಯಾರ್ಥಿ 2 ವಾರದಲ್ಲಿ ಆ್ಯಪ್‌ ಆವಿಷ್ಕಾರ ಮಾಡಿದ್ದಾನೆ.

ಮೊಬೈಲ್ ನಂಬರ್ ಮೂಲಕ‌ ಕ್ಯೂ ಆರ್‌ ಕೋಡ್ ಆಧರಿಸಿ ಟ್ರ್ಯಾಕ್ ಮಾಡುವ ಆ್ಯಪ್ ಸಿದ್ಧವಾದ ಬಳಿಕ ಪ್ರಧಾನಮಂತ್ರಿ ಕಚೇರಿಗೆ ಮನೋಜ್​​ ಇದನ್ನು​​ ಕಳುಹಿಸಿದ್ದರು. ಪ್ರಧಾನಿ ಮೋದಿ ಅವರ ಪಿಎಂಒ ಆ್ಯಪ್‌ನಲ್ಲಿ ಮನೋಜ್​​ ಮಾಹಿತಿ ಕಳುಹಿಸಿದ್ದರು.

ಇದೀಗ ಆ್ಯಪ್‌ಗೆ ಪಿಎಂ ಕಚೇರಿಯಿಂದ ಸ್ಪಂದನೆ ಸಿಕ್ಕಿದೆ. ಹೆಚ್ಚಿನ‌ ಮಾಹಿತಿ ಕಲೆ ಹಾಕಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ನಿರ್ದೇಶನ ನೀಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.