ETV Bharat / state

ಅಫ್ಘಾನಿಸ್ತಾನ ವಶಕ್ಕೆ ಪಡೆದ ತಾಲಿಬಾನ್​: ಧಾರವಾಡದಲ್ಲಿ ಕಣ್ಣೀರು ಹಾಕಿದ ವಿದ್ಯಾರ್ಥಿಗಳು

ಅಫ್ಘಾನಿಸ್ತಾನದಿಂದ ಧಾರವಾಡಕ್ಕೆ ವಿದ್ಯಾಭ್ಯಾಸಕ್ಕಾಗಿ ಬಂದಿರುವ ವಿದ್ಯಾರ್ಥಿಗಳ ಪೈಕಿ ಸದ್ಯ 15 ವಿದ್ಯಾರ್ಥಿಗಳಲ್ಲಿ 5 ಜನ ಕೊರೊನಾ ಹಿನ್ನೆಲೆ ವಾಪಸ್ ಹೋಗಿದ್ದರು.‌ ಉಳಿದ 10 ಜನ ವಿದ್ಯಾರ್ಥಿಗಳು ಧಾರವಾಡ ಕೃಷಿ ವಿವಿ ಹಾಸ್ಟೆಲ್​ನಲ್ಲಿದ್ದಾರೆ.

Afghan Students studying at Dharwad
ಅಫ್ಘಾನಿಸ್ತಾನ ತಾಲಿಬಾನ್ ವಶಕ್ಕೆ: ಧಾರವಾಡದಲ್ಲಿ ಕಣ್ಣೀರು ಹಾಕಿದ ವಿದ್ಯಾರ್ಥಿಗಳು
author img

By

Published : Aug 16, 2021, 4:42 PM IST

Updated : Aug 16, 2021, 4:59 PM IST

ಧಾರವಾಡ: ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಕ್ಕೆ ಪಡೆದ ಹಿನ್ನೆಲೆ ಧಾರವಾಡದಲ್ಲಿರುವ ಅಫ್ಘಾನ್​ ವಿದ್ಯಾರ್ಥಿಗಳು ಕಣ್ಣೀರು ಹಾಕಿದ್ದಾರೆ. ಧಾರವಾಡ ಕೃಷಿ ವಿವಿಯಲ್ಲಿ ಸಂಶೋಧನಾ ಹಾಗೂ ಸ್ನಾತಕೋತ್ತರ ಪದವಿ ಮಾಡಲು ವಿದ್ಯಾರ್ಥಿಗಳು ಬಂದಿದ್ದಾರೆ. ಅಫ್ಘಾನಿಸ್ತಾನದಿಂದ ಧಾರವಾಡಕ್ಕೆ ವಿದ್ಯಾಭ್ಯಾಸಕ್ಕೆ ಬಂದಿರುವ ವಿದ್ಯಾರ್ಥಿಗಳ ಪೈಕಿ ಸದ್ಯ 15 ವಿದ್ಯಾರ್ಥಿಗಳಲ್ಲಿ 5 ಜನ ಕೊರೊನಾ ಹಿನ್ನೆಲೆ ವಾಪಸ್ ಹೋಗಿದ್ದರು.‌ ಉಳಿದ 10 ಜನ ವಿದ್ಯಾರ್ಥಿಗಳು ಧಾರವಾಡ ಕೃಷಿ ವಿವಿ ಹಾಸ್ಟೆಲ್​ನಲ್ಲಿದ್ದಾರೆ.

ಧಾರವಾಡದಲ್ಲಿ ಕಣ್ಣೀರು ಹಾಕಿದ ವಿದ್ಯಾರ್ಥಿಗಳು

ಇನ್ನು ಕುಟುಂಬದ ಜೊತೆ ಮಾತನಾಡಿದ್ದೇವೆ. ಅವರು ಸುರಕ್ಷಿತವಾಗಿದ್ದಾರೆ ಎಂದು ಹೇಳಿದ್ದಾರೆ. ಸದ್ಯ ತಾಲಿಬಾನ್ ಸಂಘಟನೆ ಯಾರಿಗೂ ಏನೂ ಮಾಡಲ್ಲ ಎಂದು ಘೋಷಣೆ ಮಾಡಿದೆ. ಹೀಗಾಗಿ ನಾವು ಸ್ವಲ್ಪ ನಿರಾಳವಾಗಿದ್ದೇವೆ. ಆದರೆ, ವಾಪಸ್ ಹೋದ 5 ವಿದ್ಯಾರ್ಥಿಗಳು ಬರುವುದು ಕಷ್ಟ ಸದ್ಯ ವಿಮಾನ ಬಂದ್ ಆಗಿವೆ. ಭಯ ಕೂಡಾ ಇದೆ, ನಮ್ಮ ಕುಟುಂಬಗಳು ಅಲ್ಲೇ ಇವೆ. ಅಲ್ಲಿ ಎಂತಹ ಸ್ಥಿತಿ ಇದೆ ಎಂದು ಕುಟುಂಬದವರು ಹೇಳುತಿದ್ದಾರೆ ಎಂದು ಭಾವುಕರಾದರು.

Last Updated : Aug 16, 2021, 4:59 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.