ಹುಬ್ಬಳ್ಳಿ: ಫೋಟೊ ಜೊತೆಗೆ ಅಶ್ಲೀಲ ಆಡಿಯೋ ಬಳಸಿಕೊಂಡು ಇನ್ಸ್ಟಾಗ್ರಾಂ ಮೂಲಕ ಯುವತಿಗೆ ನಿಂದನೆ ಮಾಡಿರುವ ಘಟನೆ ಹುಬ್ಬಳ್ಳಿಯಲ್ಲಿ ಬೆಳಕಿಗೆ ಬಂದಿದೆ.
ಯುವತಿಯ ಫೋಟೋಗಳನ್ನು ಅಶ್ಲೀಲ ಆಡಿಯೋ ಜೊತೆಗೆ ಬಳಸಿಕೊಂಡು ವಿಡಿಯೋ ಮಾಡಲಾಗಿದೆ. ಅವುಗಳನ್ನು ಇನ್ಸ್ಟಾಗ್ರಾಂ ಖಾತೆಯೊಂದರಲ್ಲಿ ಅಪ್ಲೋಡ್ ಮಾಡುವ ಮೂಲಕ ಅಪಮಾನ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಕಿಡಿಗೇಡಿಯು ನಿರಂತರವಾಗಿ ಈ ಕೃತ್ಯ ಎಸಗುತ್ತ ಬಂದಿದ್ದಾನೆ ಎಂದು ಯುವತಿಯು ಪೊಲೀಸರಿಗೆ ದೂರು ನೀಡಿದ್ದಾಳೆ.
ಈ ಬಗ್ಗೆ ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: 8 ವರ್ಷದ ಪ್ರೇಮ.. ಮೂರು ಬಾರಿ ಅಬಾರ್ಷನ್, ಹಲ್ಲೆ.. ಪೊಲೀಸ್ ಮೊರೆ ಹೋದ ಯುವತಿ