ಹುಬ್ಬಳ್ಳಿ: ತಾನು ಕೆಲಸ ಮಾಡುತ್ತಿದ್ದ ಹೋಟೆಲ್ನಲ್ಲಿಯೇ ಕಾರ್ಮಿಕನೊಬ್ಬ ಈರುಳ್ಳಿ ಕತ್ತರಿಸುವ ಚಾಕುವಿನಿಂದ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬುಧವಾರ ತಡರಾತ್ರಿ ನಡೆದಿದೆ.
ಹುಬ್ಬಳ್ಳಿಯ ಗೋಕುಲ್ ರಸ್ತೆಯಲ್ಲಿನ ಹೋಟೆಲ್ನಲ್ಲಿ 15 ದಿನದ ಹಿಂದೆ ಕೆಲಸಕ್ಕೆಂದು ಬಂದು ಸೇರಿದ್ದ ಬೆಳಗಾವಿ ಮೂಲದ ಅನಿಲ್ ಎಂಬ ಯುವಕ ನಿನ್ನೆ ತಡರಾತ್ರಿ ಹೋಟೆಲ್ನ ಶೌಚಾಲಯದಲ್ಲಿ ಈರುಳ್ಳಿ ಕತ್ತರಿಸುವ ಚಾಕುವಿನಿಂದ ಕುತ್ತಿಗೆಗೆ ಇರಿದು ಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಬಹಳ ಸಮಯವಾದರು ಶೌಚಾಲಯದಿಂದ ಅನಿಲ್ ಹೊರ ಬಾರದ ಹಿನ್ನೆಲೆ ಅನುಮಾನಗೊಂಡ ಹೋಟೆಲ್ನ ಸಿಬ್ಬಂದಿ, ಶೌಚಾಲಯದ ಬಾಗಿಲು ಮುರಿದು ನೋಡಿದಾಗ ರಕ್ತದ ಮಡುವಿನಲ್ಲಿ ಅಸ್ವಸ್ಥನಾಗಿ ಅನಿಲ್ ಬಿದ್ದದ್ದು ಕಂಡು ಬಂದಿದೆ.
ಕೂಡಲೇ ಅನಿಲ್ನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಈ ಸಂಬಂಧ ಗೋಕುಲ್ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ನಾಲ್ಕನೇ ಮಗುವೂ ಹೆಣ್ಣೆಂದು ನೊಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ತಂದೆ!