ಧಾರವಾಡ : ಇಲ್ಲಿನ ಮಹಾನಗರ ಪಾಲಿಕೆ ಕಚೇರಿ ಆವರಣದಲ್ಲಿ ಆಜಾದಿ ಕಾ ಅಮೃತ ಮಹೋತ್ಸವದ ನಿಮಿತ್ತ ಸ್ಥಾಪಿಸಲಾಗಿರುವ 75 ಅಡಿ ಎತ್ತರದ ಬೃಹತ್ ಧ್ವಜಸ್ತಂಭವನ್ನು ನಿನ್ನೆ ಮಧ್ಯರಾತ್ರಿ 12 ಗಂಟೆಗೆ ಅನಾವರಣಗೊಳಿಸಲಾಯಿತು. ಬಾನೆತ್ತರಕ್ಕೆ ಭಾರತದ ಹೆಮ್ಮೆಯ ತಿರಂಗಾ ತಲುಪಿದಾಗ ನೆರೆದ ಜನರ ಹರ್ಷೋದ್ಘಾರ ಮುಗಿಲು ಮುಟ್ಟಿದ್ದವು.
ಮಹಾಪೌರ ಈರೇಶ ಅಂಚಟಗೇರಿ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಉಪಮೇಯರ್ ಉಮಾ ಮುಕುಂದ್ ,ಆಯುಕ್ತ ಡಾ.ಬಿ.ಗೋಪಾಲಕೃ಼ಷ್ಣ ಸೇರಿದಂತೆ ಪಾಲಿಕೆಯ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿ ವರ್ಗ, ಸಾರ್ವಜನಿಕರು ನಡುರಾತ್ರಿಯಲ್ಲಿಯೂ ನೂರಾರು ಸಂಖ್ಯೆಯಲ್ಲಿ ನೆರೆದು ದೇಶಪ್ರೇಮ ಮೆರೆದರು.
![75-feet-high-flag-pole-unveiled-at-midnight-in-dharwad](https://etvbharatimages.akamaized.net/etvbharat/prod-images/16104289_thum.jpg)
ಇದನ್ನೂ ಓದಿ : ಸ್ವಾತಂತ್ರ ಅಮೃತ ಮಹೋತ್ಸವ : ನಮ್ಮ ನಡಿಗೆ ಈಸೂರು ಕಡೆಗೆ