ಧಾರವಾಡ: ಕೊರೊನಾ ಸೋಂಕಿನಿಂದಾಗಿ ಇಂದು 7 ಮಂದಿ ಮೃತಪಟ್ಟಿದ್ದು, 180 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 4,091ಕ್ಕೇರಿದೆ. ಈವರೆಗೆ 131 ಮಂದಿ ಮೃತಪಟ್ಟಿದ್ದಾರೆ.
ಇಂದು 64 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಒಟ್ಟು 1,729 ಮಂದಿ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಇನ್ನುಳಿದಂತೆ 2,231 ಸಕ್ರಿಯ ಪ್ರಕರಣಗಳಿವೆ.