ಧಾರವಾಡ: ಜಲಂಧರನಲ್ಲಿ ನಡೆದ 65ನೇ ರಾಷ್ಟ್ರೀಯ ಕುಸ್ತಿ ಪಂದ್ಯಾವಳಿಯಲ್ಲಿ ಧಾರವಾಡದ ಕುಸ್ತಿಪಟು ಸಾಧನೆ ಮಾಡಿದ್ದಾರೆ. ಧಾರವಾಡ ತಾಲೂಕಿನ ಸಿಂಗನಹಳ್ಳಿ ಗ್ರಾಮದ ರಫೀಕ್ ಹೋಳಿ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ.
![65th National Wrestling Tournament](https://etvbharatimages.akamaized.net/etvbharat/prod-images/kn-dwd-1-wrestling-sadane-av-ka10001_22022021091413_2202f_1613965453_318.jpg)
77 ಕೆಜಿ ವಿಭಾಗದಲ್ಲಿ ರಫೀಕ್ ಹೋಳಿ ಬೆಳ್ಳಿ ಪದಕ ಪಡೆದಿದ್ದಾರೆ. ಜಲಂಧರನಲ್ಲಿ ನಡೆದ ಪಂದ್ಯಾವಳಿಯಲ್ಲಿ ಭಾರತೀಯ ಸೇನಾ ವಿಭಾಗದಿಂದ ಭಾಗವಹಿಸಿ ಈ ಸಾಧನೆ ಮಾಡಿದ್ದಾರೆ. ಕುಸ್ತಿಪಟು ರಫೀಕ ಹೋಳಿ ಕುಸ್ತಿಯಲ್ಲಿ ಹಲವು ಮೈಲುಗಲ್ಲು ಸಾಧಿಸಿದ್ದು, ಗ್ರಾಮೀಣ ಭಾಗದ ಯುವ ಕುಸ್ತಿಪಟುಗಳಿಗೆ ಮಾದರಿಯಾಗಿದ್ದಾರೆ.
![65th National Wrestling Tournament](https://etvbharatimages.akamaized.net/etvbharat/prod-images/kn-dwd-1-wrestling-sadane-av-ka10001_22022021091413_2202f_1613965453_660.jpg)