ಹುಬ್ಬಳ್ಳಿ: ಸರ್ಕಾರ ಸಾರ್ವಜನಿಕರ ಯಾವುದೇ ತುರ್ತು ಸಮಸ್ಯೆಗಳಿದ್ದರೂ ತಕ್ಷಣವೇ ಸ್ಪಂದಿಸಲು ERSS 112 ಸೇವೆ ಜಾರಿ ಮಾಡಿದೆ. ಯೋಜನೆಯೇನೋ ಚೆನ್ನಾಗಿಯೇ ಇದೆ. ಆದರೆ ಇದರ ಲಾಭ ಪಡೆಯಲು ಸಾರ್ವಜನಿಕರು ಪರದಾಡುತ್ತಿದ್ದಾರೆ.
ಹುಬ್ಬಳ್ಳಿಯಿಂದ ಕರೆ ಮಾಡಿದ್ರೆ ಅದು ಸ್ಥಳೀಯ ಕಂಟ್ರೋಲ್ ರೂಮ್ಗೆ ಹೋಗುವುದಿಲ್ಲ. ಬದಲಿಗೆ ಬೆಂಗಳೂರಿನ ಕೇಂದ್ರ ಕಚೇರಿಗೆ ಹೋಗಿ ಅಲ್ಲಿಂದ ಪುನಃ ಹುಬ್ಬಳ್ಳಿಗೆ ಕನೆಕ್ಟ್ ಆಗುತ್ತದೆ. ಅಷ್ಟರಲ್ಲಿ ಸುಮಾರು ಸಮಯವೇ ಕಳೆದಿರುತ್ತದೆ. ಇದರಿಂದಾಗಿ ಸಾರ್ವಜನಿಕರಿಗೆ ಸಕಾಲಕ್ಕೆ ಸೇವೆ ದೊರೆಯುತ್ತಿಲ್ಲ.
ಇದನ್ನೂ ಓದಿ: ಮತ್ತಷ್ಟು ಸ್ಮಾರ್ಟ್ ಆದ ಪೊಲೀಸ್ ಇಲಾಖೆ : ಈ ನೂತನ ಬೆರಳಚ್ಚು ತಂತ್ರಜ್ಞಾನದಿಂದ ಇಲಾಖೆಗೆ ಇನ್ನಷ್ಟು ಶಕ್ತಿ!
ತುರ್ತು ಸಂದರ್ಭದಲ್ಲಿ ಪೊಲೀಸ್ ಸೇವೆ ಸೇರಿದಂತೆ ಇನ್ನಿತರ ಸೇವೆಗಳನ್ನು ಒದಗಿಸಲು 112 ಸೇವೆಯನ್ನು ಒದಗಿಸಲಾಗಿದೆ. ಆದರೆ ಸರ್ಕಾರ ಈ ಬಗ್ಗೆ ಕಾಳಜಿವಹಿಸದೇ ಕೇಂದ್ರ ಕಚೇರಿಯನ್ನು ಬೆಂಗಳೂರಿನಲ್ಲಿ ಮಾಡಿದ್ದು, ಜನರ ಸಮಸ್ಯೆಗೆ ತಕ್ಷಣ ಸೇವೆ ಸಿಗದಂತಾಗಿದೆ.