ETV Bharat / state

ಐತಿಹಾಸಿಕ ದೇವಾಲಯಕ್ಕೆ ಹೊಸ ಲುಕ್ ನೀಡಿದ ಯುವ ಬ್ರಿಗೇಡ್​ : ನಿತ್ಯ ಪೂಜೆಗೆ ಸಿದ್ಧವಾದ ಕಲ್ಲೇಶ್ವರ ದೇಗುಲ - ದಾವಣಗೆರೆಯ ಕೂಗಳತೆ ದೂರದಲ್ಲಿರುವ ಬೇತೂರು ಗ್ರಾಮ

ದಾವಣಗೆರೆಯ ಯುವ ಬಿಗೇಡ್​ನ ಯುವಕರ ತಂಡ ಬೇತೂರು ಗ್ರಾಮದ 1,200 ವರ್ಷಗಳ ಪುರಾತನ ಕಲ್ಲೇಶ್ವರ ದೇವಾಲಯಕ್ಕೆ ಹೊಸಾ ಲುಕ್ ನೀಡಿದ್ದು, ನಿತ್ಯ ಪೂಜೆ ಸಲ್ಲಿಸುವ ಹಾಗೇ ಮಾಡಿದ್ದಾರೆ.

yuva brigade gave new look to the historic temple
ಐತಿಹಾಸಿಕ ದೇವಾಲಯಕ್ಕೆ ಹೊಸಾ ಲುಕ್ ನೀಡಿದ ಯುವ ಬ್ರಿಗೇಡ್
author img

By

Published : Nov 15, 2022, 7:48 PM IST

ದಾವಣಗೆರೆ: ಇಲ್ಲಿನ ಯುವ ಬಿಗೇಡ್​ನ ಯುವಕರ ತಂಡ ಸದ್ದಿಲ್ಲದೇ ಸಮಾಜ ಸೇವೆ ಮಾಡುತ್ತಿದ್ದಾರೆ. ಪ್ರತಿ ವಾರಕ್ಕೆ ಒಂದು ದಿನದ ಕಾರ್ಯಕ್ರಮ ಹಾಕಿಕೊಳ್ಳುವ ಇವರು ದೇವಾಲಯ, ಕೆರೆ ಶಾಲೆಗಳಿಗೆ ಕಾಯಕಲ್ಪ ಒದಗಿಸುತ್ತಿದ್ದಾರೆ. ತಾನಾಯಿತು ತನ್ನ ಕೆಲಸವಾಯಿತು ಎನ್ನುವ ಈ ಕಾಲದಲ್ಲಿ ವಾರ ಪೂರ್ತಿ ಕೆಲಸಕ್ಕೆ ಹೋಗಿ ಭಾನುವಾರದ ಇಡೀ ದಿನ ಸಮಾಜದ ಸ್ವಚ್ಚತೆಗೆ ಮುಡಿಪಾಗಿಟ್ಟಿದ್ದಾರೆ. ಯುವ ಬ್ರಿಗೇಡ್​ನ ಹತ್ತಕ್ಕೂ ಹೆಚ್ಚು ಯುವಕರು ಪ್ರತಿ ವಾರ ಒಂದೊಂದು ಕಾರ್ಯಕ್ರಮ ಹಮ್ಮಿಕೊಂಡು ಸ್ವಚ್ಚತೆ ಮಾಡುತ್ತಾ ಬಂದಿದ್ದಾರೆ.‌

ಐತಿಹಾಸಿಕ ದೇವಾಲಯಕ್ಕೆ ಹೊಸ ಲುಕ್ ನೀಡಿದ ಯುವ ಬ್ರಿಗೇಡ್

ಈ ತಂಡ ದಾವಣಗೆರೆಯ ಕೂಗಳತೆ ದೂರದಲ್ಲಿರುವ ಬೇತೂರು ಗ್ರಾಮದ 1,200 ವರ್ಷಗಳ ಪುರಾತನ ಕಲ್ಲೇಶ್ವರ ದೇವಾಲಯಕ್ಕೆ ಹೊಸ ಲುಕ್ ನೀಡಿದೆ. ನೂರಾರು ವರ್ಷಗಳ ಇತಿಹಾಸ ಹೊಂದಿರುವ ದೇವಸ್ಥಾನವು ಪಾಳು ಬಿದ್ದಿತ್ತು. ಆದರೆ, ಯುವ ಬ್ರಿಗೇಡ್​ನ ಯುವಕರು ಕಲ್ಲೇಶ್ವರ ದೇವಾಲಯದ ಸುತ್ತ ಸ್ವಚ್ಛತೆ ಮಾಡಿ ನಿತ್ಯ ಪೂಜೆ ಸಲ್ಲಿಸುವ ಹಾಗೇ ಕಾಯಕಲ್ಪ ನೀಡಿದ್ದಾರೆ.

ನಾವು ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಬಣ್ಣ ಹೊಡೆಯುವ ಹಾಗೂ ಛಾವಣಿ ಸರಿಪಡಿಸುವ ಕೆಲಸ ಮಾಡುತ್ತೇವೆ. ಇದರಿಂದ ನಮಗೆ ನೆಮ್ಮದಿ ಸಿಗುತ್ತದೆ. ಅಲ್ಲದೆ ಯಾರಿಂದಲೂ ನಾವು ಹಣ ಪಡೆದು, ಯಾವುದೋ ಪಕ್ಷಕ್ಕಾಗಿ ನಾವು ಕೆಲಸ ಮಾಡುತ್ತಿಲ್ಲ. ಸ್ವಾಮಿ ವಿವೇಕಾನಂದರ ಮಾರ್ಗದರ್ಶನದಲ್ಲಿ ನಡೆಯುತ್ತೇವೆ ಎಂದು ಯುವ ಬ್ರಿಗೇಡ್​ನ ಸಂಚಾಲಕ ಗಜೇಂದ್ರ ಅಭಿಪ್ರಾಯ ವ್ಯಕ್ತಪಡಿಸಿದರು.

ಇದನ್ನೂ ಓದಿ : ದಾಂಡೇಲಿಯಲ್ಲಿ ಹೆಚ್ಚಾದ ಮೊಸಳೆ ದಾಳಿ: ಒಂದೇ ವರ್ಷದಲ್ಲಿ ಐದು ಮಂದಿ ಬಲಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.