ದಾವಣಗೆರೆ: ವಿವಾಹವಾಗಿ ಸುಂದರ ಜೀವನ ಸಾಗಿಸಬೇಕೆಂಬ ಕನಸು ಕಂಡಿದ್ದ ಯುವಕ ಇದೀಗ ತನಗೆ ಮದುವೆಯಾಗಿಲ್ಲ ಎಂದು ಕೊರಗಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ನ್ಯಾಮತಿ ತಾಲೂಕಿನ ರಾಮೇಶ್ವರ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ವೀರೇಶ್ (32) ಆತ್ಮಹತ್ಯೆ ಮಾಡಿಕೊಂಡ ಯುವಕ. ನ್ಯಾಮತಿ ತಾಲೂಕಿನ ರಾಮೇಶ್ವರ ಗ್ರಾಮದಲ್ಲಿರುವ ಪೌಲ್ಟ್ರಿ ಕೋಳಿ ಫಾರಂನಲ್ಲಿ ಕೆಲಸ ಮಾಡುತ್ತಿದ್ದ ಈತ ಮೂಲತಃ ಬಳ್ಳಾರಿ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ಹರಕನಾಳ್ ಗ್ರಾಮದ ನಿವಾಸಿ ಎಂದು ತಿಳಿದುಬಂದಿದೆ.
ಈ ಸುದ್ದಿಯನ್ನೂ ಓದಿ: ಪೂರ್ಣ ಪ್ರಮಾಣದ ಅವಧಿಗೆ ಬಿಎಸ್ವೈ ಸಿಎಂ ಆಗಿರುತ್ತಾರೆ : ಸಚಿವ ಬಸವರಾಜ ಬೊಮ್ಮಾಯಿ
ಈ ಕುರಿತು ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.