ETV Bharat / state

ಪಠ್ಯದಲ್ಲಿ ಭಗವದ್ಗೀತೆ ಸೇರಿಸುವುದು ಉತ್ತಮ: ಪೇಜಾವರ ಶ್ರೀ - Bhagavad Gita in the text

ಪಠ್ಯದಲ್ಲಿ ಭಗವದ್ಗೀತೆಯನ್ನು ಸೇರಿಸುವುದು ಉತ್ತಮ. ಅದು ಸಾಮಾಜಿಕ, ಕರ್ತವ್ಯ ಪ್ರಜ್ಞೆಯನ್ನು ನೆನಪಿಸುವಂತಹ ಶಾಸ್ತ್ರ ಎಂದು ವಿಶ್ವಪ್ರಸನ್ನ ತೀರ್ಥ ಶ್ರೀ ಹೇಳಿದರು.

ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ
ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ
author img

By

Published : Dec 12, 2022, 6:09 PM IST

ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀ

ದಾವಣಗೆರೆ: ಭಗವದ್ಗೀತೆ ಒಂದು ತತ್ವಶಾಸ್ತ್ರ ಮಹಾಶಾಸ್ತ್ರ. ಅದು ಸಾಮಾಜಿಕ, ಕರ್ತವ್ಯ ಪ್ರಜ್ಞೆಯನ್ನು ನೆನಪಿಸುವಂತಹದ್ದು. ಆದ್ದರಿಂದ ಪಠ್ಯದಲ್ಲಿ ಭಗವದ್ಗೀತೆಯನ್ನು ಸೇರಿಸುವುದು ಉತ್ತಮ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಗಳು ಹೇಳಿದರು.

ರಾಮಮಂದಿರ‌ ನಿರ್ಮಾಣದ ಬಗ್ಗೆ ಮಾತನಾಡುತ್ತಾ, ಅಯೋಧ್ಯೆಯ ರಾಮ ಮಂದಿರ 360 ಅಡಿ ಉದ್ದ 235 ಅಡಿ ಅಗಲದ ಪ್ಲಾಟ್‌ಫಾರ್ಮ್ ಮೇಲೆ ನಿರ್ಮಾಣವಾಗಿದೆ. ಮುಂದಿನ ವರ್ಷದ ಕೊನೆಯಲ್ಲಿ ಅಂದ್ರೆ 2024 ರ ಜನವರಿ ಮಕರ ಸಂಕ್ರಾಂತಿ ವೇಳೆಗೆ ರಾಮ ದೇವರ ಪ್ರಾಣಪ್ರತಿಷ್ಠೆಯಾಗುವ ವಿಶ್ವಾಸವಿದೆ ಎಂದರು.

ತಿಲಕ ರೂಪದಲ್ಲಿ ಬೀಳುತ್ತೆ ಸೂರ್ಯನ ಕಿರಣ: ರಾಮಮಂದಿರದಲ್ಲಿ ಮುಂದಿನ ಕೆಲವೇ ದಿನಗಳಲ್ಲಿ ಪ್ರತಿಷ್ಠಾಪಿಸುವ ರಾಮನ ಮೂರ್ತಿ‌ಯ ಮೇಲೆ ಸೂರ್ಯನ ಕಿರಣ ಬೀಳುವ ರೀತಿ ಯೋಜನೆ ರೂಪಿಸಲಾಗಿದೆ. ಶ್ರೀ ರಾಮನವಮಿ ದಿನ ರಾಮ ದೇವರ ಮೇಲೆ ಸೂರ್ಯನ ಕಿರಣ ಬೀಳಬೇಕು. ಈ ಯೋಜನೆಯನ್ನು ಸ್ಪೇಸ್ ರಿಸರ್ಚ್ ಇನ್ಸ್ಟಿಟ್ಯೂಷನ್ ಅವರು ಈಗಾಗಲೇ ಮಾಡುತ್ತಿದ್ದಾರೆ. ಇದನ್ನು ಪ್ರಧಾನಿ ಮೋದಿಯವರ ಅಪೇಕ್ಷೆಯಂತೆ ಸಿದ್ಧಪಡಿಸಲಾಗಿದೆ ಎಂದು ಹೇಳಿದರು.

ಹಿಂದೂಗಳ ಜಾತ್ರೆಗಳಲ್ಲಿ ಮುಸ್ಲಿಂ ಸಮಾಜದವರಿಗೆ ವ್ಯಾಪಾರ‌ಕ್ಕೆ ಅವಕಾಶ ನಿರಾಕರಣೆ ವಿಚಾರವಾಗಿ ಮಾತನಾಡುತ್ತಾ, ಆ ಸಮಾಜದಿಂದ ಇಷ್ಟು ಅಪಾಯಕಾರಿ ಘಟನೆಗಳು ನಡೆಯುತ್ತಿದ್ದು ಜಾತ್ರೆಗಳಲ್ಲಿ ವ್ಯಾಪಾರಕ್ಕೆ ಅವಕಾಶ ಕಲ್ಪಿಸಿಲ್ಲ. ಮುಜರಾಯಿ ಇಲಾಖೆಯ ದೇವಾಲಗಳಲ್ಲಿ ಅನ್ಯ ಕೋಮಿನವರಿಗೆ ವ್ಯಾಪಾರ‌ ಮಾಡಲು ಅವಕಾಶ ಕಲ್ಪಿಸಬಾರದು ಎಂಬ ಕಾನೂನು ಕೂಡಾ ಇದೆ. ಆ ಕಾನೂನುನ್ನು ಜಾರಿಗೊಳಿಸುವಂತೆ ಪ್ರಸ್ತುತ ದಿನಗಳಲ್ಲಿ ಕೆಲವರು ಹೇಳ್ತಿದ್ದಾರೆ ಎಂದರು.

ಇದನ್ನೂ ಓದಿ: ಶಾಲಾ ಪಠ್ಯದಲ್ಲಿ ಭಗವದ್ಗೀತೆ ಸೇರಿಸಬೇಕು, ಅಲ್ಲದೇ ಕಡ್ಡಾಯಗೊಳಿಸಬೇಕು: ವಿಶ್ವೇಶ್ವರ ಹೆಗಡೆ ಕಾಗೇರಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.