ETV Bharat / state

ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ನಡುವೆ ಬಣ ಸೃಷ್ಟಿ; ಚನ್ನಗಿರಿಯಲ್ಲಿ ವಿಜಯ ಸಂಕಲ್ಪ ಯಾತ್ರೆ ಮೊಟಕು

ದಾವಣಗೆರೆ ಜಿಲ್ಲೆಯ ಚನ್ನಗಿರಿಯಲ್ಲಿ ಬಿಜೆಪಿ ಟಿಕೆಟ್​ ಆಕಾಂಕ್ಷಿಗಳಲ್ಲಿ ಎರಡು ಬಣಗಳು ಸೃಷ್ಟಿಯಾಗಿವೆ. ಇಂದು ಇಬ್ಬರು ಟಿಕೆಟ್​ ಆಕಾಂಕ್ಷಿಗಳು ಪ್ರತ್ಯೇಕ ಮೆರವಣಿಗೆ ಮಾಡಿದ್ದಾರೆ.

ಚನ್ನಗಿರಿಯಲ್ಲಿ ವಿಜಯ ಸಂಕಲ್ಪ ಯಾತ್ರೆ ಮೊಟಕು
ಚನ್ನಗಿರಿಯಲ್ಲಿ ವಿಜಯ ಸಂಕಲ್ಪ ಯಾತ್ರೆ ಮೊಟಕು
author img

By

Published : Mar 19, 2023, 3:51 PM IST

ಚನ್ನಗಿರಿಯಲ್ಲಿ ವಿಜಯ ಸಂಕಲ್ಪ ಯಾತ್ರೆ ಮೊಟಕು

ದಾವಣಗೆರೆ: ಹಾಲಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರಿಗೆ ಲೋಕಾಯುಕ್ತ ದಾಳಿ ಎದುರಾದ ಬೆನ್ನಲ್ಲೇ ಚನ್ನಗಿರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಟಿಕೆಟ್ ಆಕಾಂಕ್ಷಿಗಳ ನಡುವೆ ಬಣಗಳು ಸೃಷ್ಟಿಯಾಗಿವೆ ಎಂಬ ಮಾತುಗಳು ಕೇಳಿಬರುತ್ತಿವೆ. ಇಂದು ದಾವಣಗೆರೆ ಜಿಲ್ಲೆಯ ಚನ್ನಗಿರಿಯಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಆಗಮಿಸಬೇಕಾಗಿತ್ತು. ಈ ವೇಳೆ ಇಬ್ಬರು ಟಿಕೆಟ್ ಆಕಾಂಕ್ಷಿಗಳು ಪ್ರತ್ಯೇಕ ಮೆರವಣಿಗೆ ಮಾಡಿರುವುದು ಕಂಡುಬಂದಿದ್ದರಿಂದ ವಿಜಯಸಂಕಲ್ಪ ಯಾತ್ರೆ ರದ್ದು ಮಾಡಲಾಯಿತು.

ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರಿಗೆ ಟಿಕೆಟ್ ಸಿಗುವುದಿಲ್ಲ ಎಂಬ ಕೂಗು ಬಿಜೆಪಿ ವಲಯದಲ್ಲಿ ಕೇಳಿಬರುತ್ತಿರುವುದರಿಂದ ಟಿಕೆಟ್ ಆಕಾಂಕ್ಷಿಗಳು ಫುಲ್ ಆಕ್ಟಿವ್ ಆಗಿದ್ದಾರೆ. ಶಾಸಕರ ಪುತ್ರ ಮಾಡಾಳ್ ಮಲ್ಲಿಕಾರ್ಜುನ್ ಮತ್ತು ತುಮ್ಕೋಸ್ ಮಾಜಿ ಅಧ್ಯಕ್ಷ ಹೆಚ್ ಎಸ್ ಶಿವಕುಮಾರ್ ಇಬ್ಬರ ಎರಡು ಬಣಗಳು ಸೃಷ್ಟಿಯಾಗಿವೆ. ಬಣಗಳನ್ನು ಮಾಡಿಕೊಂಡು ಒಂದೇ ಮೆರವಣಿಗೆ ಮಾಡುವ ಬದಲು ಪ್ರತ್ಯೇಕ ಎರಡು ಮೆರವಣಿಗೆ ಮಾಡಿದ್ರು. ಬಳಿಕ ಚನ್ನಗಿರಿ ಪಟ್ಟಣದ ಖಾಸಗಿ ಬಸ್ ನಿಲ್ದಾಣ ಬಳಿ ಎರಡು ಬಣಗಳ ಮೆರವಣಿಗೆ ಪರಸ್ಪರ ಎದುರಾದವು.

ತಮ್ಮ ಬಣದ ನಾಯಕರ ಪರ ಘೋಷಣೆ ಜೈಕಾರ ಹಾಕಿ ಕಾರ್ಯಕರ್ತರು ಶಕ್ತಿ ಪ್ರದರ್ಶನ ಮಾಡಿದ್ರು. ಇನ್ನು ಭಿನ್ನಮತ ಸ್ಪೋಟಗೊಂಡು ಎರಡು ಬಣದ ಮೆರವಣಿಗೆ ಹೆಚ್ಚಾದ್ದರಿಂದ ಟ್ರಾಫಿಕ್ ಜಾಮ್ ಕೂಡ ಆಗಿತ್ತು.‌ ಚನ್ನಗಿರಿ ಪಟ್ಟಣದಲ್ಲಿ ಬೈಕ್ ರ್ಯಾಲಿ ನಡೆಸುತ್ತಿರುವ ಉಭಯ ನಾಯಕರ ಬೆಂಬಲಿಗರು ಪರಸ್ಪರ ಜಿದ್ದಿಗಿಳಿದು ತಮ್ಮ ನಾಯಕರ ಮುಂದೆ ಶಕ್ತಿ ಪ್ರದರ್ಶನಕ್ಕೆ ಮುಂದಾದ್ರು.

ಅರ್ಧಕ್ಕೆ ಮೊಟಕುಗೊಂಡ ವಿಜಯ ಸಂಕಲ್ಪ ಯಾತ್ರೆ: ಇಂದು ಚನ್ನಗಿರಿಯಲ್ಲಿ ವಿಜಯ ಸಂಕಲ್ಪ ಯಾತ್ರೆಯ ರಥ ಆಗಮಿಸಿ ಸಾಕಷ್ಟು ರಾದ್ಧಾಂತಕ್ಕೆ ಕಾರಣವಾಯಿತು. ಕೇಂದ್ರ ಸಚಿವೆ ಶೋಭ ಕರಂದ್ಲಾಜೆ, ಸಚಿವ ಮಾಧುಸ್ವಾಮಿ ಸೇರಿದಂತೆ ಹಲವು ಮುಖಂಡರು ಈ ವಿಜಯಸಂಕಲ್ಪ ಯಾತ್ರೆಯಲ್ಲಿ ಭಾಗಿಯಾಗ್ಬೇಕಾಗಿತ್ತು. ಬದಲಿಗೆ ಈ ಯಾತ್ರೆಯಲ್ಲಿ ಹೊನ್ನಾಳಿ ಶಾಸಕ ಎಂ ಪಿ ರೇಣುಕಾಚಾರ್ಯ, ವಿಧಾನ ಪರಿಷತ್ ಸದಸ್ಯ ರವಿಕುಮಾರ್, ಸಂಸದ ಜಿ ಎಂ ಸಿದ್ದೇಶ್ವರ್ ಮಾತ್ರ ಭಾಗಿಯಾದ್ರು.

ರಥಯಾತ್ರೆ ಆರಂಭವಾಗಿ ರಥದಲ್ಲಿ ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರ ಟಿಕೆಟ್ ಆಕಾಂಕ್ಷಿ ಮಾಡಾಳ್ ಮಲ್ಲಿಕಾರ್ಜುನ್‌ ಅವರನ್ನು ಹತ್ತಿಸಿಕೊಳ್ಳಲಾಗಿತ್ತು. ರಥ ಹಾಗೆಯೇ ಬರುತ್ತಿದ್ದಂತೆ ಅದೇ ರಥದಲ್ಲಿ ಟಿಕೆಟ್ ಆಕಾಂಕ್ಷಿ ಹೆಚ್ ಎಸ್ ಶಿವಕುಮಾರ್ ಹತ್ತಲು ಮುಂದಾದಾಗ ನಾಯಕರು ಅವಕಾಶ ಕಲ್ಪಿಸಲಿಲ್ಲ. ಇದರಿಂದ ಆಕ್ರೋಶಗೊಂಡ ಶಿವಕುಮಾರ್ ಬೆಂಬಲಿಗರು ರಥ ತಡೆದು ಆಕ್ರೋಶ ಹೊರಹಾಕಿದ್ರು. ಹೀಗಾಗಿ ಯಾತ್ರೆಯನ್ನು ಅರ್ಧಕ್ಕೆ ಮೊಟಕುಗೊಳಿಸಿ ಜನಪ್ರತಿನಿಧಿ ಹೊರಟು ಹೋದ ಘಟನೆ ನಡೆಯಿತು. ಇದರ ಬೆನ್ನಲ್ಲೇ ಯಾತ್ರೆಯನ್ನು ಅರ್ಧಕ್ಕೆ ರದ್ದು ಮಾಡಲಾಯಿತು.

ಏನ್ ಹೇಳ್ತಾರೆ ಇಬ್ಬರು ನಾಯಕರು: ಇನ್ನು ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಮಾಡಾಳ್ ಮಲ್ಲಿಕಾರ್ಜನ್​, ನನಗೆ ಪಕ್ಷದಿಂದ ಕ್ಷೇತ್ರದಲ್ಲಿ ಆ್ಯಕ್ಟಿವ್ ಆಗಿರುವಂತೆ ಹೇಳಿದ್ದಾರೆ. ನಾನು ಬಂದಿದ್ದೇನೆ. ನಾನು ಪಕ್ಷ ಸಂಘಟನೆ ಮಾಡಿದ್ದೇನೆ. ಕಾರ್ಯಕರ್ತರು ದಯಮಾಡಿ ಯಾವುದೇ ಗೊಂದಲ ಸೃಷ್ಟಿ ಮಾಡಬಾರದು. ಎಲ್ಲರೂ ಸೌಮ್ಯವಾಗಿರೋಣ. ಪಕ್ಷದ ಪ್ರಾಮಾಣಿಕ ಕಾರ್ಯಕರ್ತರಾಗಿರೋಣ. ದಯಮಾಡಿ ನಮ್ಮ ಗೌರವವನ್ನು ಕಾಪಾಡಿಕೊಳ್ಳೋಣ. ಪಕ್ಷ ಹೇಗೆ ಹೇಳುತ್ತೆ ಹಾಗೆ ಕೇಳೋಣ. ಇಲ್ಲಿ ಎರಡು ಬಣವಿಲ್ಲ. ಇವತ್ತು ಯಾರೋ ಬಂದು ನಾವು ಟಿಕೆಟ್​ ಆಕಾಂಕ್ಷಿ ಎಂದರೆ, ಅದನ್ನು ಪಕ್ಷ ನಿರ್ಧರಿಸುತ್ತೆ.ತಾಲೂಕಿನ ಜನ ತೀರ್ಮಾನ ಮಾಡುತ್ತಾರೆ ಎಂದರು.

ಬಿಜೆಪಿ ಟಿಕೆಟ್ ಆಕಾಂಕ್ಷಿ ಹೆಚ್ ಎಸ್​ ಶಿವಕುಮಾರ್ ಹೇಳೋದೇನು: ಈ ವೇಳೆ ಪ್ರತಿಕ್ರಿಯಿಸಿದ ಬಿಜೆಪಿ ಟಿಕೆಟ್ ಆಕಾಂಕ್ಷಿ ಹೆಚ್ ಎಸ್​ ಶಿವಕುಮಾರ್, ವಿಜಯ ಸಂಕಲ್ಪ ಯಾತ್ರೆಗಾಗಿ ಅಳವಡಿಸಿದ್ದ ನಮ್ಮ‌ ಬ್ಯಾನರ್​ಗಳನ್ನು ಕೆಲ ಕಿಡಿಗೇಡಿಗಳು ಕಳೆದ ದಿನ ಮಧ್ಯಾಹ್ನ ಹರಿದು ಹಾಕಿದ್ದು, ಇದು ಯಾರಿಗೂ ಶ್ರೇಯಸ್ಸು ತರುವ ವಿಚಾರ ಅಲ್ವೇ ಅಲ್ಲ. ನಮ್ಮ ಪಕ್ಷದ ಕಾರ್ಯಕರ್ತರೇ ಮೋದಿ ನಾವು ಇರುವ ಬ್ಯಾನರ್​ಗಳನ್ನು ಹರಿದುಹಾಕಿದ್ದಾರೆ. ನಾವು ಬಿಜೆಪಿ ಪಕ್ಷದವರು, ಸಾಕಷ್ಟು ಜನ ಆಕಾಂಕ್ಷಿಗಳಿರುತ್ತಾರೆ. ಯಾರಿಗೆ ಪಕ್ಷ ಟಿಕೆಟ್ ಕೊಡುತ್ತೋ ಅವರಿಗೆ ಕೆಲಸ ಮಾಡ್ಬೇಕಾಗುತ್ತದೆ. ಇಲ್ಲಿ ಯಾವುದೇ ಬಣವಿಲ್ಲ. ಇದೆಲ್ಲಾ ತಾತ್ಕಾಲಿಕವಷ್ಟೇ. ನಮ್ಮಲ್ಲಿ ಒಂದು ಶಿಸ್ತು ಇದೆ. ಅದನ್ನು ಎಲ್ಲರೂ ಫಾಲೋ ಮಾಡುತ್ತಾರೆ ಎಂದರು.

ಇದನ್ನೂ ಓದಿ : ಒಳ್ಳೆ ಕೆಲಸ ಮಾಡಿದ್ದರೆ ಸಿದ್ದರಾಮಯ್ಯಗೆ ಕ್ಷೇತ್ರ ಹುಡುಕುವ ಪರಿಸ್ಥಿತಿ ಬರುತ್ತಿರಲಿಲ್ಲ: ಸಚಿವ ​​ನಿರಾಣಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.