ದಾವಣಗೆರೆ: ಚಲಿಸುತ್ತಿರುವ ಬಸ್ನ ಬಾಗಿಲು ತಾಗಿ ಬೈಕ್ನಲ್ಲಿದ್ದ ಮಹಿಳೆ ಕೆಳಗೆ ಬಿದ್ದು, ಸಾವನ್ನಪ್ಪಿರುವ ಘಟನೆ ದಾವಣಗೆರೆ ನಗರದ ಡಿಸಿಎಂ ಬಳಿಯ ರೈಲ್ವೆ ಸೇತುವೆ ಸಮೀಪ ಘಟನೆ ನಡೆದಿದೆ.
ನಾಗರತ್ನಾ (48) ಸಾವನ್ನಪ್ಪಿದ ಮಹಿಳೆ ಎಂದು ಗುರುತಿಸಲಾಗಿದೆ. ದಾವಣಗೆರೆ ತಾಲೂಕಿನ ಹಿರೇಮರಡಿ ಗ್ರಾಮ ನಿವಾಸಿ ನಾಗರತ್ನ ಎಂದು ಹೇಳಲಾಗಿದ್ದು, ಮಗಳ ಮದುವೆಗೆ ದಿನಾಂಕ ನಿಗದಿಗೆ ಪುರೋಹಿತರ ಬಳಿ ಪತಿಯೊಂದಿಗೆ ನಾಗರತ್ನ ಬಂದಿದ್ದರು.
ವಾಪಸ್ ಊರಿಗೆ ತೆರಳುತ್ತಿದ್ದಾಗ, ಈ ವೇಳೆ ದಾವಣಗೆರೆಯಿಂದ ಬೆಂಗಳೂರಿಗೆ ಹೋಗುತ್ತಿದ್ದ ಸಾರಿಗೆ ಇಲಾಖೆ ಬಸ್ನ ಬಾಗಿಲು ಬೈಕ್ಗೆ ತಾಗಿದೆ. ಪರಿಣಾಮ ಮಹಿಳೆ ಕೆಳಗೆ ಬಿದ್ದಿದ್ದು, ಬಸ್ನ ಹಿಂದಿನ ಚಕ್ರ ತಲೆ ಮೇಲೆ ಹರಿದಿದೆ ಎಂದು ಹೇಳಲಾಗ್ತಿದೆ.
ಇನ್ನೂ ಪತಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆರ್ಎಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.