ETV Bharat / state

ಬಾಯಿಯಿಂದಲೇ ಪುನೀತ್ ರಾಜ್‌ಕುಮಾರ್ ಭಾವಚಿತ್ರ ಬಿಡಿಸಿ ಗೌರವ ಸಲ್ಲಿಸಿದ ಅಭಿಮಾನಿ - ಬಾಯಲ್ಲಿ ಪುನೀತ್​ ಭಾವಚಿತ್ರ ಬಿಡಿಸಿ ಗೌರವ ಸಲ್ಲಿಸಿದ ಟ್ಯಾಟೋ ಕಲಾವಿದ

ಇಂದು ಪುನೀತ್​ ರಾಜ್‌ಕುಮಾರ್ 11ನೇ ದಿನದ ಪುಣ್ಯತಿಥಿ. ಈ ಹಿನ್ನೆಲೆಯಲ್ಲಿ ಟ್ಯಾಟೂ ಕಲಾವಿದರೊಬ್ಬರು ಬಾಯಿಯಿಂದಲೇ ಪುನೀತ್​ ಭಾವಚಿತ್ರ ಬಿಡಿಸಿ ವಿಶೇಷ ಗೌರವ ಸಲ್ಲಿಸಿದರು.

Tattoo Artist draw a Puneeth photo with mouth
ಬಾಯಿಯಿಂದ ಅಪ್ಪು ಭಾವಚಿತ್ರ ಬಿಡಿಸಿದ ಟ್ಯಾಟೂ ಕಲಾವಿದ
author img

By

Published : Nov 8, 2021, 2:53 PM IST

ದಾವಣಗೆರೆ: ಹೃದಯಸ್ತಂಭನದಿಂದ ನಿಧನರಾದ ನಟ ಪುನೀತ್​ ರಾಜ್‌ಕುಮಾರ್ ಅವರಿಗೆ ಅಭಿಮಾನಿಯೊಬ್ಬರು ವಿಶೇಷವಾಗಿ ಗೌರವ ನಮನ ಸಲ್ಲಿಸಿದ್ದಾರೆ.

ಮನೋಜ್ಞ ನಟನೆ, ಸರಳತೆ ಹಾಗು ಆತ್ಮೀಯ ಗುಣಗಳಿಂದ ಪುನೀತ್‌ ರಾಜ್‌ಕುಮಾರ್ ನಾಡಿನಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಇಂದಿಗೆ ಅಪ್ಪು ಇಹಲೋಕವನ್ನಗಲಿ 11 ದಿನಗಳು ಕಳೆದಿದ್ದು, ಕುಟುಂಬಸ್ಥರು ಪುಣ್ಯತಿಥಿ ಆಚರಿಸಿದರು. ರಾಜ್ಯದ ನಾನಾಕಡೆಗಳಲ್ಲೂ ಪುಣ್ಯಸ್ಮರಣೆ ಕಾರ್ಯಕ್ರಮಗಳು ನಡೆಯುತ್ತಿವೆ.

ಜಿಲ್ಲೆಯ ಹರಿಹರ ಪಟ್ಟಣದ ಟ್ಯಾಟೂ ಕಲಾವಿದ ಜಯಕುಮಾರ್ ಎಂಬವರು​ ಪುಣ್ಯತಿಥಿ ಹಿನ್ನೆಲೆಯಲ್ಲಿ ಬಾಯಲ್ಲಿ ಕುಂಚ ಹಿಡಿದು ನೆಚ್ಚಿನ ನಟನ ಭಾವಚಿತ್ರ ಬಿಡಿಸಿ ಅಭಿಮಾನ ಮೆರೆದರು.

ಇದನ್ನೂ ಓದಿ: ಪುನೀತ್​ಗೆ ಇಷ್ಟವಾದ ತಿಂಡಿ-ತಿನಿಸು ಅರ್ಪಿಸಿ ನಮಸ್ಕರಿದ ಕುಟುಂಬ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.