ದಾವಣಗೆರೆ: ಹರಿಹರ ಸಾರ್ವಜನಿಕರಿಗೆ ಆಸ್ಪತ್ರೆಯಲ್ಲಿ ಅನೆಸ್ತೇಶಿಯಾ ಹಾಗೂ ಸಿಬಿಎನ್‌ಎಎಟಿ ಯಂತ್ರಗಳನ್ನು ಶಾಸಕ ಎಸ್.ರಾಮಪ್ಪ ಲೋಕಾರ್ಪಣೆ ಮಾಡಿದ್ದಾರೆ.
ಅತ್ಯಾಧುನಿಕ ಯಂತ್ರೋಪಕರಣಗಳನ್ನು ಉದ್ಘಾಟಿಸಿದ ಅವರು, ಅನಸ್ತೇಶಿಯಾ (ಅರಿವಳಿಕೆ ಮಾಪಕ) ಯಂತ್ರ 15,12,000 ರೂ. ಹಾಗೂ ಟಿಬಿ ಕಾಯಿಲೆ ಪತ್ತೆ ಹಚ್ಚುವ ಸಿಬಿಎನ್‌ಎಂಟಿ ಯಂತ್ರ 47,000,00 ರೂ. ಬೆಲೆಯದ್ದಾಗಿದೆ. ಈ ಹೊಸ ಯಂತ್ರಗಳ ಮೂಲಕ ಆಸ್ಪತ್ರೆಯ ಬಹುದಿನದ ಬೇಡಿಕೆ ಈಡೇರಿದಂತಾಗಿದೆ. ಬಹುತೇಕ ಜಿಲ್ಲಾಸ್ಪತ್ರೆಗಳಲ್ಲಿ ಮಾತ್ರ ಲಭ್ಯವಿರುವ ಇಂತಹ ಯಂತ್ರಗಳು ನಮ್ಮ ಆಸ್ಪತ್ರೆಗೂ ಬಂದಿದ್ದು, ಸುತ್ತಮುತ್ತಲ ಜನರಿಗೆ ಬಹು ಉಪಯುಕ್ತವಾಗಿದೆ. ಆಸ್ಪತ್ರೆ ವೈದ್ಯರು ನೂತನ ಯಂತ್ರಗಳನ್ನು ಸರಿಯಾಗಿ ನಿರ್ವಹಿಸುವುದರೊಂದಿಗೆ ರೋಗಿಗಳಿಗೆ ಅವು ಉಪಯುಕ್ತವಾಗುವಂತೆ ನೋಡಿಕೊಳ್ಳಬೇಕು ಶಾಸಕ ಎಸ್ ರಾಮಪ್ಪ ಹೇಳಿದ್ರು.
ಈ ಯಂತ್ರಗಳು ಜಿಲ್ಲಾ ಮತ್ತು ಹರಿಹರ ತಾಲ್ಲೂಕು ಆಸ್ಪತ್ರೆ ಬಿಟ್ಟರೆ ಬೇರೆ ತಾಲ್ಲೂಕು ಆಸ್ಪತ್ರೆಯಲ್ಲಿ ಇಲ್ಲ. ಈ ತಾಲ್ಲೂಕಿನ ಜನರು ಇಲ್ಲಿ ಸೌಲಭ್ಯ ಪಡೆಯಬಹುದು ಎಂದರು. ಇದೆ ವೇಳೆ ಶಾಸಕರು ಎಪಿಎಲ್ ಕುಟುಂಬದವರಿಗೆ 1.5 ಲಕ್ಷದವರೆಗೆ, ಬಿಪಿಎಲ್ ಕಾರ್ಡುದಾರರಿಗೆ 5 ಲಕ್ಷದವರೆಗೆ ಉಚಿತ ಚಿಕಿತ್ಸೆ ನೀಡುವ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಪಾಕ್ಷಿಕ ಜಾಗೃತಿ ಆಂದೋಲನವನ್ನೂ ಉದ್ಘಾಟಿಸಿದರು.
ಈ ವೇಳೆ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಹನುಮಾನಾಯ್ಕ, ವೈದ್ಯರಾದ ಸವಿತಾ, ಪಂಕಜಾ, ಸುರೇಶ್ ಕುಮಾರ್, ಸುರೇಶ್ ಬಸರಕೋಡ್, ಪ್ರತಾಪ್, ಯಶವಂತ್, ಎಸ್.ಎಸ್.ಕೋಲ್ಕರ್, ಆರೋಗ್ಯ ಇಲಾಖೆಯ ಎಂ.ವಿ.ಹೊರಕೇರಿ ಮತ್ತಿತತರಿದ್ದರು.