ETV Bharat / state

ಸಿದ್ದರಾಮಯ್ಯನವರು ಖಾಲಿ ಪುಕ್ಕಟೆ ಮಾತನಾಡುತ್ತಾರೆ: ಸಚಿವ ಜಗದೀಶ್ ಶೆಟ್ಟರ್

author img

By

Published : Jan 14, 2021, 7:42 PM IST

ಪ್ರತಿಪಕ್ಷದ ನಾಯಕನಾಗಿ ಸರ್ಕಾರಕ್ಕೆ‌ ಸಲಹೆ‌, ಸೂಚನೆ ನೀಡುವ ಬದಲು ಪುಕ್ಕಟೆ ಟೀಕೆ ಟಿಪ್ಪಣಿಗಳನ್ನು ಮಾಡುವ ಅವಶ್ಯಕತೆ ಇಲ್ಲ ಎಂದು ಸಚಿವ ಜಗದೀಶ್​ ಶೆಟ್ಟರ್​ ಹೇಳಿದ್ದಾರೆ.

Minister Jagadish Shettar
ಸಚಿವ ಜಗದೀಶ್​ ಶೆಟ್ಟರ್​ ತಿರುಗೇಟು

ದಾವಣಗೆರೆ: ಸಿಎಂ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯನವರು ಬೆಳಗ್ಗೆಯಿಂದ ಸಂಜೆ ತನಕ ಟೀಕೆಗಳನ್ನು ಮಾಡುತ್ತಾರೆ. ಅವರ ಬಳಿ ಯಾವುದೇ ವಿಚಾರಗಳಿಲ್ಲ. ಕೇಂದ್ರ ಹಾಗು ರಾಜ್ಯ ಸರ್ಕಾರಗಳ ಬಗ್ಗೆ ಖಾಲಿ ಪುಕ್ಕಟೆ ಮಾತನಾಡುತ್ತಾರೆ ಎಂದು ಹೇಳುವ ಮೂಲಕ ವೀಕ್ ಚೀಫ್ ಮಿನಿಸ್ಟರ್ ಬಗ್ಗೆ ಮಾತ್ರ ಬ್ಲಾಕ್‌ಮೇಲ್‌ ಮಾಡಲು ಸಾಧ್ಯ ಎಂಬ ಮಾಜಿ ಸಿಎಂ ಸಿದ್ದರಾಮಯ್ಯನವರ ಹೇಳಿಕೆಗೆ ಸಚಿವ ಜಗದೀಶ್​ ಶೆಟ್ಟರ್​ ತಿರುಗೇಟು ನೀಡಿದ್ದಾರೆ.

ಸಚಿವ ಜಗದೀಶ್​ ಶೆಟ್ಟರ್​ ತಿರುಗೇಟು

ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹನಗವಾಡಿ ಗ್ರಾಮದ ಬಳಿ ಪಂಚಮಸಾಲಿ ಪೀಠದಲ್ಲಿ ನಡೆಯುತ್ತಿರುವ ಹರ ಜಾತ್ರೆಯಲ್ಲಿ ಭಾಗಿಯಾಗುವ ಮುನ್ನ ಮಾತನಾಡಿದ ಅವರು, ಪ್ರತಿಪಕ್ಷದ ನಾಯಕನಾಗಿ ಸರ್ಕಾರಕ್ಕೆ‌ ಸಲಹೆ‌ ಸೂಚನೆ ನೀಡುವ ಬದಲು ಪುಕ್ಕಟೆ ಟೀಕೆ ಟಿಪ್ಪಣಿಗಳನ್ನು ಮಾಡುವುದು ಅವಶ್ಯಕತೆ ಇಲ್ಲ ಎಂದರು.

ಇದನ್ನೂ ಓದಿ: ಪಂಚಮಸಾಲಿ ಸಮುದಾಯವನ್ನು 3ಬಿಗೆ ಸೇರಿಸಿದ್ದೇ ನಮ್ಮ ಸರ್ಕಾರ: ಸಿಎಂ

ಸಂಪುಟ ರಚನೆ ಸಮಯದಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳು ಹೆಚ್ಚಿದ್ದರು. ಆದ್ದರಿಂದ ಅಸಮಾಧಾನ ಉಂಟಾಗಿದೆ. ಇದು ಸರ್ವೇ ಸಾಮಾನ್ಯವಾದರೂ, ಅವರನ್ನು ಸಮಾಧಾನ ಪಡಿಸಿದ್ದಾಗಿದೆ. ಮುಂದಿನ ದಿನಗಳಲ್ಲಿ ಎಲ್ಲಾವು ಸರಿ ಹೋಗುತ್ತದೆ. ಇನ್ನು ಯಾರು ಕೂಡ ಸ್ವಪಕ್ಷದ ಬಗ್ಗೆ ಮಾತನಾಡುವುದು, ಬಹಿರಂಗವಾಗಿ ಚರ್ಚೆ ಮಾಡುವುದು ಪಕ್ಷಕ್ಕೆ ಒಳ್ಳೆಯದಲ್ಲ. ಎಲ್ಲವನ್ನು ಪಕ್ಷ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಪಕ್ಷ ನಿರ್ಧಾರ ಕೈಗೊಳ್ಳುತ್ತದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.