ದಾವಣಗೆರೆ: ನಗರದಲ್ಲಿಂದು ನಡೆದ ಸಿದ್ದರಾಮೇಶ್ವರ ಜಯಂತಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾಂಗ್ರೆಸನ ಮಾಜಿ ಸಚಿವ ಶಿವರಾಜ್ ತಂಗಡಗಿ ಅವರೊಂದಿಗೆ ಆತ್ಮೀಯತೆಯಿಂದ ಮಾತುಕತೆ ನಡೆಸಿದ್ರು.
ಇದರ ಬಗ್ಗೆ ಪ್ರತಿಕ್ರಿಯಿಸಿದ ತಂಗಡಗಿ, ಬೊಮ್ಮಾಯಿ ಅವರು ಯಡಿಯೂರಪ್ಪ ಸಿಎಂ ಆಗಿದ್ದ ವೇಳೆ ನೀರಾವರಿ ಮಂತ್ರಿ ಆಗಿದ್ದರು. ನಾನು ಕೂಡ ಮಂತ್ರಿ ಆಗಿದ್ದೆ, ಹೀಗಾಗಿ ನನ್ನ ಅವರ ನಡುವೆ ತುಂಬಾ ಆತ್ಮಿಯತೆ ಇದೆ. ಸಿಎಂ ಬೊಮ್ಮಾಯಿ ಪಾಪ ತುಂಬಾ ಒಳ್ಳೆಯವರು, ಆದ್ರೆ ಅವರಿಗೆ ಒಳ್ಳೆಯ ಕೆಲಸ ಮಾಡೋದಕ್ಕೆ ಅವರ ಪಕ್ಷದವರು ಬಿಡುತ್ತಿಲ್ಲ ಎಂದು ಆರೋಪಿಸಿದರು.
ಭಗವಂತ ಅವರಿಗೆ ಕೆಲಸ ಮಾಡುವಂತ ಶಕ್ತಿ ಕೊಡಲಿ ಅಂತ ಬೇಡಿಕೊಳ್ಳುತ್ತೇನೆ, ಸಿಎಂ ಅದನ್ನ ಮೀರಿ ತುಳಿತಕ್ಕೊಳಗಾದ ಸಮಾಜಕ್ಕೆ ಒಳ್ಳೆಯ ಕೆಲಸ ಮಾಡಲಿ ಅಂತ ಬೇಡಿಕೊಳ್ಳುತ್ತೇನೆ ಎಂದರು.
ಅವರೇನು ನನ್ನನ್ನು ಪಕ್ಷಕ್ಕೆ ಕರದಿಲ್ಲ.. ಮುಖ್ಯಮಂತ್ರಿ ಅವರು ನನ್ನನ್ನು ಬಿಜೆಪಿಗೆ ಸೇರುವಂತೆ ಕರೆದಿಲ್ಲ. ನಾನು ಕಾಂಗ್ರೆಸ್ ಬಿಟ್ಟು ಹೋಗುವ ಪ್ರಶ್ನೆಯೇ ಇಲ್ಲ. ಮುಂದಿನ ಬಾರಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ಮಾಜಿ ಸಚಿವ ತಂಗಡಗಿ ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ:ಸರಣಿ ಹತ್ಯೆ; ಸಂಘಟನೆಗಳ ಪಾತ್ರವಿದ್ದರೆ ಚಾರ್ಜ್ ಶೀಟ್ನಲ್ಲಿ ಅದನ್ನೂ ದಾಖಲಿಸುತ್ತೇವೆ: ಡಿಜಿಪಿ ಸೂದ್