ದಾವಣಗೆರೆ: ಕಾಳಸಂತೆಯಲ್ಲಿ ರಮ್ಡೆಸಿವಿರ್ ಮಾರಾಟ ಮಾಡಲು ಯತ್ನಿಸಿದ ಇಬ್ಬರು ಆರೋಪಿಗಳನ್ನು ದಾವಣಗೆರೆ ಪೊಲೀಸರು ಬಂಧಿಸಿದ್ದಾರೆ.
ಮಂಜುನಾಥ್ ಹಾಗೂ ಗಣೇಶ್ ಬಂಧಿತ ಆರೋಪಿಗಳು ಎಂದು ತಿಳಿದು ಬಂದಿದೆ. ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ದಿನಗೂಲಿ ನೌಕರ ಗಣೇಶ, ಫಾರ್ಮಾಸಿಸ್ಟ್ ಮಂಜುನಾಥನನ್ನು ಬಂಧಿಸಲಾಗಿದೆ.
ಇದನ್ನೂ ಓದಿ: ಖಾಸಗಿ ಆಸ್ಪತ್ರೆಗಳಿಗೆ ಸಚಿವ ಶಿವರಾಮ್ ಹೆಬ್ಬಾರ್ ಖಡಕ್ ವಾರ್ನಿಂಗ್
ಇಬ್ಬರಿಂದ 10 ವಯಲ್ಸ್ ರಮ್ಡೆಸಿವಿರ್ಗಳನ್ನು ವಶಕ್ಕೆ ಪಡೆಯಲಾಗಿದೆ. ಹಣದ ಲಾಬಿಗಾಗಿ ಇಬ್ಬರು ಸೇರಿ ಕಾಳಸಂತೆಯಲ್ಲಿ ರಮ್ಡೆಸಿವಿರ್ ಮಾರಾಟ ಮಾಡಲು ಯತ್ನಿಸಿದ್ದಾರೆ ಎಂದು ಪೋಲಿಸರು ತಿಳಿಸಿದ್ದಾರೆ.