ದಾವಣಗೆರೆ: ಹೊನ್ನಾಳಿ ಪಟ್ಟಣದ ಕೆಎಸ್ಆರ್ಟಿಸಿ ಡಿಪೋಗೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ದಿಢೀರ್ ಭೇಟಿ ನೀಡಿದರು.
ಬಸ್ ನಿಲ್ದಾಣಕ್ಕೆ ಹೋದ ವೇಳೆ ಬಸ್ಗಳು ಸಾಲಾಗಿ ನಿಂತಿದ್ದವು. ಇದನ್ನು ಗಮನಿಸಿದ ಅವರು ಯಾವ ಸಿಬ್ಬಂದಿಯೂ ಕೆಲಸಕ್ಕೆ ಬರ್ತಾ ಇಲ್ವಾ, ಯಾಕೆ ಬಂದಿಲ್ಲ ಎಂದು ಡಿಪೋದ ಅಧಿಕಾರಿಗಳನ್ನು ಪ್ರಶ್ನಿಸಿದರು. ಸಿಬ್ಬಂದಿಗೆ ಕರೆ ಮಾಡಿ ಕರ್ತವ್ಯಕ್ಕೆ ಹಾಜರಾಗಲು ಸೂಚನೆ ನೀಡುವಂತೆ ಅಧಿಕಾರಿಗಳಿಗೆ ರೇಣುಕಾಚಾರ್ಯ ಸೂಚನೆ ನೀಡಿದರು.
ಓದಿ : ಕೋಡಿಹಳ್ಳಿ ಇಲ್ಲೊಂದು-ಅಲ್ಲೊಂದು ಮಾತಾಡೋದು ಸರಿಯಲ್ಲ : ಸಚಿವ ಆರ್.ಅಶೋಕ್
ಫೋನ್ ಮಾಡಿದರೆ ಬರುತ್ತೇವೆ ಅಂತಾರೆ. ಸಿಬ್ಬಂದಿಯಲ್ಲಿ ಗೊಂದಲ ಇದೆ. ಪರಿಹಾರ ಆಗಿಲ್ಲ. ಬರ್ತೀವಿ ಅಂತಾರೆ ಆಮೇಲೆ ಬರುವುದಿಲ್ಲ ಎಂದು ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ರೇಣುಕಾಚಾರ್ಯ ಅವರು, ಕೋಡಿಹಳ್ಳಿ ಚಂದ್ರಶೇಖರ್ ಕೆಎಸ್ಆರ್ಟಿಸಿ ಸಿಬ್ಬಂದಿ ಸಮಸ್ಯೆ ಬಗೆಹರಿಸುವುದಿಲ್ಲ. ರಾಜ್ಯ ಸರ್ಕಾರ ಪರಿಹರಿಸುತ್ತದೆ. ಕೋಡಿಹಳ್ಳಿ ಒಬ್ಬ ದೊಡ್ಡ ಬ್ಲ್ಯಾಕ್ ಮೇಲರ್. ಸಿಬ್ಬಂದಿಗೆ ನಾಳೆ ಸಮಸ್ಯೆಯಾದರೆ ಯಾರೂ ಬರುವುದಿಲ್ಲ. ಇದನ್ನು ನೌಕರರು ಅರ್ಥ ಮಾಡಿಕೊಳ್ಳಬೇಕು. ನಾವು ನಿಮಗೆ ಬೇಡವಾ ಎಂದು ಖಾರವಾಗಿ ಪ್ರಶ್ನಿಸಿದರು.