ETV Bharat / state

ಶಾಸಕ ಜಮೀರ್ ಅಹ್ಮದ್ ಒಬ್ಬ ಅರೆ ಹುಚ್ಚ: ರೇಣುಕಾಚಾರ್ಯ - ರೇಣುಕಾಚಾರ್ಯ ಲೇಟೆಸ್ಟ್ ನ್ಯೂಸ್​

ಶಾಸಕ ಜಮೀರ್ ಅಹ್ಮದ್ ವಿರುದ್ಧ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.‌ರೇಣುಕಾಚಾರ್ಯ ಗುಡುಗಿದ್ದು, ಅವರೊಬ್ಬರು ಅರೆ ಹುಚ್ಚ. ಅನೇಕ ಬಾರಿ ಈ ರೀತಿಯ ವಿವಾದಾತ್ಮಕ ಹೇಳಿಕೆ ನೀಡಿದ್ದು, ಅವರನ್ನು ಬಂಧಿಸಬೇಕು ಆಗ್ರಹಿಸಿದ್ದಾರೆ.

Renukacharya
ರೇಣುಕಾಚಾರ್ಯ
author img

By

Published : Apr 21, 2020, 3:43 PM IST

ದಾವಣಗೆರೆ: ಶಾಸಕ ಜಮೀರ್ ಅಹ್ಮದ್ ಒಬ್ಬ ಅರೆ ಹುಚ್ಚ. ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದು, ಹತ್ತಾರು ಬಾರಿ ಈ ರೀತಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮೊದಲು ಅವರನ್ನು ಬಂಧಿಸಬೇಕು ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.‌ರೇಣುಕಾಚಾರ್ಯ ಆಗ್ರಹಿಸಿದರು.

ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.‌ರೇಣುಕಾಚಾರ್ಯ

ಜಿಲ್ಲೆಯ ನ್ಯಾಮತಿ ಪಟ್ಟಣದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಜಮೀರ್​ ಅವರಿಗೆ ಹುಚ್ಚು ಹಿಡಿದಿದೆ. ಪಾದರಾಯನಪುರಲ್ಲಿ ನಡೆದ ಗಲಭೆಗೆ ಅವರೇ ಕಾರಣ. ಅವರ ಮೇಲೆ ಗೂಂಡಾ ಕಾಯ್ದೆ, ದೇಶದ್ರೋಹ ಪ್ರಕರಣ ದಾಖಲಿಸಿ ಬಂಧಿಸಬೇಕು. ಇಂಥವರನ್ನು ಬೆಂಬಲಿಸಿ ಮಾತನಾಡಿರುವ ಮಾಜಿ ಸಚಿವ ಯು.ಟಿ.‌ಖಾದರ್ ಓರ್ವ ಮತಾಂಧ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೊರೊನಾ ಸೋಂಕು ತಡೆಯಲು ಹಗಲಿರುಳು ದುಡಿಯುತ್ತಿರುವ ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ನಡೆಸುವುದು ದೇಶದ್ರೋಹದ ಕೆಲಸ. ಇಂಥವರನ್ನು ಸರ್ಕಾರ ಯಾವುದೇ ಕಾರಣಕ್ಕೂ ಬಿಡುವುದಿಲ್ಲ.‌ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ನಾನು ಸತ್ತವರ ಮನೆಗೆ ಹೋಗಿ ಪ್ರಚಾರ ಪಡೆಯುವುದಿಲ್ಲ.‌ ಹೊನ್ನಾಳಿ ಕ್ಷೇತ್ರದಲ್ಲಿ ಯಾರಾದರೂ ಸಾವನ್ನಪ್ಪಿದರೆ ಶವ ಸಂಸ್ಕಾರಕ್ಕೆ ನಾನು ಇಲ್ಲವೇ ನನ್ನ ಕುಟುಂಬದವರು ಹೋಗಿ ಆದಷ್ಟು ಸಹಾಯ ಮಾಡಿ ಬರುತ್ತೇವೆ. ನನ್ನ ಕ್ಷೇತ್ರಕ್ಕೆ ಜಮೀರ್ ಬರುವ ಅವಶ್ಯಕತೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.