ETV Bharat / state

ರಾತ್ರೋರಾತ್ರಿ ಆಕ್ಸಿಜನ್ ವ್ಯವಸ್ಥೆ.. 20 ಮಂದಿ ಸೋಂಕಿತರ ಪ್ರಾಣ ಉಳಿಸಿದ್ರು ಶಾಸಕ ರೇಣುಕಾಚಾರ್ಯ

author img

By

Published : May 13, 2021, 7:10 PM IST

ಖಾಲಿ ಸಿಲಿಂಡರ್ ಸಮೇತ ಹರಿಹರಕ್ಕೆ ತೆರಳಿದ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಆಕ್ಸಿಜನ್ ಘಟಕಕ್ಕೆ ತೆರಳಿ ತುಂಬಿಸಿಕೊಂಡು ಬಂದಿದ್ದಾರೆ‌. ಶಾಸಕರ ಈ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದಂತಾಗಿದೆ.

ರೇಣುಕಾಚಾರ್ಯ
ರೇಣುಕಾಚಾರ್ಯ

ದಾವಣಗೆರೆ: ಹೊನ್ನಾಳಿ ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ಬುಧವಾರ ತಡರಾತ್ರಿ ಆಕ್ಸಿಜನ್​ ಕೊರತೆ ಎದುರಾದ ಹಿನ್ನೆಲೆ ಕೂಡಲೇ ಕಾರ್ಯಪ್ರವೃತ್ತರಾದ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ರಾತ್ರೋರಾತ್ರಿ 20 ರೋಗಿಗಳಿಗೆ ಆಕ್ಸಿಜನ್ ವ್ಯವಸ್ಥೆ ಮಾಡಿ ಸೋಂಕಿತರ ಪ್ರಾಣ ಉಳಿಸಿದ್ದಾರೆ.

ಶಾಸಕ ರೇಣುಕಾಚಾರ್ಯ ಸಮಯಪ್ರಜ್ಞೆಯಿಂದ ಉಳಿಯಿತು 20 ರೋಗಿಗಳ ಪ್ರಾಣ

ಆಮ್ಲಜನಕದ ಕೊರತೆ ಇರುವ ಬಗ್ಗೆ ಮಾಹಿತಿ ತಿಳಿದ ಶಾಸಕ ರೇಣುಕಾಚಾರ್ಯ ಆಸ್ಪತ್ರೆಗೆ ತಾಲೂಕು ಆಡಳಿತದೊಂದಿಗೆ ಭೇಟಿ‌ ನೀಡಿದ್ದರು. ಪಿಪಿಇ ಕಿಟ್ ಧರಿಸಿ ವೆಂಟಿಲೇಟರ್ ವಾರ್ಡಿಗೆ ತೆರಳಿ ಪರಿಶೀಲನೆ ನಡೆಸಿದರು. ಅಲ್ಲಿ 20 ರೋಗಿಗಳು ಆಕ್ಸಿಜನ್ ಬೆಡ್​ನಲ್ಲಿದ್ದು, ಕೇವಲ 3 ತಾಸಿಗೆ ಸಾಕಾಗುಷ್ಟು ಮಾತ್ರ ಆಕ್ಸಿಜನ್ ಬಾಕಿ ಉಳಿದಿತ್ತು.

ಕೂಡಲೇ ಅಧಿಕಾರಿಗಳೊಂದಿಗೆ ಖಾಲಿ ಸಿಲಿಂಡರ್ ಸಮೇತ ಹರಿಹರಕ್ಕೆ ತೆರಳಿದ ಶಾಸಕ ರೇಣುಕಾಚಾರ್ಯ, ಆಕ್ಸಿಜನ್ ಘಟಕದಲ್ಲಿ ಆ ಸಿಲಿಂಡರ್​ಗಳನ್ನು ತುಂಬಿಸಿಕೊಂಡು ಬಂದಿದ್ದಾರೆ‌. ಶಾಸಕರ ಈ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದಂತಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.