ETV Bharat / state

ಕೋವಿಡ್​ ಬಿಕ್ಕಟ್ಟು: ಕೊರೊನಾಗೆ ಹೆದರಿ ಚಿಕಿತ್ಸೆ ಪಡೆಯದೇ ದೃಷ್ಠಿ ಕಳೆದುಕೊಳ್ಳದಿರಿ - davanagere leatest news

ಲಾಕ್‌ಡೌನ್ ಹೇರಿದ್ದ ವೇಳೆ ಟ್ರಾಫಿಕ್‌, ಧೂಳು ಇರಲಿಲ್ಲ.‌ ಜನರು ಮನೆಯಿಂದ ಹೊರ ಬರಲಿಲ್ಲ. ಈ ಕಾರಣದಿಂದ ಅಪಘಾತ, ಕಣ್ಣಿನಲ್ಲಿ ಧೂಳು ಸೇರುವುದು.. ಹೀಗೆ ದೃಷ್ಟಿಗೆ ಸಂಬಂಧಿಸಿದ ಪ್ರಕರಣಗಳು ತುಂಬಾ ಕಡಿಮೆ ಆಗಿದ್ದವು. ಆದರೆ, ಈಗ ಲಾಕ್ ಡೌನ್ ಅನ್‌ಲಾಕ್ ಆದ ಬಳಿಕ ಜನಜೀವನ ಎಂದಿನಂತೆ ಮರಳುತ್ತಿದ್ದು, ಈಗ ಈ ಸಮಸ್ಯೆಯಿಂದ ಬಳಲುತ್ತಿರುವವರು ಆಸ್ಪತ್ರೆಗಳಿಗೆ ಬರುತ್ತಿದ್ದಾರೆ.

reason is that corona infection comes lost their eyes
ಕೊರೊನಾ ಬಳಿಕ ಶಸ್ತ್ರಚಿಕಿತ್ಸೆಯಾಗದೇ ದೃಷ್ಠಿ ಕಳೆದುಕೊಂಡಿದ್ದೇಕೆ...? ನೇತ್ರ ತಜ್ಞರು ಹೇಳೋದೇನು...?
author img

By

Published : Sep 24, 2020, 5:32 PM IST

ದಾವಣಗೆರೆ: ಕಣ್ಣು ಪ್ರತಿಯೊಬ್ಬರಿಗೂ ಅತಿ ಮುಖ್ಯವಾದ ಅಂಗ. ಕಣ್ಣಿನ ದೋಷಗಳಿದ್ದವರಲ್ಲಿ ಕೆಲವರು ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳದೇ ದೃಷ್ಟಿ ಕಳೆದುಕೊಂಡಿದ್ದರೆ, ಇನ್ನೂ ಕೆಲವರು ಆಸ್ಪತ್ರೆಗೆ ಹೋದರೆ ಕೊರೊನಾ ಸೋಂಕು ಬರುತ್ತದೆ ಎಂಬ ಆತಂಕದಿಂದ ದೃಷ್ಟಿಹೀನರಾಗಿದ್ದಾರೆ. ಕೊರೊನಾ ಬಂದ ಬಳಿಕ ಅರ್ಧದಷ್ಟು ಶಸ್ತ್ರಚಿಕಿತ್ಸೆಗಳು‌ ಕಡಿಮೆಯಾಗಿವೆ.

ಕೊರೊನಾ ಹೆದರಿ ಶಸ್ತ್ರಚಿಕಿತ್ಸೆ ಪಡೆಯದೇ ದೃಷ್ಠಿ ಕಳೆದುಕೊಳ್ಳಬೇಡಿ ಅಂತಾರೆ ನೇತ್ರ ತಜ್ಞರು

ಬೆಣ್ಣೆನಗರಿಯಲ್ಲಿ ಕೊರೊನಾ ಆರ್ಭಟ ಹೆಚ್ಚಾಗಿದ್ದು, ನಿತ್ಯವೂ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಕಣ್ಣಿನ ಸಮಸ್ಯೆಯಿಂದ ಬಳಲುತ್ತಿರುವವರು ಈಗ ಆಸ್ಪತ್ರೆಗಳಿಗೆ ಬರತೊಡಗಿದ್ದಾರೆ. ಮಾರ್ಚ್-ಏಪ್ರಿಲ್ ತಿಂಗಳಲ್ಲಿ ಶೇಕಡಾ 20 ರಿಂದ 30 ರಷ್ಟು ಮಾತ್ರ ಕಾರ್ನಿಯಲ್‌ ಕಸಿ ನಡೆದಿವೆ. ಉಳಿದಂತೆ ಲಾಕ್ ಡೌನ್ ತೆರವು ಮಾಡಿದ ಬಳಿಕ ಶೇಕಡಾ 50 ರಷ್ಟು ಆಪರೇಷನ್ ನಡೆಯುತ್ತಿವೆ.

ಈ ಸಂದರ್ಭದಲ್ಲಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಬರಲು ಜನರು ಹಿಂದೇಟು ಹಾಕುತ್ತಿದ್ದಾರೆ. ದಿನ ಕಳೆದಂತೆ ಕೋವಿಡ್ ಬಗ್ಗೆ ಭಯ ಹೆಚ್ಚಳ ಹಾಗೂ ಆರ್ಥಿಕ ಮುಗ್ಗಟ್ಟಿನಿಂದಾಗಿ ಜನರು ಬರುತ್ತಿಲ್ಲ. ದೊಡ್ಡ ಆಪರೇಷನ್ ಬದಲು ಕಡಿಮೆ ಹಣದಲ್ಲಿ ಆದರೆ ಚಿಕಿತ್ಸೆ ನೀಡಿ. ಯಾವುದಾದರೂ ಸರ್ಕಾರದ ಯೋಜನೆಯಲ್ಲಿ ಶಸ್ತ್ರಚಿಕಿತ್ಸೆ ಮಾಡುವಂತೆ ಕೇಳುವವರು ಹೆಚ್ಚಾಗುತ್ತಿದ್ದಾರೆ. ಆಸ್ಪತ್ರೆಗೆ ಹೋದ ತಕ್ಷಣ ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ಬನ್ನಿ ಎಂದು ಹೇಳುವುದರಿಂದ ಇತ್ತ ಬರುತ್ತಿಲ್ಲ.

ಲಾಕ್‌ಡೌನ್ ಹೇರಿದ್ದ ವೇಳೆ ಟ್ರಾಫಿಕ್‌, ಧೂಳು ಇರಲಿಲ್ಲ.‌ ಜನರು ಮನೆಯಿಂದ ಹೊರ ಬರಲಿಲ್ಲ. ಈ ಕಾರಣದಿಂದ ಅಪಘಾತ, ಕಣ್ಣಿನಲ್ಲಿ ಧೂಳು ಸೇರುವುದು, ಹುಳಗಳು ಸೇರುವುದು ಹೀಗೆ ದೃಷ್ಟಿಗೆ ಸಂಬಂಧಿಸಿದ ಪ್ರಕರಣಗಳು ತುಂಬಾ ಕಡಿಮೆ ಆಗಿದ್ದವು. ಆದರೆ, ಈಗ ಅನ್‌ಲಾಕ್ ಆದ ಬಳಿಕ ಜನಜೀವನ ಯಥಾ ಸ್ಥಿತಿಗೆ ಮರಳುತ್ತಿದ್ದು, ಈಗ ಈ ಸಮಸ್ಯೆಯಿಂದ ಬಳಲುತ್ತಿರುವವರು ಆಸ್ಪತ್ರೆಗಳಿಗೆ ಬರುತ್ತಿದ್ದಾರೆ.

ಯಾವುದೇ ವ್ಯಕ್ತಿ ಮೃತಪಟ್ಟ ಆರು ಗಂಟೆಯೊಳಗೆ ಕಣ್ಣು ತೆಗೆದುಕೊಳ್ಳಬೇಕಾಗುತ್ತದೆ. ಇಲ್ಲದಿದ್ದರೆ ಬೇರೆಯವರಿಗೆ ಅಳವಡಿಸುವುದು ಕಷ್ಟ. ಈಗ ಮೃತಪಟ್ಟ ವ್ಯಕ್ತಿಯ ಕೊರೊನಾ ಪರೀಕ್ಷಾ ವರದಿ ಬರುವುದು ತಡವಾಗುತ್ತಿದೆ. ಸೋಂಕು‌ ತಗುಲಿದ್ದರೆ ಕಣ್ಣು ತೆಗೆಯಲು ಆಗದು. ಇದರಿಂದಾಗಿ ಕಣ್ಣು ಪಡೆದು ದೃಷ್ಟಿಹೀನರಿಗೆ ನೀಡಲು ಸಾಧ್ಯವಾಗುತ್ತಿಲ್ಲ.‌ ಕೆಲವರು ಗಂಭೀರ ನೇತ್ರ ಸಮಸ್ಯೆ ಇದ್ದರೂ ಆಸ್ಪತ್ರೆಗೆ ಬಂದು ಸೂಕ್ತ ಚಿಕಿತ್ಸೆ ಪಡೆಯದ ಕಾರಣ ಕಣ್ಣು ಕಳೆದುಕೊಂಡ ಉದಾಹರಣೆ ಇವೆ ಎನ್ನುತ್ತಾರೆ ದೃಷ್ಠಿ ಕಣ್ಣಿನ ಆಸ್ಪತ್ರೆಯ ನೇತ್ರತಜ್ಞ ಡಾ. ರವೀಂದ್ರನಾಥ್.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.