ದಾವಣಗೆರೆ: ದುರ್ಗಮ್ಮ ಜಾತ್ರೆಗೆ ತಂದ ಕುರಿಯನ್ನು ಮುಸ್ಲಿಂ ಸಂಪ್ರದಾಯದಂತೆ ಹಲಾಲ್ ಮಾಡುವ ಪದ್ಧತಿ ಬಿಟ್ಟು, ನಮ್ಮ ಹಿಂದೂ ಧರ್ಮದ ನಿಯಮದಂತೆ ಕಡಿಯಿರಿ ಎಂದು ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಮನವಿ ಮಾಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ವಿಚಾರ ಹಂಚಿಕೊಂಡಿರುವ ಅವರು, ಕುರಿಗಳನ್ನು ಹಲಾಲ್ ಮಾಡಲಾಗುತ್ತಿದೆ. ಇದು ಹಿಂದೂ ಧರ್ಮಕ್ಕೆ ಅಪಪ್ರಚಾರ ಮಾಡಿದಂತೆ. ತಾಯಿ ದುರ್ಗಮ್ಮನಿಗೆ ಅವಮಾನ ಮಾಡಿದಂತೆ. ಗೋ ಹಂತಕ ಮುಸ್ಲಿಮರಿಂದ ಹಲಾಲ್ ಮಾಡಿಸುವುದು ಬೇಡ ಎಂದು ಅವರು ಹೇಳಿದ್ದಾರೆ.
ಇದೇ ವೇಳೆ, ವಿಜೃಂಭಣೆಯಿಂದ ಶಾಂತ ರೀತಿಯಲ್ಲಿ ಹಬ್ಬ ಆಚರಿಸಿ, ದುಗ್ಗಮ್ಮ ಎಲ್ಲರಿಗೂ ಒಳ್ಳೆಯದು ಮಾಡಲಿ ಎಂದು ದಾವಣಗೆರೆ ಜನತೆಗೆ ಶುಭ ಹಾರೈಸಿದ್ದಾರೆ.