ETV Bharat / state

ಮಗುಚಿದ ಟ್ರ್ಯಾಕ್ಟರ್ ಅಡಿ ಸಿಲುಕಿದ ಚಾಲಕ.. ಕೊನೆಗೂ ಬಚಾವ್ ಆಯಿತು ಬಡ ಜೀವ..! ವಿಡಿಯೋ - ದಾವಣಗೆರೆಯಲ್ಲಿ ಮಗುಚಿದ ಟ್ರ್ಯಾಕ್ಟರ್ ಅಡಿ ಸಿಲುಕಿದ ಚಾಲಕನನ್ನು ರಕ್ಷಿಸಿದ ಜನರು, ದಾವನಗೆರೆ ಸುದ್ದಿ,

ಮಗುಚಿ ಬಿದ್ದ ಟ್ರ್ಯಾಕ್ಟರ್ ಅಡಿ ಸಿಲುಕಿದ ಚಾಲಕನನ್ನು ಜನ ಬಚಾವ್​ ಮಾಡಿ ಮಾನವೀಯತೆ ಮೆರೆದ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ.

People are rescued, People are rescued tractor driver, People are rescued tractor driver in Davanagere, Davanagere news, ಮಗುಚಿದ ಟ್ರ್ಯಾಕ್ಟರ್ ಅಡಿ ಸಿಲುಕಿದ ಚಾಲಕ, ಮಗುಚಿದ ಟ್ರ್ಯಾಕ್ಟರ್ ಅಡಿ ಸಿಲುಕಿದ ಚಾಲಕನನ್ನು ರಕ್ಷಿಸಿದ ಜನರು, ದಾವಣಗೆರೆಯಲ್ಲಿ ಮಗುಚಿದ ಟ್ರ್ಯಾಕ್ಟರ್ ಅಡಿ ಸಿಲುಕಿದ ಚಾಲಕನನ್ನು ರಕ್ಷಿಸಿದ ಜನರು, ದಾವನಗೆರೆ ಸುದ್ದಿ,
ಮಗುಚಿದ ಟ್ರ್ಯಾಕ್ಟರ್ ಅಡಿ ಸಿಲುಕಿದ ಚಾಲಕ
author img

By

Published : Mar 25, 2021, 1:55 PM IST

ದಾವಣಗೆರೆ: ಟ್ರ್ಯಾಕ್ಟರ್ ಮಗುಚಿ ಬಿದ್ದು, ಅದರ ಅಡಿ ಸಿಲುಕಿದ್ದ ಚಾಲಕನನ್ನ ಜನರು ಸಾಹಸ ಮಾಡಿ ರಕ್ಷಿಸಿರುವ ಘಟನೆ ಹರಿಹರ ತಾಲೂಕಿನ ಇಂಗಳಗುಂದಿಯಲ್ಲಿ ನಡೆದಿದೆ.

ಮಗುಚಿದ ಟ್ರ್ಯಾಕ್ಟರ್ ಅಡಿ ಸಿಲುಕಿದ ಚಾಲಕ

ಗ್ರಾಮಸ್ಥರ ಸಮಯ ಪ್ರಜ್ಞೆಯಿಂದ ಬಡ ಜೀವವೊಂದು ಪವಾಡ ಸದೃಶ್ಯ ರೀತಿಯಲ್ಲಿ ಪಾರಾಗಿದೆ. ಇಂಗಳಗುಂದಿಯಿಂದ ಹುಲಿಗಿನಹೊಳೆಯ ಬಸವೇಶ್ವರ ಜಾತ್ರೆಗೆ ವೇಗವಾಗಿ ಹೋಗುತ್ತಿರುವಾಗ ನಿಯಂತ್ರಣ ತಪ್ಪಿದ ಟ್ರ್ಯಾಕ್ಟರ್ ಭತ್ತದ ಗದ್ದೆಗೆ ಉರುಳಿದೆ. ಟ್ರ್ಯಾಕ್ಟರ್​ ಮುಗುಚಿ ಬಿದ್ದ ಪರಿಣಾಮ ಚಾಲಕ ವಾಹನದ ಅಡಿ ಸಿಲುಕಿಕೊಂಡಿದ್ದನು. ಚಾಲಕ ಇಂಜಿನ್ ಅಡಿ ಸಿಲುಕಿ ಅರ್ಧಗಂಟೆಗೂ ಅಧಿಕ ಕಾಲ ಸಾವು - ಬದುಕಿನ ಮಧ್ಯ ಹೋರಾಟ‌‌ ನಡೆಸಿದ್ದ.

ನರಳಾಡುತ್ತಿದ್ದ ಯುವಕನನ್ನು ಗಮನಿಸಿದ ಗ್ರಾಮಸ್ಥರು ಜೆಸಿಬಿ ಸಹಾಯದಿಂದ ಟ್ರ್ಯಾಕ್ಟರ್​​ ಮೇಲೆತ್ತಿ ಯುವಕನನ್ನು ಬದುಕಿಸಿದರು.‌ ಬದುಕಿರುವ ಯುವಕನನ್ನ ಇಂಗಳಗುಂದಿ ಗ್ರಾಮದ ಯೋಗೇಶ್ ಎಂದು ಹೇಳಲಾಗಿದೆ.

ಒಟ್ಟಿನಲ್ಲಿ ಯುವಕ ಯೋಗೇಶ್​ ಇಂಗಳಗುಂದಿ ಜನತೆ ಮರು ಜೀವ ನೀಡಿರುವುದರಲ್ಲಿ ಎರಡು ಮಾತಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.