ETV Bharat / state

ನಮ್ಮ ಪಕ್ಷದವರೇ ದಾವಣಗೆರೆ ಪಾಲಿಕೆ ಮೇಯರ್ ಆಗ್ತಾರೆ : ಸಂಸದ ಜಿಎಂ ಸಿದ್ದೇಶ್ವರ್ - mp-siddheshwar

ಕಾನೂನು ಪ್ರಕಾರ ಮತದಾನ ಮಾಡುವ ಅಧಿಕಾರ ಇದ್ದು, ಅವರೇ ಮತದಾರ ಪಟ್ಟಿಯಲ್ಲಿ ನೋಂದಾಯಿಸಿಕೊಂಡಿದ್ದಾರೆ. ಅವರು ಸದಸ್ಯರಾಗಿ ಮತದಾನ ಮಾಡಲಿದ್ದಾರೆ..

ಜಿಎಂ ಸಿದ್ದೇಶ್ವರ್
ಜಿಎಂ ಸಿದ್ದೇಶ್ವರ್
author img

By

Published : Feb 16, 2021, 10:31 PM IST

ದಾವಣಗೆರೆ : ಫೆಬ್ರವರಿ 24ಕ್ಕೆ ಬಿಜೆಪಿ ಪಕ್ಷದವರೇ ದಾವಣಗೆರೆ ಮಹಾನಗರ ಪಾಲಿಕೆ ಮೇಯರ್ ಆಗ್ತಾರೆ ಎಂದು ಸಂಸದ ಜಿ.ಎಂ‌ ಸಿದ್ದೇಶ್ವರ್ ಭವಿಷ್ಯ ನುಡಿದಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇದೇ 24ಕ್ಕೆ ಮೇಯರ್ ಚುನಾವಣೆ ನಿಗದಿಯಾಗಿದೆ. ನಮ್ಮ ಪಕ್ಷದಿಂದಾಗಲಿ ಅಥವಾ ಪಕ್ಷೇತರ ಸದಸ್ಯರು ಕಾಂಗ್ರೆಸ್ ಕೈ ಹಿಡಿಯುವುದಿಲ್ಲ. ಬದಲಾಗಿ ಕಾಂಗ್ರೆಸ್ ಪಕ್ಷದ ಮೂರ್ನಾಲ್ಕು ಜನ ಸದಸ್ಯರು ನಮ್ಮ ಪಕ್ಷಕ್ಕೆ ಬರಲ್ಲಿದ್ದಾರೆ ಎಂದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದ ಜಿ ಎಂ ಸಿದ್ದೇಶ್ವರ್..

ಸಚಿವ ಆರ್.ಶಂಕರ್ ಅವರ ಹೆಸರನ್ನು ಮತದಾರರ ಪಟ್ಟಿಯಲ್ಲಿ ಅಕ್ರಮವಾಗಿ ಸೇರಿಸಿರುವ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಾನೂನು ಪ್ರಕಾರ ಮತದಾನ ಮಾಡುವ ಅಧಿಕಾರ ಇದ್ದು, ಅವರೇ ಮತದಾರ ಪಟ್ಟಿಯಲ್ಲಿ ನೋಂದಾಯಿಸಿಕೊಂಡಿದ್ದಾರೆ. ಅವರು ಸದಸ್ಯರಾಗಿ ಮತದಾನ ಮಾಡಲಿದ್ದಾರೆ ಎಂದರು.

ಮೇಯರ್ ಯಾರಾಗಬೇಕೆಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಹಾಗೂ ಶಾಸಕ ಎಸ್ ಎ ರವೀಂದ್ರನಾಥ್, ಕೋರ್ ಕಮಿಟಿ ಸದಸ್ಯರು ಕೂತು 23 ರಂದು ನಿರ್ಧಾರ ಮಾಡ್ತೀವಿ, ಈತನಕ ಯಾವುದೇ ಸಭೆ ಆಗಿಲ್ಲ. ಶಾಸಕರಾದ ಎಸ್ ಎ ರವೀಂದ್ರನಾಥ್ ಅವರು ತಮ್ಮ ಮನೆಯಲ್ಲಿ ಪಾಲಿಕೆ ಸದಸ್ಯರನ್ನು ಕರೆದು ಬಿಗಿಯಾಗಿರುವಂತೆ ಸದಸ್ಯರಿಗೆ ತಿಳಿಸಿದ್ದಾರೆ ಹೊರೆತು ಯಾವುದೇ ಸಭೆ ನಡೆಸಿಲ್ಲ ಎಂದು ಸ್ಪಷ್ಟ ಪಡಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.