ದಾವಣಗೆರೆ: ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಅವರಿಗೆ ಕೊಲೆ ಬೆದರಿಕೆಯುಳ್ಳ ಅನಾಮಧೇಯ ಪತ್ರ ಬಂದಿದೆ.
ಅನಾಮಧೇಯ ವ್ಯಕ್ತಿಯೊಬ್ಬ ಪೋಸ್ಟಲ್ ಕಾರ್ಡ್ ಮೂಲಕ ಅತ್ಯಂತ ಅವಾಚ್ಯ ಶಬ್ದಗಳಲ್ಲಿ ಕೊಲೆ ಬೆದರಿಕೆ ಹಾಕಿದ್ದಾನೆ. ರಾಜನಹಳ್ಳಿ ಶಿವಕುಮಾರ್ ಈ ಹಿಂದೆ ಎಸ್.ಎಸ್.ಮಾಲ್ ತೆರವು ಮಾಡುವುದಾಗಿ ಹೇಳಿದ್ದರು. ಆದ್ರೀಗ ಎಸ್.ಎಸ್.ಮಾಲ್ ತಂಟೆಗೆ ಬಂದರೆ ಕೊಲೆ ಮಾಡುವುದಾಗಿ ಪತ್ರದಲ್ಲಿ ಎಚ್ಚರಿಕೆ ನೀಡಲಾಗಿದೆ. ಮಾಲ್ ತೆರವಿನ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಮಾತ್ರವಲ್ಲ ಕಾನೂನು ಪ್ರಕಾರ ಚರ್ಚೆ ನಡೆಸಿ ಒತ್ತುವರಿ ಜಾಗ ಪಡೆಯುವುದಾಗಿ ಶಿವಕುಮಾರ್ ಹೇಳಿದ್ದರು.ಓದಿ: ದಾವಣಗೆರೆ: ತಳಮಟ್ಟದಲ್ಲಿ ಪಕ್ಷ ಸಂಘಟಿಸಲು ಡಿ.4ರಂದು ಬಿಜೆಪಿಯ 'ಗ್ರಾಮ ಸ್ವರಾಜ್ಯ' ಸಮಾವೇಶ
ಬೆದರಿಕೆ ಪತ್ರ ಬಂದ ಹಿನ್ನೆಲೆಯಲ್ಲಿ ಬಸವನಗರ ಪೊಲೀಸ್ ಠಾಣೆಗೆ ದೂರು ನೀಡುವುದಾಗಿ ಶಿವಕುಮಾರ್ ಆಪ್ತ ಮೂಲಗಳು ತಿಳಿಸಿವೆ.
ಶಾಸಕ ಶಾಮನೂರ ಶಿವಶಂಕರಪ್ಪ ಪುತ್ರ ಉದ್ಯಮಿ ಎಸ್.ಎಸ್.ಗಣೇಶ್ ಅವರಿಗೆ ಎಸ್‌ಎಸ್ ಮಾಲ್ ಸೇರಿದೆ.