ದಾವಣಗೆರೆ: ಮಹಾನಗರ ಪಾಲಿಕೆಯ 34ನೇ ವಾರ್ಡ್ನಲ್ಲಿನ ಕೆಲ ಪ್ರದೇಶಗಳಲ್ಲಿ ಕಸ ಸುರಿಯಬಾರದು ಎಂಬ ಎಚ್ಚರಿಕೆ ನೀಡಿದರೂ ನಿಯಮ ಉಲ್ಲಂಘಿಸಿದವರಿಗೆ ಮಹಾನಗರ ಪಾಲಿಕೆಯ ಅಧಿಕಾರಿಗಳು ದಂಡ ವಿಧಿಸಿದ್ದಾರೆ.
ಹದಡಿ ರಸ್ತೆಯ ಮಾಗನೂರು ಬಸಪ್ಪ ಪೆಟ್ರೋಲ್ ಬಂಕ್‍ನ ಕಾಂಪೌಂಡ್ ಪಕ್ಕದಲ್ಲಿನ ಕಪ್ಪು ಚುಕ್ಕೆ ಪ್ರದೇಶದಲ್ಲಿ ಸಾರ್ವಜನಿಕರು ಮನೆಯ ಕಸ ತಂದು ಹಾಕುತ್ತಿರುವ ಬಗ್ಗೆ ರಸ್ತೆಯಲ್ಲಿ ಓಡಾಡುವ ಜನರು ಹಾಗೂ ಸುತ್ತಮುತ್ತಲಿನ ಸಾರ್ವಜನಿಕರು ಪಾಲಿಕೆಗೆ ಸಾಕಷ್ಟು ಬಾರಿ ದೂರು ನೀಡಿದ್ದರು. ವಾಹನಗಳಲ್ಲಿ ಕಸ ಹಾಕಲು, ಸುರಿಯಲು ಬಂದ ಸಾರ್ವಜನಿಕನಿಗೆ ಮಹಾನಗರ ಪಾಲಿಕೆಯ ಸಿಬ್ಬಂದಿ 2000 ರೂ. ದಂಡ ವಿಧಿಸಿದ್ದಾರೆ.
ಪ್ರತಿನಿತ್ಯ ಮನೆಯ ಹತ್ತಿರ ಬರುವ ಮನೆ-ಮನೆ ಕಸ ಸಂಗ್ರಹಣೆ ವಾಹನಗಳಿಗೆ ಕಸ ನೀಡಿ ನಗರದ ಸ್ವಚ್ಛತೆಗೆ ಸಹಕರಿಸಬೇಕೆಂದು ಮಹಾನಗರಪಾಲಿಕೆಯ ಆಯುಕ್ತರು ಮನವಿ ಮಾಡಿದ್ದಾರೆ.