ETV Bharat / state

'ಕೊರೊನಾ ಪೀಡಿತ ಸ್ಥಳಕ್ಕೆ ಯಾವ ಎಂಎಲ್ಎ ಹೋಗಲ್ಲ, ಭಂಡ ಧೈರ್ಯದಿಂದ ಬಂದಿದ್ದೇನೆ' - MP Renukacharya visits the infected village of Corona

ಹೊನ್ನಾಳಿ ತಾಲೂಕಿನ ಬೆನಕನಹಳ್ಳಿ ಗ್ರಾಮದಲ್ಲಿ ಆರು ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಆ ಗ್ರಾಮಕ್ಕೆ ತೆರಳಿ ಎಂ.ಪಿ.ರೇಣುಕಾಚಾರ್ಯ ಮಾಸ್ಕ್ ಹಾಗೂ ಫುಡ್ ಕಿಟ್ ವಿತರಿಸಿದರು.

MP Renukacharya
ಕೊರೊನಾ ಸೋಂಕು ದೃಢಪಟ್ಟ ಗ್ರಾಮಕ್ಕೆ ಎಂ. ಪಿ. ರೇಣುಕಾಚಾರ್ಯ ಭೇಟಿ
author img

By

Published : Jul 28, 2020, 8:43 PM IST

ದಾವಣಗೆರೆ: 'ಕೊರೊನಾ ಪಾಸಿಟಿವ್ ಬಂದ ಸ್ಥಳಕ್ಕೆ ಯಾವ ಶಾಸಕನೂ ಹೋಗಲ್ಲ. ಜನರು ವೋಟ್ ಹಾಕಿ ನನ್ನನ್ನು ಗೆಲ್ಲಿಸಿದ್ದಾರೆ. ಜನರ ಸೇವೆ ಮಾಡಬೇಕೆಂಬ ಕಾರಣಕ್ಕೆ ನಾನು ಬರುತ್ತಿದ್ದೇನೆ. ಭಂಡ ಧೈರ್ಯ ನನ್ನದು, ಹಾಗಾಗಿ ನಾನು ಇಲ್ಲಿಗೆ ಬಂದಿದ್ದೇನೆ' ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ಹೇಳಿದರು.

'ಹೊನ್ನಾಳಿ ತಾಲೂಕಿನ ಬೆನಕನಹಳ್ಳಿ ಗ್ರಾಮದಲ್ಲಿ ಆರು ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟ ಬಳಿಕ ಗ್ರಾಮಕ್ಕೆ ತೆರಳಿ ಮಾಸ್ಕ್ ಹಾಗೂ ಫುಡ್ ಕಿಟ್ ವಿತರಿಸಿ ಮಾತನಾಡಿದ ಅವರು, ಗಂಟಲು ದ್ರವ ಪರೀಕ್ಷೆ ಹಾಗೂ ಸರ್ವೇ ಕಾರ್ಯ ನಡೆಸಲು ಬರುವ ಕೊರೊನಾ ವಾರಿಯರ್ಸ್ ಜೊತೆ ಜಗಳಕ್ಕಿಳಿಯಬೇಡಿ. ಅವರಿಗೆ ಎಲ್ಲಾ ರೀತಿಯಲ್ಲಿ ಸಹಕಾರ ಕೊಡಿ' ಎಂದು ಜನರಲ್ಲಿ ಮನವಿ ಮಾಡಿದರು.

'ಜನರ ಆರೋಗ್ಯವೇ ಮುಖ್ಯ. ಕೊರೊನಾ ಊರು ಊರಿಗೆ ಹರಡುತ್ತದೆ. ಮಕ್ಕಳು, ವಯಸ್ಸಾದವರು ಇರುತ್ತಾರೆ. ಸೋಂಕು ಬಂದಾಕ್ಷಣ ಜೀವಕ್ಕೆ ಅಪಾಯ ಇಲ್ಲ. ಧೈರ್ಯವಾಗಿರಬೇಕು. ಆರೋಗ್ಯ ಸಮಸ್ಯೆ ಇದ್ದವರಿಗೆ ಅಪಾಯ ಅಷ್ಟೇ. ಪ್ರತಿಯೊಬ್ಬರು ಮಾಸ್ಕ್ ಧರಿಸಿ' ಎಂದು ಸಲಹೆ ನೀಡಿದರು.

ಕೊರೊನಾ ಸೋಂಕು ದೃಢಪಟ್ಟ ಗ್ರಾಮಕ್ಕೆ ಎಂ. ಪಿ. ರೇಣುಕಾಚಾರ್ಯ ಭೇಟಿ

'ಸರಿಯಾಗಿ ಕೆಲಸ ಮಾಡದಿದ್ದರೆ ಸಸ್ಪೆಂಡ್ ಮಾಡಿಸ್ತೀನಿ'

ಈ ವೇಳೆ ಸ್ಥಳದಲ್ಲಿದ್ದ ಪಿಡಿಒರನ್ನು ತರಾಟೆಗೆ ತೆಗೆದುಕೊಂಡ ರೇಣುಕಾಚಾರ್ಯ, 'ಮೊದಲು ಮಾಸ್ಕ್ ಹಾಕು. ನೀನೇ ಮಾಸ್ಕ್ ಹಾಕದಿದ್ದರೆ ಜನರಲ್ಲಿ ಜಾಗೃತಿ ಮೂಡಿಸುವುದಾದರೂ ಹೇಗೆ..? ನೀನು ನಿನ್ನೆ ಇರಲಿಲ್ಲ. ಎಲ್ಲಿ ಹೋಗಿದ್ದೆ?. ಜನರಿಗೆ ನೀರು ಸೇರಿದಂತೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಬೇಕು. ಸ್ವಲ್ಪ ಹೆಚ್ಚು ಕಮ್ಮಿ ಆದರೆ ನಿನ್ನನ್ನು ಸಸ್ಪೆಂಡ್ ಮಾಡ್ತೀವಿ. ಜನರು ಸಹ ವಿನಾ ಕಾರಣ ಪಿಡಿಒ ವಿರುದ್ಧ ದೂರು ಹೇಳಬಾರದು' ಎಂದು ಗದರಿದರು.

'ಕೊರೊನಾ ಅಂತಾ ಯಾರೂ ಭಯ ಪಡಬೇಡಿ. ಸಹಕಾರ ಕೊಡಿ. ಎಲ್ಲದನ್ನೂ ಸರ್ಕಾರ ಮಾಡುವುದಕ್ಕೆ ಆಗಲ್ಲ. ಪ್ರಧಾನಿ ನರೇಂದ್ರ ಮೋದಿ, ಸಿಎಂ ಯಡಿಯೂರಪ್ಪ ಅವರು ಸೂಚನೆ ನೀಡಿರುವುದರಿಂದ ಗ್ರಾಮಗಳಿಗೆ ತೆರಳಿ ಜಾಗೃತಿ ಕೆಲಸ ಮಾಡುತ್ತಿದ್ದೇನೆ. ನೀವು ಸಹ ಸಹಕಾರ ನೀಡಬೇಕು' ಎಂದು ಮನವಿ ಮಾಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.