ದಾವಣಗೆರೆ : ನನಗೆ ನಾಯಿ ಎಂದು ವಾಟಾಳ್ ನಾಗರಾಜ್ ಹೇಳಿದ್ದಾರೆ. ಹೌದು ನಾನು ನಾಯಿ, ನಿಯತ್ತಿನ ನಾಯಿ. ಆದ್ರೆ, ವಾಟಾಳ್ನಂತೆ ನಿಯತ್ತಿಲ್ಲದ ನಾಯಿ ಅಲ್ಲ ಎಂದು ಶಾಸಕ ರೇಣುಕಾಚಾರ್ಯ, ಕನ್ನಡಪರ ಹೋರಾಟಗಾರ ವಾಟಾಳ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ದಾವಣಗೆರೆಯಲ್ಲಿ ಮಾತನಾಡಿದ ಅವರು, ವಾಟಾಳ್ ನಾಗರಾಜ್ ಬ್ಲ್ಯಾಕ್ಮೇಲ್ ವ್ಯಕ್ತಿ. ಅವರು ಶಾಸಕರಾಗಿದ್ದಾಗ ಬೆಂಗಳೂರಿನ ಚಿಕ್ಕಪೇಟೆಯಲ್ಲಿ ವರ್ತಕರಿಂದ ಸುಲಿಗೆ ಮಾಡಿದ್ದಾರೆ. ಕೆಲ ಕನ್ನಡಪರ ಸಂಘಟನೆಗಳು ಹೊಟ್ಟೆ ಪಾಡಿಗೆ ಹೋರಾಟ ಮಾಡುತ್ತಿವೆ. ಇವೆಲ್ಲ ಬ್ಲ್ಯಾಕ್ ಮೇಲ್ ಸಂಘಟನೆಗಳು.
ರಾಜ್ಯದಲ್ಲಿ ಕೆಲವರು ಹೊಟ್ಟೆಪಾಡಿಗೆ ಇನ್ನೊಬ್ಬರನ್ನ ಬೆದರಿಸಿ ಹಾಗೂ ಸುಲಿಗೆ ಮಾಡಿ ಬದುಕುತ್ತಿವೆ. ಎಲ್ಲಾ ಸಂಘಟನೆಗಳಲ್ಲ, ಕೆಲ ಸಂಘಟನೆಗಳು ಮಾತ್ರ ಬ್ಲ್ಯಾಕ್ ಮೇಲ್ ಮಾಡ್ತಿವೆ, ನಿಮಗೆ ನಿಯತ್ತು ಇದ್ರೆ ಸ್ವಂತ ಹಣದಲ್ಲಿ ಖರ್ಚು ಮಾಡಿ ಕನ್ನಡಾಂಬೆ ಸೇವೆ ಮಾಡಿ. ರಾಜ್ಯ ಬಂದ್ಗೆ ಯಾರೂ ಸ್ಪಂದಿಸಲ್ಲ ಎಂದು ಕೆಂಡಾಮಂಡಲರಾದರು.
ಸಿ ಪಿ ಯೋಗೇಶ್ವರ್ಗೆ ಸಚಿವ ಸ್ಥಾನ ನೀಡುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಆ ಬಗ್ಗೆ ನಾನು ಹೆಚ್ಚು ಮಾತಾಡಲ್ಲ. ಮಾತಾಡಿದ್ರೆ ನನ್ನ ಘನತೆಗೆ ಧಕ್ಕೆ ಆಗುತ್ತದೆ. ಇದೊಂದೇ ವಿಚಾರವನ್ನ ನಾನು ಪದೇಪದೆ ಹೇಳಬಾರದು. ಇದರ ಬಗ್ಗೆ ಎಲ್ಲಿ ಮಾತಾಡಬೇಕೋ ಅಲ್ಲಿ ಮಾತಾಡುತ್ತೇನೆ. ಅದನ್ನ ಇಲ್ಲಿ ಮಾತಾಡುವುದು ಸರಿಯಲ್ಲ. ನನ್ನನ್ನು ಸಚಿವರನ್ನಾಗಿ ಮಾಡುವುದು ಪಕ್ಷ. ಹೀಗಾಗಿ ಸದ್ಯ ಗ್ರಾಪಂ ಚುನಾವಣೆ ಬಗ್ಗೆ ಗಮನ ಹರಿಸುವೆ ಎಂದು ಹೇಳಿದರು.