ETV Bharat / state

ಸಿಸಿ ಸೆಂಟರ್​​ನಲ್ಲಿ ವ್ಯವಸ್ಥೆ ಸರಿ ಇಲ್ಲ ಎಂದು ಸೋಂಕಿತ ಗರಂ - ಈ ಬಗ್ಗೆ ರೇಣುಕಾಚಾರ್ಯ ಹೇಳಿದ್ದೇನು? - MP Renukacharya latest news

ನನಗೆ ಸೋಂಕು ತಗುಲಿದಾಗ ನಾನೇ ಟಾಯ್ಲೆಟ್ ಕ್ಲೀನ್​​ ಮಾಡ್ಕೊಂಡಿದ್ದೇನೆ, ನಾನೇ ಬಟ್ಟೆ ಒಗೆದುಕೊಂಡಿದ್ದೇನೆ ಎಂದು ಶಾಸಕ ಎಂಪಿ ರೇಣುಕಾಚಾರ್ಯ ಆಕ್ರೋಶಗೊಂಡ ಸೋಂಕಿತನೋರ್ವನಿಗೆ ತಿಳಿಸಿ ಸಮಾಧಾನ ಪಡಿಸಿದರು.

MP Renukacharya guidance to covid infected people
ಕೋವಿಡ್ ಕೇರ್ ಸೆಂಟರ್​​ನಲ್ಲಿ ವ್ಯವಸ್ಥೆ ಸರಿ ಇಲ್ಲ ಎಂದು ಸೋಂಕಿತ ಗರಂ-ಎಂಪಿ ರೇಣುಕಾಚಾರ್ಯ ಹೇಳಿದ್ದೇನು?
author img

By

Published : May 8, 2021, 10:07 PM IST

ದಾವಣಗೆರೆ: ಕೋವಿಡ್ ಕೇರ್ ಸೆಂಟರ್​ನಲ್ಲಿ ಕೆಲಸಗಾರರು ಒಳ ಬರುತ್ತಿಲ್ಲ, ಕಸ ಹಾಗೇಯೇ ಉಳಿದುಕೊಂಡಿದೆ ಎಂದು ಆರೋಪಿಸಿದ ಸೋಂಕಿತನಿಗೆ ಶಾಸಕ ರೇಣುಕಾಚಾರ್ಯ ಪ್ರತಿಕ್ರಿಯಿಸಿ ನನಗೆ ಸೋಂಕು ತಗುಲಿದಾಗ ನಾನೇ ಟಾಯ್ಲೆಟ್ ಕ್ಲೀನ್​​ ಮಾಡ್ಕೊಂಡಿದ್ದೇನೆ, ನಾನೇ ಬಟ್ಟೆ ಒಗೆದುಕೊಂಡಿದ್ದೇನೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದರು.

ಕೋವಿಡ್ ಕೇರ್ ಸೆಂಟರ್​​ನಲ್ಲಿ ಎಂಪಿ ರೇಣುಕಾಚಾರ್ಯ ಮಾತು

ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಮಾದನಬಾವಿ ಗ್ರಾಮದ ಬಳಿ ಇರುವ ಕೋವಿಡ್ ಕೇರ್ ಸೆಂಟರ್ ಬಳಿ ಸಚಿವ ಭೈರತಿ ಬಸವರಾಜ್​ಗೆ ಕೋವಿಡ್ ಸೋಂಕಿತ ಯುವಕನೋರ್ವ ಏರು ಧ್ವನಿಯಲ್ಲಿ ತರಾಟೆಗೆ ತೆಗೆದುಕೊಂಡರು. ನಿನ್ನೆ ರಾತ್ರಿ ನಮಗೆ ಸರಿಯಾಗಿ ಊಟ ಕೊಟ್ಟಿಲ್ಲ. ವ್ಯವಸ್ಥೆ ಏನೂ ಸರಿ ಇಲ್ಲ, ವೈದ್ಯರನ್ನು ಕರೆದರೆ ಯಾರೂ ಕೂಡ ಸರಿಯಾಗಿ ಪ್ರತಿಕ್ರಿಯಿಸಲ್ಲ, ಮಾಡುವ ಕೆಲಸವನ್ನು ಅಚ್ಚು ಕಟ್ಟಾಗಿ ಮಾಡಿದ್ರೆ ನಾವೂ ಕೂಡ ಸಪೋರ್ಟ್ ಮಾಡುತ್ತೇವೆ. ಕೆಲಸದವರು ಕಸ ತೆಗೆದುಕೊಂಡು ಹೋಗೋದಿಲ್ಲ ಎಂದ ಯುವಕನನ್ನು ಸಮಾಧಾನ ಪಡಿಸಿದ ಶಾಸಕ ಎಂಪಿ ರೇಣುಕಾಚಾರ್ಯ, ನನಗೆ ಎರಡು ಬಾರಿ ಪಾಸಿಟಿವ್ ಬಂದಿತ್ತು. ನಾನೇ ಪಾತ್ರೆ ತೊಳೆದುಕೊಂಡೆ, ನಾನೇ ಟಾಯ್ಲೆಟ್ ಕ್ಲೀನ್ ಮಾಡಿಕೊಂಡೆ ಎಂದು ತಿಳಿಸಿದರು.

ಇದನ್ನೂ ಓದಿ: ರೆಮ್ಡೆಸಿವಿರ್ ಕಾಳಸಂತೆಯಲ್ಲಿ ಮಾರಾಟವಾಗುವುದು ಹೇಗೆ: ರಾಮಲಿಂಗಾ ರೆಡ್ಡಿ ಪ್ರಶ್ನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.