ದಾವಣಗೆರೆ: ಕೋವಿಡ್ನಿಂದ ಮೃತಪಟ್ಟ ವ್ಯಕ್ತಿಯ ಮೃತದೇಹವನ್ನ ಶಾಸಕ ಎಂ.ಪಿ ರೇಣುಕಾಚಾರ್ಯ ತಾವೇ ಆ್ಯಂಬುಲೆನ್ಸ್ನಲ್ಲಿ ಕೊಂಡೊಯ್ದಿದ್ದಾರೆ.
ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಸವಳಂಗ ಗ್ರಾಮದ ವ್ಯಕ್ತಿ ಕೋವಿಡ್ನಿಂದ ಇಂದು ಮುಂಜಾನೆ ಮೃತಪಟ್ಟಿದ್ದರು. ಶಾಸಕರು ತಂದೆ - ತಾಯಿ ಸ್ಮರಣಾರ್ಥವಾಗಿ ನೀಡಿದ್ದ ಆ್ಯಂಬುಲೆನ್ಸ್ನಲ್ಲಿ ಮೃತದೇಹ ರವಾನಿಸಿದಲ್ಲದೆ. ಮೃತರ ಕುಟುಂಬಸ್ಥರಿಗೆ 15 ಸಾವಿರ ವೈಯಕ್ತಿಕ ಪರಿಹಾರ ನೀಡಿದ್ದಾರೆ.
ಮೃತ ದೇಹ ಹೊತ್ತ ಆ್ಯಂಬುಲೆನ್ಸ್ ಅನ್ನು ಚಿತಾಗಾರದವರೆಗೂ ತಾವೇ ಚಲಾಯಿಸಿದ್ದಾರೆ. ಶಾಸಕರ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.
ಓದಿ: ಸರ್ಕಾರಿ ಆಸ್ಪತ್ರೆಗೆ ಸ್ಯಾನಿಟೈಸರ್ ಸಿಂಪಡಿಸಿ, ಆ್ಯಂಬುಲೆನ್ಸ್ ಚಲಾಯಿಸಿದ ರೇಣುಕಾಚಾರ್ಯ