ದಾವಣಗೆರೆ: ಹರಿಹರ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಗಲಭೆ ಪೂರ್ವ ನಿಯೋಜಿತ ಕೃತ್ಯ, ರಾಜಕೀಯ ಉದ್ದೇಶದಿಂದ ಈ ಗಲಭೆ ನಡೆದಿದೆ ಎಂದು ಶಾಸಕ ಎಸ್. ರಾಮಪ್ಪ ಆರೋಪಿಸಿದ್ದಾರೆ.
ನಗರದ ಕಾಲೇಜಿಗೆ ಭೇಟಿ ನೀಡಿದ ಮಾಹಿತಿ ಕಲೆ ಹಾಕಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿದ್ಯಾರ್ಥಿಗಳನ್ನು ದಾಳವಾಗಿರಿಸಿಕೊಂಡು ರಾಜಕೀಯ ಮಾಡಬಾರದು, ಕೇಸರಿಶಾಲು ಹಾಕಿಕೊಂಡು ಕಾಲೇಜಿನಲ್ಲಿ ರಾಜಕೀಯ ಬೇಡ ಎಂದರು.
ಹರಿಹರದಲ್ಲಿ ಹಿಂದೂ - ಮುಸಲ್ಮಾನರು ಒಗ್ಗಟ್ಟಾಗಿ ಜೀವಿಸುತ್ತಿದ್ದಾರೆ. ಮಕ್ಕಳಲ್ಲಿ ವಿಷಬೀಜ ಬಿತ್ತುವ ಕೆಲಸ ಮಾಡಬಾರದು. ಕೋರ್ಟ್ ಇದೆ, ಕಾನೂನು ಇದೆ, ಇದರ ಬಗ್ಗೆ ಯಾರೂ ಉದ್ವಿಗ್ನ ಆಗೋದು ಬೇಡ. ಎಲ್ಲ ವಿದ್ಯಾರ್ಥಿಗಳು ಕಷ್ಟಪಟ್ಟು ವಿದ್ಯಾಭ್ಯಾಸ ಮಾಡಬೇಕು ಎಂದು ಮನವಿ ಮಾಡಿದರು.