ದಾವಣಗೆರೆ: ಹರಿಹರ ತಾಲೂಕಿನ ಪಂಚಮಸಾಲಿ ಮಠಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ. ಎಸ್. ಈಶ್ವರಪ್ಪ ಭೇಟಿ ನೀಡಿದರು.
ಈ ವೇಳೆ ಪಂಚಮಸಾಲಿ ಜಗದ್ಗುರು ಪೀಠಾಧಿಪತಿ ವಚನಾನಂದ ಮಹಾಸ್ವಾಮೀಜಿ ಅವರ ಆಶೀರ್ವಾದವನ್ನು ಸಚಿವರು ಪಡೆದರು. ಬಳಿಕ ಸ್ವಾಮೀಜಿ ಅವರ ಜೊತೆ ಕೆಲಕಾಲ ಚರ್ಚಿಸಿದರು.
ಸಚಿವ ಸಂಪುಟ ವಿಸ್ತರಣೆ ಹಾಗೂ ಪ್ರಸ್ತುತ ರಾಜಕೀಯ ವಿದ್ಯಮಾನಗಳ ಬಗ್ಗೆಯೂ ಶ್ರೀಗಳ ಜೊತೆ ಈಶ್ವರಪ್ಪ ಚರ್ಚೆ ನಡೆಸಿದರು ಎಂದು ಮಠದ ಮೂಲಗಳು ತಿಳಿಸಿವೆ.
ಬೆಳ್ಳೂಡಿಯ ಕನಕಪೀಠಕ್ಕೆ ಭೇಟಿ ನೀಡಿದ್ದ ಸಚಿವ ಈಶ್ವರಪ್ಪ ಅವರು, ನಿರಂಜನಾಂದಪುರಿ ಸ್ವಾಮೀಜಿ ಜೊತೆ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಕುರುಬ ಸಮುದಾಯವನ್ನು ಎಸ್ಟಿ ಮೀಸಲಾತಿ ಸೇರ್ಪಡೆಗೊಳಿಸುವ ಕುರಿತ ಹೋರಾಟ ಸಂಬಂಧ ಮಾತನಾಡಿದರು.