ದಾವಣಗೆರೆ : ಮತ್ತೆ ನಾನು ಮಂತ್ರಿ ಆಗೋದಕ್ಕೆ ಕಾಗಿನೆಲೆ ಶ್ರೀಗಳೇ ಕಾರಣ. ಎಲ್ಲಾ ಸ್ವಾಮೀಜಿಗಳ ಆಶೀರ್ವಾದ ನನ್ನ ಮೇಲೆ ಇತ್ತು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದರು.
ಜಿಲ್ಲೆಯ ಹರಿಹರ ತಾಲೂಕಿನ ಬೆಳ್ಳೂಡಿ ಕಾಗಿನೆಲೆ ಮಠದಲ್ಲಿ ನಿರಂಜನಾನಂದಪುರಿ ಸ್ವಾಮೀಜಿ ಭೇಟಿ ಮಾಡಿ ಆಶೀರ್ವಾದ ಪಡೆದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನಗೆ ಇಂತಹುದೇ ಖಾತೆ ಬೇಕೆಂದು ನಾನು ಕೇಳಿರಲಿಲ್ಲ, ಮೊದಲಿದ್ದ ಖಾತೆ ದೊರೆತಿರುವುದು ತೃಪ್ತಿ ಇದೆ. ಕಾಗಿನೆಲೆ ಶ್ರೀಗಳ ಆಶೀರ್ವಾದದಿಂದ ಸಚಿವ ಸ್ಥಾನ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಶ್ರೀಗಳ ಆಶೀರ್ವಾದ ಪಡೆಯುತ್ತಿದ್ದೇನೆ ಎಂದರು.
ಎಂಟಿಬಿ ಅವರಿಗೆ ಖಾತೆ ಅಸಮಧಾನ : ಖಾತೆ ಅಸಮಾಧಾನ ಇದ್ದಿದ್ದು ನಿಜ. ಈಗಿರುವ ಖಾತೆ ಸಮಾಧಾನ ತಂದಿದೆ ಎಂದು ಎಂಟಿಬಿ ಹೇಳಿದ್ದಾರೆ. ಸಿಎಂ ಅವರು ಕರೆದು ಸಮಾಧಾನ ಮಾಡಿದ್ದಾರೆ. ಆನಂದ್ ಸಿಂಗ್ ಅವರ ಬಗ್ಗೆ ನನಗೆ ಗೊತ್ತಿಲ್ಲ, ಎಲ್ಲಾ ಶ್ರೀಗಳ ಆಶೀರ್ವಾದ ಪಡೆಯುತ್ತಿದ್ದೇನೆ ಎಂದರು.
ಓದಿ: ರಾಜ್ಯದಲ್ಲಿ ಕೋವಿಡ್ ಮರಣ ಪ್ರಮಾಣ ಕೊಂಚ ಇಳಿಕೆ: ಹೊಸದಾಗಿ 1,598 ಮಂದಿಗೆ ಸೋಂಕು
ಪಂಚಮಸಾಲಿ ಶ್ರೀವಚನಾನಂದ ಸ್ವಾಮೀಜಿ ಭೇಟಿಯಾದ ಸಚಿವರು : ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹನಗವಾಡಿ ಬಳಿಯ ಪಂಚಮಸಾಲಿ ಮಠಕ್ಕೆ ಭೇಟಿ ನೀಡಿ ಸಚಿವರು, ಪಂಚಮಸಾಲಿ ಶ್ರೀವಚನಾನಂದ ಸ್ವಾಮೀಜಿ ಆಶೀರ್ವಾದ ಪಡೆದರು. ಈಗಾಗಲೇ ಮಾದಾರ ಚೆನ್ನಯ್ಯ ಶ್ರೀ, ಕಾಗಿನೆಲೆ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಭೇಟಿ ಬಳಿಕ ವಚನಾನಂದ ಸ್ವಾಮೀಜಿ ಭೇಟಿ ಮಾಡಿ ಸನ್ಮಾನ ಸ್ವೀಕರಿಸಿದರು.