ETV Bharat / state

ದಾವಣಗೆರೆ - ಚಿತ್ರದುರ್ಗದಿಂದ ಕಾಂಗ್ರೆಸ್​ನಲ್ಲಿ ಸ್ಪರ್ಧಿಸಲು ಯಾವುದೇ ಗಂಡಸರು ಇರಲಿಲ್ವಾ: ಭೈರತಿ ಬಸವರಾಜ್​

ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಅವರು ಕಾಂಗ್ರೆಸ್ ವಿರುದ್ಧ ದಾವಣಗೆರೆಯಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

Minister Bhairathi Basavaraj gave controversial statement against congress
ಕಾಂಗ್ರೆಸ್​​ ವಿರುದ್ಧ ಭೈರತಿ ಬಸವರಾಜ್​ ವಿವಾದಾತ್ಮಕ ಹೇಳಿಕೆ
author img

By

Published : Dec 3, 2021, 4:47 PM IST

ದಾವಣಗೆರೆ: ವಿಧಾನ ಪರಿಷತ್‌ ಚುನಾವಣೆಗೆ ದಾವಣಗೆರೆ ಮತ್ತು ಚಿತ್ರದುರ್ಗದಿಂದ ಸ್ಪರ್ಧಿಸಲು ಕಾಂಗ್ರೆಸ್‌ನಲ್ಲಿ ಯಾವುದೇ ಗಂಡಸರು ಇರಲಿಲ್ವಾ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ‌

ಕಾಂಗ್ರೆಸ್​ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್

ನಗರದ ಜಿಎಂಐಟಿ ಗೆಸ್ಟ್‌ಹೌಸ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್​​​ನವರು ಮತದಾರರಿಗೆ ಆಮಿಷ ತೋರಿಸುತ್ತಿದ್ದಾರೆ. ಚಿತ್ರದುರ್ಗ ಪರಿಷತ್‌ ಕ್ಷೇತ್ರಕ್ಕೆ ಕಾಂಗ್ರೆಸ್‌ ಅಭ್ಯರ್ಥಿ ಇರಲಿಲ್ಲ. ಅದರ ಸಲುವಾಗಿ ಬೆಂಗಳೂರು ಮೂಲದ ಸೋಮಶೇಖರ್‌ ಅವರನ್ನು ಬೆಂಗಳೂರಿನಿಂದ ಕರೆ ತಂದಿದ್ದಾರೆ.

ದಾವಣಗೆರೆ ಮತ್ತು ಚಿತ್ರದುರ್ಗದಲ್ಲಿ ಯಾವುದೇ ಗಂಡಸರು ಇರಲಿಲ್ವಾ, ಯಾರೋ ಹಣ ಹಂಚುತ್ತಾರೆ ಎಂದು ಸ್ವಾಭಿಮಾನ ಕಳೆದುಕೊಳ್ಳುವುದು ಬೇಡ ಎಂದು ಮತದಾರರಿಗೆ ಕಿವಿ ಮಾತು ಹೇಳಿದರು.

ಕಾಂಗ್ರೆಸ್‌ ಅಭ್ಯರ್ಥಿ ಕೆಜಿಎಫ್‌ ಬಾಬು ಬಗ್ಗೆ ಆರೋಪ:

ಕೆಜಿಎಫ್‌ ಬಾಬು ಅವರನ್ನು ಸುಖಾ ಸುಮ್ಮನೇ ಟೀಕೆ ಮಾಡುತ್ತಿಲ್ಲ. ಕೆಜಿಎಫ್‌ ಬಾಬು ಅವರ ಮಗಳೇ ಅವರ ವಿರುದ್ಧ ದೂರು ನೀಡಿದ್ದಾರೆ. ಇದೇ ಆಧಾರದಲ್ಲಿ ಸೋಮಶೇಖರ್‌ ಆರೋಪ ಮಾಡಿದ್ದಾರೆ. ಅವರ ಚರಿತ್ರೆ ಏನು ಎಂಬುದನ್ನು ದಾಖಲೆ ಸಮೇತ ಬಿಡುಗಡೆ ಮಾಡಿದ್ದಾರೆ. ಅವರ ಮಗಳು ನೀಡಿದ ದೂರನ್ನು ಯಾರಾದ್ರೂ ಓದಿದ್ರೆ ಬಾಬು ಅವರಿಗೆ ಒಂದು ಮತವನ್ನು ನೀಡುವುದಿಲ್ಲ. ಕೆಜಿಎಫ್​​​​ನಿಂದ ಅವರನ್ನು 3 ವರ್ಷಗಳ ಕಾಲ ಗಡಿ ಮಾಡಿದ್ದು ಏಕೆ, ಅಂತವರಿಗೆ ಮತ ಹಾಕಬೇಕಾ ಎಂದ ಪ್ರಶ್ನಿಸಿದರು.

ಇದನ್ನೂ ಓದಿ: Omicron ಭೀತಿ: ಮಾಲ್​, ಥಿಯೇಟರ್​​ಗೆ 2 ಡೋಸ್​ ಲಸಿಕೆ ಕಡ್ಡಾಯ.. ಶಾಲೆ, ಮದುವೆಗೆ ಏನೆಲ್ಲಾ ಹೊಸ ನಿಯಮ: ಇಲ್ಲಿದೆ ವಿವರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.