ದಾವಣಗೆರೆ : ವೀರ ಸಾವರ್ಕರ್ ಫೋಟೋಗಳನ್ನು ನಾವೆಲ್ಲ ಮನೆಗಳಲ್ಲಿ ಹಾಕಿಕೊಂಡಿದ್ದೇವೆ, ಅದು ನಮಗೆ ಹೆಮ್ಮೆಯ ಸಂಗತಿ. ಏರಿಯಾಗಳಲ್ಲಿ, ನಗರ ಪ್ರದೇಶಗಳಲ್ಲಿ ಸಾವರ್ಕರ್ ಫ್ಲೆಕ್ಸ್ ಅಳವಡಿಕೆ ಮಾಡುತ್ತೇವೆ. ತಾಕತ್ ಇದ್ದರೆ ಅದನ್ನು ತಡೆಯಿರಿ ಎಂದು ಹೊನ್ನಾಳಿ ಕ್ಷೇತ್ರದ ಬಿಜೆಪಿ ಶಾಸಕ ಎಂ ಪಿ ರೇಣುಕಾಚಾರ್ಯ ಕಾಂಗ್ರೆಸ್ ಮುಖಂಡರಿಗೆ ಸವಾಲು ಹಾಕಿದರು.
ಜಿಲ್ಲೆಯ ಹೊನ್ನಾಳಿಯಲ್ಲಿ ಮಾತನಾಡಿದ ಅವರು, ಸತ್ತವರ ಜಯಂತಿ ಮಾಡಲು ಇಸ್ಲಾಂ ಧರ್ಮದಲ್ಲಿ ಅವಕಾಶ ಇಲ್ಲ. ಆದರೆ, ಕಾಂಗ್ರೆಸ್ ಅಲ್ಪಸಂಖ್ಯಾತರ ಮತಕ್ಕಾಗಿ ಟಿಪ್ಪು ಜಯಂತಿ ಆಚರಣೆ ಆರಂಭಿಸಿ ಕೋಮು ಸಂಘರ್ಷ ಉಂಟುಮಾಡಿತು. ನಾವು ಸಾವರ್ಕರ್ ಫೋಟೋ ಅಳವಡಿಸಿಕೊಳ್ಳುವ ರೀತಿಯಲ್ಲಿ ಕಾಂಗ್ರೆಸ್ನವರು ಟಿಪ್ಪು ಫೋಟೋ ಅಳವಡಿಸಿಕೊಳ್ಳಲಿ ಎಂದು ಹೇಳಿದರು.
ವೀರ ಸಾವರ್ಕರ್ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಮಹನೀಯ. ಆದರೆ ಕಾಂಗ್ರೆಸ್ನವರು ಸಾವರ್ಕರ್ ಯಾವ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿಲ್ಲ ಎಂದು ಹೇಳುತ್ತಾರೆ. ಟಿಪ್ಪು ಯಾವ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದಾರೆ ಎಂದು ಕಾಂಗ್ರೆಸ್ನವರು ಹೇಳಲಿ ನೋಡೋಣ ಎಂದರು.
ಮೊಟ್ಟೆ ಎಸೆದವನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತ : ಮೊಟ್ಟೆ ಎಸೆದವನು ಕಾಂಗ್ರೆಸ್ ಕಾರ್ಯಕರ್ತ ಎಂಬುದನ್ನು ಅವನೇ ಒಪ್ಪಿಕೊಂಡಿದ್ದಾನೆ. ನಮ್ಮ ನಾಯಕರು ಪ್ರವಾಸ ಮಾಡುವಾಗ ಬೇಕಿದ್ರೆ ಪ್ರತಿಭಟನೆ ಮಾಡಿಸಿ ನೋಡೋಣ ಎಂದು ಕಾಂಗ್ರೆಸ್ಗೆ ಮತ್ತೊಂದು ಸವಾಲನ್ನು ರೇಣುಕಾಚಾರ್ಯ ಹಾಕಿದರು.
ಇದನ್ನೂ ಓದಿ : ಮೊಟ್ಟೆ ಹೊಡೆಯುವುದು, ಟೊಮೆಟೋ ಎಸೆಯುವುದನ್ನು ನಾನು ಖಂಡಿಸುತ್ತೇನೆ: ಎಂಟಿಬಿ ನಾಗರಾಜ್