ದಾವಣಗೆರೆ: ಸಚಿವ ಸಂಪುಟ ವಿಸ್ತರಣೆಯಾಗುತ್ತಿದ್ದಂತೆ ಭಿನ್ನಮತ ಸ್ಫೋಟ ಆಗಿದೆ. ಸಚಿವ ಸ್ಥಾನ ಸಿಗದಿದ್ದಕ್ಕೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ತಮ್ಮ ಫೆಸ್ ಬುಕ್ ಖಾತೆಯಲ್ಲಿ ಅಸಮಾಧಾನ ಹೊರಹಾಕಿದ್ದಾರೆ.
ಸೋತವರಿಗೆ, ಬ್ಲ್ಯಾಕ್ ಮೇಲ್ ಮಾಡಿದವರಿಗೆ ಸಚಿವ ಸ್ಥಾನ ನೀಡಿರುವುದರಿಂದ ಪಕ್ಷದ ವರಿಷ್ಠರ ಜೊತೆ ಮತ್ತೆ ಕೂಲಂಕಷವಾಗಿ ಚರ್ಚಿಸುತ್ತೇನೆ. ಜಾತಿ ರಾಜಕೀಯ ಮಾಡಿ ನನಗೆ ಅಭ್ಯಾಸವಿಲ್ಲ. ಸೋತವರಿಗೆ ಸಚಿವ ಸ್ಥಾನ ನೀಡಿರುವುದು ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನ ಸರ್ವ ಜನಾಂಗದ ಮತದಾರರಿಗೆ ಮಾಡಿದ ಅಪಮಾನ. ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನ ಅಭಿವೃದ್ಧಿಯೆ ನನ್ನ ಧ್ಯೇಯ ಎಂದು ಶಾಸಕ ಎಂಪಿ ರೇಣುಕಚಾರ್ಯ ತೀವ್ರ ಅಸಮಧಾನ ಹೊರಹಾಕಿದ್ದಾರೆ.
![ಶಾಸಕ ರೇಣುಕಾಚಾರ್ಯ ಬೇಸರ](https://etvbharatimages.akamaized.net/etvbharat/prod-images/kn-dvg-03-13-blackmail-av-7204336_13012021230341_1301f_1610559221_386.jpg)
ಇದಕ್ಕೆ ಕಾಮೆಂಟ್ ಮಾಡಿರುವ ಕೆಲವರು ಶಾಸಕ ಕುಮಾರ್ ಬಂಗಾರಪ್ಪನವರನ್ನು ನೋಡಿ ಕಲಿಯಿರಿ, ಸಚಿವರು ಆಗೋದಲ್ಲ ಶಾಸಕರಾಗಿಯೂ ಕೆಲಸಮಾಡ್ಬಹುದು ಎಂದು ಶಾಸಕ ಎಂಪಿ ರೇಣುಕಚಾರ್ಯುಗೆ ಸಲಹೆ ನೀಡಿದ್ದಾರೆ.