ದಾವಣಗೆರೆ: ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಅವರ ದರ್ಶನಕ್ಕೆ ಬಂದವರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ ಘಟನೆ ನಗರದ ಬಾಪೂಜಿ ಗೆಸ್ಟ್ಹೌಸ್ ಮುಂಭಾಗ ನಡೆದಿದೆ.
ಬೆಳಗ್ಗೆಯಿಂದಲೇ ಗೆಸ್ಟ್ಹೌಸ್ ಮುಂದೆ ಜನರು ಜಮಾಯಿಸತೊಡಿದ್ದಾರೆ. ಬಿಸಿಲಿನ ಕಾವು ಏರುತ್ತಿದ್ದಂತೆ ಅಭಿಮಾನಿಗಳು ಬರುವುದು ಜಾಸ್ತಿಯಾಯಿತು. ಗೇಟ್ ಹಾಕುವ ಮೂಲಕ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಆದರೂ ಜನರು ಒಳನುಗ್ಗಲು ಯತ್ನಿಸಿದಾಗ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಲಾಠಿಚಾರ್ಜ್ ಮಾಡಿದರು.
ಪೊಲೀಸರು ಲಾಠಿ ಬೀಸುತ್ತಿದ್ದಂತೆ ಯುವಕರು, ಯುವತಿಯರು, ಮಹಿಳೆಯರು ಚೆಲ್ಲಾಪಿಲ್ಲಿಯಾಗಿ ಓಡಿದರು. ಡಿ ಬಾಸ್.. ಡಿ ಬಾಸ್.. ನೋಡ್ಬೇಕು ಎಂಬ ಘೋಷಣೆಯನ್ನು ಹಾಕುತ್ತಾ ಯುವಕರು ಕುಣಿದು ಕುಪ್ಪಳಿಸಿದ್ದಾರೆ.