ETV Bharat / state

ದಾವಣಗೆರೆ: ಕನ್ನಿಕಾ ಪರಮೇಶ್ವರಿಗೆ ₹3 ಲಕ್ಷಕ್ಕೂ ಅಧಿಕ ನೋಟುಗಳಿಂದ 'ಧನಲಕ್ಷ್ಮಿ ಅಲಂಕಾರ' - etv bharat kannada

ದಾವಣಗೆರೆಯ ಕನ್ನಿಕಾ ಪರಮೇಶ್ವರಿ ದೇವಿಗೆ ಧನಲಕ್ಷ್ಮಿ ಅಲಂಕಾರ ಮಾಡಲಾಗಿದೆ.

Etv Bharatkannika-parameshwari-devi-is-decorated-with-currency-notes-in-davanagere
ದಾವಣಗೆರೆ: ಕನ್ನಿಕಾ ಪರಮೇಶ್ವರಿ ದೇವಿಗೆ ₹3 ಲಕ್ಷಕ್ಕೂ ಅಧಿಕ ಕರೆನ್ಸಿ ನೋಟುಗಳಿಂದ ಅಲಂಕಾರ
author img

By ETV Bharat Karnataka Team

Published : Oct 24, 2023, 6:56 PM IST

Updated : Oct 24, 2023, 7:55 PM IST

ಕನ್ನಿಕಾ ಪರಮೇಶ್ವರಿ ದೇವಿಗೆ ಧನಲಕ್ಷ್ಮಿ ಅಲಂಕಾರ

ದಾವಣಗೆರೆ: ದಸರಾ ಪ್ರಯುಕ್ತ ದಾವಣಗೆರೆಯಾದ್ಯಂತ ಬಹುತೇಕ ಎಲ್ಲಾ ದೇವತೆಗಳಿಗೆ ವಿಶೇಷ ಅಲಂಕಾರ ಮಾಡಲಾಗಿದೆ. ದೇವಾಲಯಗಳಲ್ಲಿ ಹೂವು, ಕುಂಕುಮ, ಎಲೆ, ಉತ್ತುತ್ತಿ, ತರಕಾರಿ, ಹಣ್ಣು-ಹಂಪಲುಗಳಿಂದ ತರಹೇವಾರಿ ಅಲಂಕಾರ ಮಾಡುವುದು ಸಾಮಾನ್ಯ. ಆದರೆ ದಾವಣಗೆರೆ ನಗರದ ಕನ್ನಿಕಾ ಪರಮೇಶ್ವರಿ ದೇವಿಗೆ ಕರೆನ್ಸಿ ನೋಟುಗಳಿಂದ ಧನಲಕ್ಷ್ಮಿ ಅಲಂಕಾರ ಮಾಡಲಾಗಿದ್ದು, ಭಕ್ತರ ಗಮನ ಸೆಳೆಯುತ್ತಿದೆ.

ದೊಡ್ಡಪೇಟೆಯ ಕನ್ನಿಕಾ ಪರಮೇಶ್ವರಿ ದೇವಿಗೆ ನವರಾತ್ರಿಯ ಒಂಭತ್ತು ದಿನಗಳ ಕಾಲ ವಿವಿಧ ಅಲಂಕಾರ ಮಾಡಲಾಗಿತ್ತು. ಹತ್ತನೇ ದಿನವಾದ ಇಂದು ಲಕ್ಷಾಂತರ ರೂಪಾಯಿ ಮೌಲ್ಯದ ಕರೆನ್ಸಿ ನೋಟುಗಳಿಂದ ದೇವಿಯನ್ನು ದೇವಸ್ಥಾನ ಕಮಿಟಿಯ ಸದಸ್ಯರು ವಿಶೇಷವಾಗಿ ಶೃಂಗರಿಸಿದ್ದಾರೆ. 3,20,000 ಸಾವಿರ ರೂ. ಮೌಲ್ಯದ ನೋಟುಗಳಿಂದ ದೇವಸ್ಥಾನದ ಗರ್ಭಗುಡಿ ಆಕರ್ಷಣೀಯಗೊಳಿಸಲಾಗಿದೆ. ಇದರಲ್ಲಿ 10, 20, 50 ಸೇರಿದಂತೆ 100, 200 ಹಾಗೂ 500 ರೂ. ಮುಖಬೆಲೆಯ ನೋಟುಗಳಿವೆ.

ಭಕ್ತರು ತಂಡೋಪತಂಡವಾಗಿ ದೇವಸ್ಥಾನಕ್ಕೆ ಆಗಮಿಸುತ್ತಿದ್ದಾರೆ. ಇಂದು ಮತ್ತು ನಾಳೆ ವಿಶೇಷ ಅಲಂಕಾರವನ್ನು ನೋಡಲು ಅವಕಾಶವಿದೆ. ಗರ್ಭಗುಡಿ ಮುಂದೆ ಬೃಹದಾಕಾರದ ಎರಡು ಹಣದ ಮಾಲೆಯನ್ನು ಹಾಕಲಾಗಿದ್ದು, ಕಣ್ಮನ ಸೆಳೆಯುತ್ತಿದೆ.

ಅರ್ಚಕ ಸಂತೋಷ್ ದೇಸಾಯಿ ಮಾತನಾಡಿ, "ದೇವಿಗೆ ಧನಲಕ್ಷ್ಮಿ ಅಲಂಕಾರ ಮಾಡಿದ್ದೇವೆ. ಈ ರೀತಿಯ ಅಲಂಕಾರವನ್ನು ಕಳೆದ 20 ವರ್ಷಗಳಿಂದ ಮಾಡಲಾಗುತ್ತಿದೆ. ಈ ಬಾರಿ ವಿವಿಧ ಮುಖಬೆಲೆಯ 3,20,000 ರೂಪಾಯಿ ಕರೆನ್ಸಿ ನೋಟುಗಳನ್ನು ಬಳಸಿದ್ದೇವೆ. ಈ ಅಲಂಕಾರಕ್ಕೆ ಬ್ಯಾಂಕ್‌ನಿಂದ ತಂದ, ಭಕ್ತರು ಕೊಟ್ಟ ಹೊಸ ಕರೆನ್ಸಿಯನ್ನೇ ಬಳಸಿದ್ದೇವೆ" ಎಂದು ತಿಳಿಸಿದರು.

ಭಕ್ತೆ ಹೇಮಾ ಶ್ರೀನಿವಾಸ್ ಮಾತನಾಡಿ, "ನವರಾತ್ರಿಯ 9 ದಿನ 9 ಅಲಂಕಾರಗಳನ್ನು ಮಾಡುವ ಮೂಲಕ ದಸರಾ ಆಚರಣೆ ಮಾಡಿದ್ದೇವೆ. ಅಮ್ಮನವರಿಗೆ ಧನಲಕ್ಷ್ಮಿ ಅಲಂಕಾರ ಮಾಡಲಾಗಿದೆ. ದೇವಿ ಬಹಳಷ್ಟು ಸುಂದರವಾಗಿ ಕಾಣಿಸುತ್ತಿದ್ದಾಳೆ. ರೋಮಾಂಚನವಾಗುತ್ತದೆ" ಎಂದು ಹೇಳಿದರು.

ಇದನ್ನೂ ಓದಿ: ವಿಜಯನಗರ: ದೇವರ ಬನ್ನಿ ಉತ್ಸವ ಸಂಭ್ರಮ, 20ಕ್ಕೂ ಹೆಚ್ಚು ಶಕ್ತಿ ದೇವತೆಗಳ ಆರಾಧನೆ

Last Updated : Oct 24, 2023, 7:55 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.