ದಾವಣಗೆರೆ: ಅಹಿಂಸೆಯ ತತ್ವ ಸಾರುವ ಜೈನ ಧರ್ಮದ ಯುವಕರು ನಿರ್ಗತಿಕರಿಗೆ ಆಸರೆಯಾಗುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ದಾವಣಗೆರೆ ಜಿಲ್ಲೆಯಲ್ಲಿ ಜೈನ ಧರ್ಮದ 24 ತೀರ್ಥಂಕರರಲ್ಲಿ ಇಪ್ಪತ್ತರಡನೇ ತೀರ್ಥಂಕರರಾದ ನೇಮಿನಾಥ ಭಗವಾನ್ ಜನ್ಮದಿನದ ಪ್ರಯುಕ್ತ ನಿರ್ಗತಿಕರು, ಕಡುಬಡವರಿಗೆ ಜೈನ ಸಮುದಾಯದವರು ಸಹಾಯ ಮಾಡಿದರು.
ಸುಮಾರು ನೂರಕ್ಕು ಹೆಚ್ಚು ನಿರ್ಗತಿಕರನ್ನು ಕರೆತಂದು ಬೆಂಗಳೂರು ರಸ್ತೆಯಲ್ಲಿರುವ ಸಮುದಾಯ ಭವನದಲ್ಲಿ ಕ್ಷೌರ, ಸ್ನಾನ, ಹೊಸ ಬಟ್ಟೆ ತೊಡಿಸಿದ ಯುವಕರು, ಆರ್ಥಿಕ ಸಹಾಯ ಮಾಡಿದರು.
ನಿರ್ಗತಿಕರಿಗಲ್ಲದೆ ಬಡವರ್ಗದ ಜನರಿಗೂ ಊಟ ನೀಡುವ ಮೂಲಕ ಹಸಿವು ನೀಗಿಸಿದ್ದಾರೆ. ಜೈನ ಸಮುದಾಯದ ಯುವಕರ ಈ ಕಾರ್ಯ ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಗಿದೆ.