ದಾವಣಗೆರೆ: ಭಾರತದಲ್ಲಿ ಹುಟ್ಟಿದ್ದೇವೆ ಎನ್ನುವುದಕ್ಕೆ ನಮಗೆ ಹೆಮ್ಮೆ ಆಗುತ್ತಿದೆ, ಖಾರ್ಕೀವ್ ನಿಂದ ನಡೆದುಕೊಂಡು ಬರುವಾಗ ತ್ರಿವರ್ಣ ಧ್ವಜ ನಮ್ಮನ್ನು ಕಾಪಾಡಿದೆ ಎಂದು ಉಕ್ರೇನ್ ನಿಂದ ದಾವಣಗೆರೆಗೆ ಮರಳಿರುವ ಮೆಡಿಕಲ್ ವಿದ್ಯಾರ್ಥಿ ಪ್ರವೀಣ್ ಬಾದಾಮಿ ಹೇಳಿದ್ದಾರೆ.
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಭಾನುಹಳ್ಳಿ ಗ್ರಾಮದ ಪ್ರವೀಣ್ ಬಾದಾಮಿಯವರು ಉಕ್ರೇನಿನಿಂದ ತಾಯ್ನಾಡಿಗೆ ಬಂದಿದ್ದಾರೆ. ಅಲ್ಲಿನ ಪರಿಸ್ಥಿತಿಗಳ ಬಗ್ಗೆ ಮಾತನಾಡಿದ್ದು, ಬಾಂಬ್ ಗಳ ದಾಳಿ ನಡೆಯುತ್ತಿದ್ದಾಗ ನಮಗೆ ತುಂಬಾ ಭಯವಾಗಿತ್ತು. ನವೀನ್ ಅಣ್ಣ ಸಾವನ್ನಪ್ಪಿದಾಗ ಭಯ ಇನ್ನಷ್ಟು ಜಾಸ್ತಿ ಆಯಿತು. ಆದರೂ ಭಾರತೀಯ ರಾಯಭಾರಿ ಕಚೇರಿಯವರು ನಮ್ಮನ್ನು ಸುರಕ್ಷಿತವಾಗಿ ಕರೆತಂದಿದ್ದಾರೆ. ಅದಕ್ಕೆ ಭಾರತ ಹಾಗೂ ಕರ್ನಾಟಕ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.
ಇತರೆ ದೇಶದ ವಿದ್ಯಾರ್ಥಿಗಳು ನಮ್ಮ ದೇಶದ ತಿರಂಗವನ್ನು ಹಿಡಿದು ಜೀವ ಉಳಿಸಿಕೊಂಡಿದ್ದು, ನಮ್ಮ ರಾಷ್ಟ್ರ ಧ್ವಜದ ಮೇಲೆ ಅಭಿಮಾನ ಇನ್ನಷ್ಟು ಹೆಚ್ಚುವಂತೆ ಮಾಡಿದೆ ಎಂದು ಇದೇ ವೇಳೆ ಅವರು ಹೇಳಿದ್ದಾರೆ.
ಓದಿ : ಪಂಚರಾಜ್ಯಗಳ ಮತ ಎಣಿಕೆ: ಯುಪಿಯಲ್ಲಿ ಬಿಜೆಪಿ 102 ಸ್ಥಾನಗಳಲ್ಲಿ ಮುನ್ನಡೆ