ETV Bharat / state

ಸಚಿವ ಸ್ಥಾನ ಲಾಬಿಗಾಗಿ ದೆಹಲಿಗೆ ತೆರಳಿಲ್ಲ, ಬದಲಾಗಿ ಹಳ್ಳಿ ಕಡೆ ಮುಖ ಮಾಡಿದ್ದೇನೆ : ರೇಣುಕಾಚಾರ್ಯ

ಅಧಿಕಾರಿಗಳೊಂದಿಗೆ ಹಳ್ಳಿ ಹಳ್ಳಿ ಸುತ್ತಿ ಜಂಟಿ ಸಮೀಕ್ಷೆ ನಡೆಸಿ ವರದಿ‌ ನೀಡುವಂತೆ ಸೂಚಿಸಿದರು. ನಾಳೆ ಅತಿವೃಷ್ಟಿ ಬಗ್ಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಲಿಸಲಿದ್ದಾರೆ. ವರದಿ ಪಡೆದು ಮುಖ್ಯಮಂತ್ರಿಯನ್ನು ಭೇಟಿ ಮಾಡಿ, ಅತಿವೃಷ್ಟಿ ಪೀಡಿತ ತಾಲೂಕು ಎಂದು ಘೋಷಣೆ ಮಾಡುವಂತೆ ಶಾಸಕ ರೇಣುಕಾಚಾರ್ಯ ಮನವಿ ಮಾಡಲಿದ್ದಾರೆ..

I did not go to Delhi for minister post lobby says renukacharya
ರೇಣುಕಾಚಾರ್ಯ
author img

By

Published : Aug 1, 2021, 3:08 PM IST

ದಾವಣಗೆರೆ : ನಾನು ಯಾವುದೇ ಕಾರಣಕ್ಕೂ ಸಚಿವ ಸ್ಥಾನಕ್ಕಾಗಿ ಲಾಬಿ ಮಾಡಿಲ್ಲ. ಲಾಬಿ ಮಾಡಲು ದೆಹಲಿಗೆ ತೆರಳುವ ಬದಲಿಗೆ ಹಳ್ಳಿ ಕಡೆ ಮುಖ ಮಾಡಿದ್ದೇನೆ ಎಂದು ಶಾಸಕ ಎಂ ಪಿ ರೇಣುಕಾಚಾರ್ಯ ತಿಳಿಸಿದರು.

ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಹತ್ತೂರು ಗ್ರಾಮದಲ್ಲಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಬಳಿಕ ಮಾತನಾಡಿದ‌ ಅವರು, ಸಚಿವ ಸ್ಥಾನವನ್ನು ದಾವಣಗೆರೆ ಜಿಲ್ಲೆಯ ಐದು ಜನ ಶಾಸಕರಲ್ಲಿ ಒಬ್ಬರಿಗೆ ನೀಡುವಂತೆ ವರಿಷ್ಠರಿಗೆ ಮನವಿ ಮಾಡಿದ್ದೇವೆ.

ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ನೂತನ ಸಿಎಂ ಬಸವರಾಜ್ ಬೊಮ್ಮಾಯಿಯವರ ಗಮನಕ್ಕೆ ತರಲಾಗಿದೆ. ಇನ್ನು, ಯಡಿಯೂರಪ್ಪನವರನ್ನು ಮಾಜಿ ಸಿಎಂ ಎಂದು ಕರೆಯಲ್ಲ ಎಂದು ತಿಳಿಸಿದರು.

ಪ್ರವಾಹ ಪ್ರದೇಶಗಳಿಗೆ ಭೇಟಿ : ಹೊನ್ನಾಳಿ ಶಾಸಕ ಎಂಪಿ ರೇಣುಕಾಚಾರ್ಯ ಸ್ವಕ್ಷೇತ್ರದಲ್ಲಿ ಅತಿವೃಷ್ಟಿ ಪೀಡಿತ ಪ್ರದೇಶಗಳ ಪ್ರವಾಸದಲ್ಲಿ ಬ್ಯೂಸಿಯಾಗಿದ್ದಾರೆ. ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನ ಅತಿವೃಷ್ಟಿಯಾಗಿರುವ ಪ್ರದೇಶಗಳಾದ ಮಾರಿಕೊಪ್ಪ, ಹತ್ತೂತು,ದೊಡ್ಡೇರಹಳ್ಳಿ, ಮಾದೇನಹಳ್ಳಿ ಸೇರಿ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಸರ್ಕಾರ ನಿಮ್ಮೊಂದಿಗೆ ಇದೆ ಎಂದು ಜನರಿಗೆ ಭರವಸೆ ನೀಡಿದರು.

ಅಧಿಕಾರಿಗಳೊಂದಿಗೆ ಹಳ್ಳಿ ಹಳ್ಳಿ ಸುತ್ತಿ ಜಂಟಿ ಸಮೀಕ್ಷೆ ನಡೆಸಿ ವರದಿ‌ ನೀಡುವಂತೆ ಸೂಚಿಸಿದರು. ನಾಳೆ ಅತಿವೃಷ್ಟಿ ಬಗ್ಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಲಿಸಲಿದ್ದಾರೆ. ವರದಿ ಪಡೆದು ಮುಖ್ಯಮಂತ್ರಿಯನ್ನು ಭೇಟಿ ಮಾಡಿ, ಅತಿವೃಷ್ಟಿ ಪೀಡಿತ ತಾಲೂಕು ಎಂದು ಘೋಷಣೆ ಮಾಡುವಂತೆ ಶಾಸಕ ರೇಣುಕಾಚಾರ್ಯ ಮನವಿ ಮಾಡಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.