ETV Bharat / state

ದಾವಣಗೆರೆಗೂ ಹಬ್ಬಿದ ಹಿಜಾಬ್ ವಿವಾದ: ಹೊನ್ನಾಳಿ ಕಾಲೇಜ್​ನಲ್ಲಿ ಪ್ರಾಂಶುಪಾಲರು-ವಿದ್ಯಾರ್ಥಿಗಳ ನಡುವೆ ವಾಗ್ದಾದ

ಹೊನ್ನಾಳಿ ತಾಲೂಕಿನ ಸರ್ಕಾರಿ ಪದವಿ ಕಾಲೇಜ್​ಗೆ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಆಗಮಿಸಿದ್ದರಿಂದ ಪ್ರಾಂಶುಪಾಲರು ಹಾಗೂ ವಿದ್ಯಾರ್ಥಿಗಳ​​ ನಡುವೆ ಕೆಲ ಕಾಲ ವಾಗ್ದಾದ ನಡೆಯಿತು.

ಹೊನ್ನಾಳಿ ಕಾಲೇಜ್​ನಲ್ಲಿ ಪ್ರಾಂಶುಪಾಲರು-ವಿದ್ಯಾರ್ಥಿಗಳ ನಡುವೆ ವಾಗ್ದಾದ

author img

By

Published : Feb 6, 2022, 1:05 PM IST

ದಾವಣಗೆರೆ: ಹಿಜಾಬ್ ವಿವಾದ ಇದೀಗ ದಾವಣಗೆರೆ ಜಿಲ್ಲೆಗೂ ಹಬ್ಬಿದೆ. ಹೊನ್ನಾಳಿ ತಾಲೂಕಿನ ಸರ್ಕಾರಿ ಪದವಿ ಕಾಲೇಜ್​ಗೆ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಆಗಮಿಸಿದ್ದರಿಂದ ಪ್ರಾಂಶುಪಾಲರು ಹಾಗೂ ಸ್ಟೂಡೆಂಟ್ಸ್​​ ನಡುವೆ ಕೆಲ ಕಾಲ ವಾಗ್ದಾದ ನಡೆಯಿತು.

ತರಗತಿಗೆ ಹಿಜಾಬ್ ಧರಿಸಿಕೊಂಡು ಬರುವುದನ್ನು ನಿಷೇಧಿಸುವಂತೆ ವಿದ್ಯಾರ್ಥಿಗಳು ಮನವಿ ಮಾಡಿದರು. 50 ವಿದ್ಯಾರ್ಥಿಗಳು ಸಹಿ ಮಾಡಿ ಹಿಜಾಬ್​ ಧರಿಸಿ ತರಗತಿಗಳಿಗೆ ಬರುವಂತಿಲ್ಲ, ಬುರ್ಖಾ ಧರಿಸಿ ಬಂದರೆ ನಾವು ಕೇಸರಿ ಶಾಲು ಹಾಕಿಕೊಂಡು ಬರುವುದಾಗಿ ಪ್ರಾಂಶುಪಾಲರಿಗೆ ಎಚ್ಚರಿಕೆ ನೀಡಿದ್ದಾರೆ. ಇದಲ್ಲದೇ, ಪ್ರಾಂಶುಪಾಲರಿಗೆ ಮನವಿ ಪತ್ರ ನೀಡುವಾಗಲೂ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿದ್ದ ದೃಶ್ಯ ಕಂಡುಬಂದಿತು.

ಹೊನ್ನಾಳಿ ಕಾಲೇಜ್​ನಲ್ಲಿ ಪ್ರಾಂಶುಪಾಲರು-ವಿದ್ಯಾರ್ಥಿಗಳ ನಡುವೆ ವಾಗ್ದಾದ

ಈ ವೇಳೆ ಗಲಾಟೆ ಬಿಟ್ಟು ವಾರ್ಷಿಕ ಪರೀಕ್ಷೆಗಳಿಗೆ ತಯಾರಾಗಿ ಎಂದು ವಿದ್ಯಾರ್ಥಿಗಳಿಗೆ ಪ್ರಾಂಶುಪಾಲರು ತಿಳಿ ಹೇಳಿದರು. ಉಡುಪಿ ಹಾಗೂ ದಕ್ಷಿಣ ಕನ್ನಡಕ್ಕೆ ಮಾತ್ರ ಸೀಮಿತವಾಗಿದ್ದ ಹಿಜಾಬ್ ವಿವಾದ, ಇದೀಗ ದಾವಣಗೆರೆಗೆ ಹಬ್ಬಿರುವುದು ಕಾಲೇಜು ಆಡಳಿತ ಮಂಡಳಿಗೆ ತಲೆಬಿಸಿಯಾಗಿ ಪರಿಣಮಿಸಿದೆ.

ಓದಿ: ಕಾಫಿನಾಡು ಚಿಕ್ಕಮಗಳೂರಿಗೆ ಮತ್ತೆ ಕಾಲಿಟ್ಟ ಹಿಜಾಬ್ ಗಲಾಟೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.